ಮಂಗಳೂರು : ಸ್ಯಾಲರಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲಸ ಗಾರರ ನಡುವೆ ವಾಗ್ವಾದ ನಡೆಯುತ್ತಿತ್ತು. ಈ ವೇಳೆಯಲ್ಲಿ ಅಪ್ಪನ ಬಳಿಯಲ್ಲಿದ್ದ ಬಂದೂಕಿನಿಂದ ಮಗನ ಮೇಲೆ ಗುಂಡು ಸಿಡಿದ ಘಟನೆ ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿಯಲ್ಲಿ ನಡೆದಿದೆ.

ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೋ ಲಿಮಿಟೆಡ್ ಮಾಲೀಕನಾಗಿರುವ ರಾಜೇಶ್ ಪ್ರಭು ಎಂಬವರಿಂದ ಫೈರಿಂಗ್. ಮಗ ಸುಧೀಂದ್ರ ಪ್ರಭು (14 ವರ್ಷ) ಎಂಬಾತನೇ ಫೈರಿಂಗ್ ನಿಂದ ಗಾಯಗೊಂಡ ಬಾಲಕ. ಗಂಭೀರವಾಗಿ ಗಾಯಗೊಂಡಿರುವ ಸುಧೀಂದ್ರ ಪ್ರಭುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ : ಮಂಗಳೂರು : ಮದ್ಯಪಾನಕ್ಕೆ ಹಣ ನಿರಾಕರಿಸಿದ್ದಕ್ಕೆ ಸ್ನೇಹಿತನ ಹತ್ಯೆ : 7 ತಿಂಗಳ ಬಳಿಕ ಆರೋಪಿ ಅರೆಸ್ಟ್

ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ವೇತನ ಕೇಳುವ ಸಲುವಾಗಿ ಬಂದಿದ್ದರು. ಈ ವೇಳೆಯಲ್ಲಿ ಮಾಲೀಕ ಹಾಗೂ ನೌಕರನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆಯಲ್ಲಿ ಸಿಟ್ಟಾದ ರಾಜೇಶ್ ಫ್ರಭು ತನ್ನ ಬಳಿಯಲ್ಲಿದ್ದ ಗನ್ ತೆಗೆದು ಫೈಯರ್ ಮಾಡಿದ್ದಾರೆ. ಗುಂಡು ನೇರವಾಗಿ ರಾಜೇಶ್ ಪ್ರಭು ಮಗನ ತಲೆಗೆ ತಾಗಿದೆ. ಇದರಿಂದಾಗಿ ಕೆಲಸಗಾರ ಬಚಾವಾಗಿದ್ದಾನೆ.

ಫೈರಿಂಗ್ ಸದ್ದು ಕೇಳುತ್ತಿದ್ದಂತೆಯೇ ಜನರು ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೋ ಕಂಪೆನಿಯ ಬಳಿಗೆ ಓಡಿ ಬಂದಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !
(Firing of father from son in Mangalore)