ಭಾನುವಾರ, ಏಪ್ರಿಲ್ 27, 2025
HomeBreakingಮತ್ತೊಮ್ಮೆ ಜಾರಿಯಾಯ್ತು ಕೊರೋನಾ ಹಾವಳಿ…! ಮಾರ್ಚ್ 13 ರಿಂದ 31 ರವರೆಗೆ ಲಾಕ್ ಡೌನ್…!!

ಮತ್ತೊಮ್ಮೆ ಜಾರಿಯಾಯ್ತು ಕೊರೋನಾ ಹಾವಳಿ…! ಮಾರ್ಚ್ 13 ರಿಂದ 31 ರವರೆಗೆ ಲಾಕ್ ಡೌನ್…!!

- Advertisement -

ಮಹಾರಾಷ್ಟ್ರ: ಮತ್ತೊಮ್ಮೆ ಮಾರಕ ಕೊರೋನಾ ಸಂಕಷ್ಟಕ್ಕೆ ತುತ್ತಾಗಿರುವ ಮಹಾರಾಷ್ಟ್ರ ರೋಗ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಥಾನೆ ನಗರದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಯಾಗಿದೆ. ಕೊರೋನಾ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಥಾನೆ ನಗರದ 11 ಹಾಟ್ ಸ್ಪಾಟ್ ಗಳಲ್ಲಿ ಮಾರ್ಚ್ 13 ರಿಂದ 31 ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ.

ಕಳೆದ ಹಲವು ದಿನಗಳಿಂದ ಥಾನೆ ನಗರದ 11 ಸ್ಥಳಗಳಲ್ಲಿ ಸತತವಾಗಿ ಕೊರೋನಾ ಪೀಡಿತರ ಸಂಖ್ಯೆ ಏರುತ್ತಲೇ ಇರೋದರಿಂದ  ಅನಿವಾರ್ಯವಾಗಿ  ಲಾಕ್ ಡೌನ್ ಜಾರಿಮಾಡಲಾಗಿದೆ ಎಂದು ಥಾನೆ ನಗರ ಪಾಲಿಕೆ ಆಯುಕ್ತ ವಿಪಿನ್ ಶರ್ಮಾ ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದಾಗ ಯಾವೆಲ್ಲ ರೀತಿಯ ನಿರ್ಬಂಧಗಳು ಜಾರಿಯಲ್ಲಿದ್ದವೋ ಅವೆಲ್ಲವೂ ಈಗಲೂ ಜಾರಿಯಾಗಲಿದೆ ಎಂದು ವಿಪಿನ್ ಶರ್ಮಾ ವಿವರಣೆ ನೀಡಿದ್ದಾರೆ.

ಕೊರೋನಾ ಆರಂಭವಾದಾಗಿನಿಂದಲೂ ಮಹಾರಾಷ್ಟ್ರದಲ್ಲಿ ಸೋಂಕು ಪೀಡಿತರ ಸಂಖ್ಯೆ ಏರುತ್ತಲೇ ಇತ್ತು. ಹೀಗಾಗಿ ಕಠಿಣವಾದ ಲಾಕ್ ಡೌನ್ ಜಾರಿ ಮಾಡಲಾಗಿತ್ತು.

https://kannada.newsnext.live/sandalwood-yash-rockingstar-puspha-yashmother-landproblem/

ಆದರೆ ಈಗ ಎರಡನೇ ಅಲೆಯಲ್ಲೂ ಲಾಕ್ ಡೌನ್ ಅನಿವಾರ್ಯವಾಗಿದೆ. ಥಾನೆಯೊಂದರಲ್ಲೇ ಅಂದಾಜು 2 ಲಕ್ಷದ 69 ಸಾವಿರದ 845 ಜನರು ಸೋಂಕು ಪೀಡಿತರಾಗಿದ್ದು, ಈ ಪೈಕಿ 6302 ಜನರು ಸಾವಿಗೀಡಾಗಿದ್ದಾರೆ.

RELATED ARTICLES

Most Popular