Maranakatte Jatre : ಸಾಮಾನ್ಯವಾಗಿ ದೇವಾಲಯ ಅಂದ್ರೆ ಅದು ದೇವರು ನೆಲೆಸಿರೋ ಸ್ಥಳ. ರಾಕ್ಷಸರನ್ನು ಸಂಹಾರ ಮಾಡಿ ಅಥವಾ ಭಕ್ತರ ಕೊರಿಕೆಗೆ ಕಿವಿಗೊಟ್ಟೋ ಬಂದು ದೇವರು ಇಲ್ಲಿ ನೆಲೆಸಿರುತ್ತಾನೆ . ಆದ್ರೆ ಈ ದೇವಾಲಯದಲ್ಲಿ ಮಾತ್ರ ರಾಕ್ಷಸನೊಬ್ಬ ದೇವರಾಗಿ ನೆಲೆ ನಿಂತು ಭಕ್ತರನ್ನು ಕಾಯುತ್ತಿದ್ದಾನೆ. ಹೌದು ಕರಾವಾಳಿಯಲ್ಲಿರುವ ಈ ದೇವಾಲಯ ಅಚ್ಚರಿಗಳ ಬೀಡು. ಇಲ್ಲಿ ಒಂದು ಬಾರಿ ಬೇಡಿಕೊಂಡರೆ ಆಗದು ಅನ್ನೋ ಮಾತೇ ಇಲ್ಲ.

ಇದು ಕರಾವಳಿ ಭಾಗದಲ್ಲಿರುವಂತಹ ಅತ್ಯಂತ ಪ್ರಸಿದ್ಧ ದೇವಸ್ಥಾನ. ಮಾರಣಕಟ್ಟೆ ಹೆಸರಿನಲ್ಲಿ ಕರೆಸಿಕೊಳ್ಳುವ ಈ ದೇವಸ್ಥಾನಕ್ಕೆ ಕೊಲ್ಲೂರು ದೇವಾಲಯದ ನಂಟಿದೆ. ಅಲ್ಲಿನ ತಾಯಿಯೇ ಇಲ್ಲಿಯೂ ಭಕ್ತರನ್ನು ಕಾಯುತ್ತಿದ್ದಾಳೆ . ಹೌದು ಇಲ್ಲಿಗೆ ಮಾರಣ ಕಟ್ಟೆ ಅಂತ ಹೆಸರು ಬರೋಕು ಇದೇ ಕಾರಣ ಎನ್ನಬಹುದು. ಇದು ಮೊದಲು ಮಹಾ ರಣ ಕಟ್ಟೆ ಅಂತ ಕರೆಸಿಕೊಳ್ಳುತ್ತಿತ್ತು. ಮುಂದೆ ಇದೆ ಮಾರಣಕಟ್ಟೆ ಆಯಿತು ಅಂತ ಭಕ್ತರು ಹೇಳುತ್ತಾರೆ .
ಇದರ ಸ್ಥಳ ಪುರಾಣಕ್ಕೆ ಬರೋದಾದ್ರೆ , ಪುರಾಣ ಕಾಲದಲ್ಲಿ ಕಂಬಾಸುರ ಅನ್ನೋ ರಾಕ್ಷಸನಿದ್ದ ಆತ ಮರಣವೇ ಬರದಂತೆ ವರ ಕೇಳಲು ಬ್ರಹ್ಮನನ್ನು ತಪ್ಪಸ್ಸು ಮಾಡಿದ. ಆಗ ವಾಗ್ದೇವಿಯಾದ ಸರಸ್ವತಿಯು ಆತನ್ನು ಮೂಕನನ್ನಾಗಿ ಮಾಡಿದಳು , ಅಂದಿನಿಂದ ಆತ ಮೂಕಾಸುರನಾದ ಮುಂದೆ ದೇವರ ಅನುಗ್ರಹದಿಂದ ಮಾತು ಬಂತಾಯಿತಾದರೂ ಮತ್ತೆ ತಪಸ್ಸು ಮಾಡಿ ಸ್ತ್ರೀಯಿಂದ ಮಾತ್ರ ಮರಣ ಬರುವಂತೆ ವರ ಬೇಡಿದನಂತೆ.

