ಸೋಮವಾರ, ಏಪ್ರಿಲ್ 28, 2025
HomeBreakingVijay: ಕೊನೆಗೂ ಕಾನೂನಿಗೆ ತಲೆಬಾಗಿದ ನಟ …! ಐಷಾರಾಮಿ ಕಾರಿನ ಟ್ಯಾಕ್ಸ್ ಕಟ್ಟಿದ ವಿಜಯ್…!!

Vijay: ಕೊನೆಗೂ ಕಾನೂನಿಗೆ ತಲೆಬಾಗಿದ ನಟ …! ಐಷಾರಾಮಿ ಕಾರಿನ ಟ್ಯಾಕ್ಸ್ ಕಟ್ಟಿದ ವಿಜಯ್…!!

- Advertisement -

ಐಷಾರಾಮಿ ಕಾರು ಕೊಂಡು ಟ್ಯಾಕ್ಸ್ ಕಟ್ಟಲಾಗದೇ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ನಟ ವಿಜಯ್ ಕೊನೆಗೂ ಬುದ್ಧಿ ಕಲಿತಂತಿದ್ದು, ಕಾರಿನ ಟ್ಯಾಕ್ಸ್ ಕಟ್ಟಿ ಮರ್ಯಾದೆ ಉಳಿಸಿಕೊಂಡು ಕಾನೂನು ಕ್ರಮದಿಂದ ಬಚಾವಾಗಿದ್ದಾರೆ.

2012 ರಲ್ಲಿ ನಟ ವಿಜಯ್ ವಿದೇಶದಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ತರಿಸಿಕೊಂಡಿದ್ದರು. ವಿದೇಶದಿಂದ ಕಾರು ತರಿಸಿಕೊಂಡ ಪರಿಣಾಮ ವಿಜಯ್ ಕಾರಿಗೆ ಎಂಟ್ರಿ ಟ್ಯಾಕ್ಸ್ ಕಟ್ಟಬೇಕಿತ್ತು. ಆದರೆ ಈ ಟ್ಯಾಕ್ಸ್ ವಿನಾಯ್ತಿ ಕೋರಿದ ವಿಜಯ್ ಹೈಕೋರ್ಟ್ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ನಟನ ವಿರುದ್ಧ ಗರಂ ಆಗಿದ್ದಲ್ಲದೇ ಟ್ಯಾಕ್ಸ್ ಕಟ್ಟದೇ ಇರುವ ಮನಸ್ಥಿತಿ ದೇಶವಿರೋಧಿಯದ್ದಾಗಿದೆ ಎಂದಿದ್ದರು. ಅಲ್ಲದೇ 1 ಲಕ್ಷ ರೂಪಾಯಿ ದಂಡ ವಿಧಿಸಿ ಟ್ಯಾಕ್ಸ್ ಕಟ್ಟುವಂತೆ ಆದೇಶಿಸಿದ್ದರು.

ಆದರೆ ನ್ಯಾಯಾಲಯದ ಆದೇಶದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದ ನಟ ವಿಜಯ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ದ್ವಿಸದಸ್ಯ ಪೀಠವೂ ಸಂಪೂರ್ಣ ತೆರಿಗೆ ಪಾವತಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ವಿಜಯ್ 40 ಲಕ್ಷ ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾರೆ.

ವಿಜಯ್ ಬಳಿಕ ನಟ ಧನುಷ್ ಕೂಡ 2015 ರಲ್ಲಿ ತಾವು ಖರೀದಿಸಿದ ದುಬಾರಿ ಕಾರಿನ  ಟ್ಯಾಕ್ಸ್ ರಿಯಾಯ್ತಿ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಜಯ್ ಪ್ರಕರಣದ ಬಳಿಕ ಅರ್ಜಿ ಹಿಂಪಡೆಯಲು ಪ್ರಯತ್ನಿಸಿದರೂ ನ್ಯಾಯಾಲಯ ಅದಕ್ಕೆ ಸಮ್ಮತಿ ನೀಡಿಲ್ಲ.  

RELATED ARTICLES

Most Popular