Theatres :ಸದ್ಯಕ್ಕೆ ತುಂಬಲ್ಲ ಥಿಯೇಟರ್….! ಸಂಕಷ್ಟದಲ್ಲಿ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು…!!

ಕೊರೋನಾ ಸಂಕಷ್ಟ ಮುಗಿಯುವ ಲಕ್ಷಣವೇ ಇಲ್ಲ.ಎರಡನೇ ಅಲೆ ತಗ್ಗುತ್ತಿದ್ದಂತೆ ಮೂರನೇ ಅಲೆಯ ಅಬ್ಬರ ಜೋರಾಗಿದ್ದು, ಹೀಗಾಗಿ ಥಿಯೇಟರ್ ಗಳಲ್ಲಿ 100 ಕ್ಕೆ 100 ಪ್ರವೇಶಾವಕಾಶ ಸದ್ಯಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ತೆರೆಗೆ ಬರಬೇಕಿದ್ದ ಬಿಗ್ ಬಜೆಟ್ ಸಿನಿಮಾಗಳು ಸಂಕಷ್ಟಕ್ಕಿಡಾಗಿವೆ.

ಕೊರೋನಾ ಎರಡನೇ ಅಲೆ ಬಳಿಕ ಥಿಯೇಟರ್ ಗಳಿಗೆ 100 ಕ್ಕೆ 100 ರಷ್ಟು ಪ್ರೇಕ್ಷಕರ ಪ್ರವೇಶಾವಕಾಶ ಸಿಗುವ ಮುನ್ಸೂಚನೆ ಸಿಕ್ಕಿತ್ತು. ಹೀಗಾಗಿ ದುನಿಯಾ ವಿಜಿ ಸೇರಿದಂತೆ ಸ್ಟಾರ್ ನಟರು ತಮ್ಮ ಬಹುನೀರಿಕ್ಷಿತ ಸಿನಿಮಾಗಳನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದರು. ಸಲಗ ಸೇರಿದಂತೆ ಹಲವು ಸಿನಿಮಾಗಳ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿತ್ತು.

ಆದರೆ ಮತ್ತೊಮ್ಮೆ ಕೇರಳ,ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಕೊರೋನಾ ಸಂಕಷ್ಟ ಉಲ್ಬಣಿಸಿದ್ದು, ಇದರಿಂದಾಗಿ ಮತ್ತೆ ರಾಜ್ಯದ ಗಡಿ ಪ್ರದೇಶ ಸೇರಿದಂತೆ ಎಲ್ಲೆಡೆ ಹಲವು ನಿರ್ಬಂಧ ಹೇರಲಾಗುತ್ತಿದೆ. ಹೀಗಾಗಿ ಸದ್ಯ ಥಿಯೇಟರ್ ಗಳಲ್ಲಿ 100 ಕ್ಕೆ 100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡೋದು ಅನುಮಾನ ಎನ್ನಲಾಗ್ತಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ನೇತೃತ್ವದಲ್ಲಿ ನಿಯೋಗ ಸಿಎಂ ಭೇಟಿ ಮಾಡಿ 100 ಕ್ಕೆ 100 ರಷ್ಟು ಪ್ರವೇಶಾವಕಾಶ ನೀಡುವಂತೆ ಮನವಿ ಸಲ್ಲಿಸಿದೆ. ಆದರೆ ಸಿಎಂ ತಜ್ಞರ ಜೊತೆ ಚರ್ಚಿಸಿ ತೀರ್ಮಾನಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಸದ್ಯ ತಿಂಗಳಾಂತ್ಯದವರೆಗೆ ಥಿಯೇಟರ್ ಬಾಗಿಲು ಪೂರ್ತಿ ತೆರೆಯೋದು ಸಾಧ್ಯವಿಲ್ಲ.

ಹೀಗಾಗಿ ದುನಿಯಾ ವಿಜಯ್ ಸಲಗ, ದೊಡ್ಮನೆ ಮೊಮ್ಮಗಳು ಧನ್ಯ ರಾಮ್ ಕುಮಾರ್ ನಟನೆಯ ನಿನ್ನ ಸನಿಹಕೆ  ಹಾಗೂ ಶಿವಣ್ಣನ ಭಜರಂಗಿ-2 ಸಿನಿಮಾಗಳು ಪ್ರೇಕ್ಷಕರ ಕೊರತೆ ಎದುರಿಸೋದು ಖಚಿತವಾಗಿದ್ದು, ಚಿತ್ರರಂಗದ ಸಿನಿಮಾಗಳ ಭವಿಷ್ಯವೇ ಡೋಲಾಯಮಾನ ಸ್ಥಿತಿ ತಲುಪಿದೆ.

Comments are closed.