Sanjana Garlani : ಓಲಾ ಡ್ರೈವರ್‌ ಜೊತೆ ನಟಿ ಸಂಜನಾ ಗಲ್ರಾನಿ ಕಿರಿಕ್‌

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸಂಜನಾ ಗಲ್ರಾನಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಶೂಟಿಂಗ್‌ಗೆ ತೆರಳುವ ವೇಳೆಯಲ್ಲಿ ಓಲಾ ಚಾಲಕನ ಜೊತೆಗೆ ಸಂಜನಾ ಕಿರಿಕ್‌ ಮಾಡಿಕೊಂಡಿದ್ದು, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಇಂದಿರಾನಗರಿಂದ ಕೆಂಗೇರಿಗೆ ಹೋಗಲು ಓಲಾ ಬುಕ್‌ ಮಾಡಬೇಕಾಗಿತ್ತು. ಆದರೆ ನಟಿ ಸಂಜನಾ ಆರ್‌ಆರ್‌ ನಗರಕ್ಕೆ ಬುಕ್‌ ಮಾಡಿದ್ದಾರೆ. ಪಿಕಪ್‌ ಮಾಡಲು ಬಂದಿದ್ದ ಓಲಾ ಡ್ರೈವರ್‌ ಬಳಿಯಲ್ಲಿ ತನ್ನ ಡ್ರಾಪ್‌ ಪಾಯಿಂಟ್‌ ಆರ್‌ಆರ್‌ ನಗರ ಅಲ್ಲಾ ಕೆಂಗೇರಿ ಎಂದು ಹೇಳಿದ್ದಾರೆ. ಕೂಡಲೇ ಡ್ರೈವರ್‌ ಡ್ರಾಪ್‌ ಪಾಯಿಂಟ್‌ ಚೇಂಜ್‌ ಮಾಡುವಂತೆ ವಿನಂತಿಸಿದ್ದಾರೆ.

ಆದರೆ ಈ ವೇಳೆಯಲ್ಲಿ ಲೋಕೇಷನ್‌ ಬದಲಾಯಿಸಲು ಒಪ್ಪದ ನಟಿ ಸಂಜನಾ ಡ್ರೈವರ್‌ ಜೊತೆಗೆ ಕ್ಯಾತೆಗೆ ತೆಗೆದಿದ್ದಾರೆ. ಲೊಕೇಷನ್‌ ಬದಲಾಯಿಸಲು ಹೇಳಿದ ತಪ್ಪಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ದೂರು ನೀಡಿದ್ದಾರೆ.

ಇನ್ನೊಂದೆಡೆಯಲ್ಲಿ ನಟಿ ಸಂಜನಾ ತಾನು ಕಾರಿನಲ್ಲಿ ಎಸಿ ಹೆಚ್ಚು ಮಾಡುವಂತೆ ಚಾಲಕನ ಬಳಿಯಲ್ಲಿ ಹೇಳಿದ್ದೆ. ಆದರೆ ಎಸಿ ಹೆಚ್ಚಳ ಮಾಡದೆ ತನ್ನ ಜೊತೆಗೆ ಜಗಳವಾಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಇನ್ನು ಕಾರಿನಲ್ಲಿ ಏನೆಲ್ಲಾ ನಡೆದಿದೆ ಅನ್ನೋ ಕುರಿತು ಡ್ರೈವರ್‌ ವಿಡಿಯೋ ಶೂಟಿಂಗ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ದಿನಕ್ಕೆ 16 ಮಾತ್ರೆ ತೆಗೆದುಕೊಳ್ಳುತ್ತಿದ್ದೆ: ತಮ್ಮ ಪ್ರಕರಣಕ್ಕೆ ತಾವೇ ಟ್ವಿಸ್ಟ್ ಕೊಡೋ ಯತ್ನ ಮಾಡ್ತಿದ್ದಾರಾ ಸಂಜನಾ?

ಕನ್ನಡದ ಗಂಡ ಹೆಂಡತಿ ಸಿನಿಮಾದ ಮೂಲಕ ಬಹು ಖ್ಯಾತಿಯನ್ನು ಗಳಿಸಿದ್ದ ಸಂಜನಾ ಗಲ್ರಾನಿ ಇತ್ತೀಚಿಗಷ್ಟೇ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿ ಬಿಡುಗಡೆಯಾಗಿದ್ದರು. ತದನಂತರ ಇದೀಗ ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಜನಾ ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಕಿರಿಕ್‌ ಮಾಡಿಕೊಂಡಿದ್ದರು ಅನ್ನೋ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : ಡಿಂಪಲ್ ಕ್ವೀನ್ ಜನ್ಮದಿನದಂದು ಶಬರಿ ಸೆರ್ಚಿಂಗ್ ಫಾರ್ ರಾವಣ’ ಪೋಸ್ಟರ್ ರಿವೀಲ್

( Sandalwood Actress Sanjana Galrani clash with Ola Driver )

Comments are closed.