Vijay Kiragandur:ಹುಟ್ಟೂರಿನ ಕೊರೋನಾ ಸಂಕಷ್ಟಕ್ಕೆ ಮಿಡಿದ ನಿರ್ಮಾಪಕ….! ವಿಜಯ್ ಕಿರಂಗದೂರು ಮಾನವೀಯತೆಗೆ ಶ್ಲಾಘನೆ…!!

ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ನಿರ್ಮಾಪಕ ವಿಜಯ್ ಕಿರಂಗದೂರು ಇದೀಗ ತಮ್ಮ ಮಾನವೀಯತೆಯಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡ ವಿಜಯ್ ಕಿರಂಗದೂರು ಇದೀಗ ಹುಟ್ಟೂರಿಗೆ ನೆರವಾಗುವ ಮೂಲಕ ಗಮನ ಮಾನವೀಯತೆ ಮೆರೆದಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದಂತಹ ಕೆಜಿಎಫ್ ಸಿನಿಮಾ ನಿರ್ಮಿಸಿದ ವಿಜಯ್ ಕಿರಂಗದೂರು ಮಂಡ್ಯದ ವಿಮ್ಸ್  ಜಿಲ್ಲಾಸ್ಪತ್ರೆಯಲ್ಲಿ  ಆಕ್ಸಿಜನ್ ಘಟಕವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ  ಆಕ್ಸಿಜನ್ ಸಹಿತ 50 ಬೆಡ್ ಗಳನ್ನು ಜನತೆಗೆ ಸಿಗುವಂತೆ ಮಾಡಿದ್ದಾರೆ.

ಕೊರೋನಾದಿಂದ ಸಂಕಷ್ಟಕ್ಕೊಳಗಾದ ಮಂಡ್ಯದ ಜನತೆಗೆ ಯಾವುದೇ ತೊಂದರೆಗಳಾಗಬಾರದು ಎಂಬ ಕಾರಣಕ್ಕೆ  2.35 ಕೋಟಿ ವೆಚ್ಚದಲ್ಲಿ ವಿಜಯ್ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಮಾನಿಟರ್ ಹಾಗೂ ಆಕ್ಸಿಜನ್  ವೆಂಟಿಲೇಟರ್ ಸೌಲಭ್ಯವನ್ನು ವಿಜಯ್ ಒದಗಿಸಿದ್ದು, ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್  ಚಾಲನೆ ನೀಡಿದ್ದಾರೆ.

ಇದಕ್ಕೂ ಮೊದಲು ವಿಜಯ್ ಕಿರಂಗದೂರು ತಮ್ಮ ಹೊಂಬಾಳೆ ಫಿಲ್ಮ್ಸ್  ಸಿಬ್ಬಂದಿಗಳಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಿದ್ದರು. ಇದೀಗ ಹುಟ್ಟೂರಿಗೆ ನೆರವಾಗಿದ್ದಾರೆ.

ಕೆಜಿಎಫ್ ನಿರ್ಮಿಸಿ ಹೆಸರು ಗಳಿಸಿದ್ದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಯುವರತ್ನ ನಿರ್ಮಿಸಿದ್ದು, ಕೆಜಿಎಫ್-2 ಕೂಡಾ ರಿಲೀಸ್ ಗೆ ಸಿದ್ಧವಾಗಿದೆ. ವಿಜಯ್ ಮಾನವೀಯತೆಗೆ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

Comments are closed.