ಅದಕ್ಕಾಗಿಯೇ ತಾಯಿ ಮೂಕಾಂಬಿಕೆಯು ಲಕ್ಷ್ಮೀ , ಸರಸ್ವತಿ, ದುರ್ಗಾ ತ್ರಿಶಕ್ತಿ ಪೂರ್ಣೆಯಾಗಿ ಮೂಕಾಸುರನನ್ನು ಸಂಹಾರ ಮಾಡಿದಳು . ಆ ಯುದ್ಧ ನಡೆದದ್ದು ಇಲ್ಲೇ ಅಂತಲೂ ರಾಕ್ಷಸನನ್ನು ಸಂಹರಿಸಿ ಮುಂದೇ ಕೊಲ್ಲೂರಲ್ಲಿ ನೆಲೆಸಿದಳು ಅಂತನೂ ಮಾತಿದೆ. ಇನ್ನು ಇದೇ ವೇಳೆ ತನ್ನ ತಪ್ಪಿನ ಅರಿವಾಗಿ ಮೂಕಾಸುರ ಮುಕ್ತಿ ನೀಡುವಂತೆ ಬೇಡಿದಾಗ ಆತನಿಗೆ ಮುಕ್ತಿ ಸಿಗುವ ತನಕ ಬ್ರಹ್ಮಶಿಲೆಯಾಗಿ ನೆಲೆನಿಂತು ಭಕ್ತರನ್ನು ಕಾಯುವಂತೆ ಹೇಳಿದಳು ಅದೇ ಮೂಕಾಸುರ ಇಲ್ಲಿ ಇಂದಿಗೂ ಬ್ರಹ್ಮಲಿಂಗೇಶ್ವರನಾಗಿ ನೆಲೆಸಿದ್ದಾನೆ ಅಂತಾರೆ ಇಲ್ಲಿನ ಭಕ್ತರು.
ಇದನ್ನೂ ಓದಿ : ಕೋಟ ಅಮೃತೇಶ್ವರಿ ದೇವಾಲಯದಲ್ಲಿ ಜಾತ್ರೆಯ ಸಂಭ್ರಮ – ಮಕ್ಕಳಿಲ್ಲದವರಿಗೆ ಮಡಿಲು ತುಂಬುತ್ತಾಳೆ ಹಲವು ಮಕ್ಕಳತಾಯಿ
ಇನ್ನು ಇಲ್ಲಿ ಶ್ರೀಚಕ್ರ ಹಾಗೂ ಶಿವ ಶಕ್ತಿ ಜೊತೆ ಬ್ರಹ್ಮಲಿಂಗೇಶ್ವರ ನೆಲೆ ನಿಂತಿದ್ದಾನೆ. ಸ್ವತಹಃ ಶ್ರೀ ಶಂಕರಾಚಾರ್ಯರೇ ಈ ದೇವಾಲಯ ಸ್ಥಾಪಿಸಿದ್ರು ಅನ್ನೋ ನಂಬಿಕೆ ಇದೆ. ಕೊಲ್ಲೂರಿನಲ್ಲಿ ದೇವಾಲಯ ಪ್ರತಿಷ್ಠಾಪಿಸಿದ ನಂತರ ಇಲ್ಲಿಗೆ ಬಂದು ಶ್ರೀ ಚಕ್ರ ಹಾಗೂ ಶಿವಶಕ್ತಿಯನ್ನು ಬ್ರಹ್ಮಲಿಂಗೇಶ್ವನಲ್ಲಿ ಪ್ರತಿಷ್ಠಾಪಿಸಿದ್ರಂತೆ. ಇನ್ನು ಬ್ರಹ್ಮಲಿಂಗೇಶ್ವರನ ಶಕ್ತಿಯ ಬಗ್ಗೆ ಹೇಳೋದಾದ್ರೆ ಇಲ್ಲಿ ಬೇಡಿಕೊಂಡರೆ ಆಗದಿರುವ ಮಾತೇ ಇಲ್ಲ.
ರಂಗ ಪೂಜೆಯನ್ನು ಅಥವಾ ಯಕ್ಷಗಾನವನ್ನು ಹರಕೆ ರೂಪದಲ್ಲಿ ಇಲ್ಲಿ ನೆರೆವೇರಿಸಲಾಗುತ್ತೆ . ದಿನದಲ್ಲಿ ಅತ್ಯಧಿಕ ರಂಗ ಪೂಜೆ ಆಗುವಂತಹ ದೇವಾಲಯ ಅಂದ್ರೂ ತಪ್ಪಾಗಲ್ಲ . ಇಲ್ಲಿ ಸಣ್ಣದಾದ ಬ್ರಹ್ಮಕುಂಡ ಒಂದಿದೆ. ಬ್ರಹ್ಮಕುಂಡದಲ್ಲಿದ್ದ ನೀರು ತಲೆಗೆ ಪ್ರೋಕ್ಷಣೆಯನ್ನು ಮಾಡುವುದರಿಂದ ಭಕ್ತರ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಅನೇಕರು ಹೇಳುತ್ತಾರೆ. ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಹೂವು ಎಂದರೆ ತುಂಬಾ ಪ್ರಿಯವಂತೆ. ಸೇವಂತಿಗೆ ಹೂವಿನ ಅಲಂಕಾರದಲ್ಲಿ ಬ್ರಹ್ಮಲಿಂಗೇಶ್ವರನನ್ನು ನೋಡುವುದೇ ಒಂದು ಚೆಂದ.
ಇದನ್ನೂ ಓದಿ : ನಿಗೂಢಗಳ ಬೀಡು ಈ ದೇವಾಲಯ; ಇಲ್ಲಿ ಮಿಡಿಯುತ್ತೆ ಕೃಷ್ಣನ ಜೀವಂತ ಹೃದಯ
ಇನ್ನು ಈ ಇಲ್ಲಿನ ಮೂರ್ತಿ ಬಗ್ಗೆ ಹೇಳೋದಾದ್ರೆ , ಇದನ್ನು ಹಲಸಿನ ಮರದಿಂದ ತಯಾರು ಮಾಡಲಾಗಿ ಪ್ರತಿ ವರ್ಷ ಈ ಮೂರ್ತಿಯನ್ನು ತೆಗೆದು ಅದಕ್ಕೆ ಬಣ್ಣ ಬಳಿದು ಮತ್ತೆ ಪ್ರತಿಷ್ಠಾಪನೆ ಮಾಡಲಾಗುತ್ತೆ. ಅದನ್ನು ಸಂಕ್ರಾತಿಯಂದೇ ಮಾಡುವುದು ವಿಶೇಷ . ಸಾಮಾನ್ಯವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಕಲಾಪೂಜೆಯನ್ನು ಮಾಡುವ ರೂಡಿ ಇರುತ್ತೆ. ಆದ್ರೆ ಇಲ್ಲಿ ಮಾತ್ರ ಅದ್ಯಾವುದೂ ಇಲ್ಲದೆ ಪ್ರತಿಷ್ಠಾಪನೆ ನಡೆಯುತ್ತೆ .

ಅದೇ ದಿನ ಅದ್ದೂರಿ ಯಾಗಿ ಜಾತ್ರೆಯನ್ನು ಮಾಡಲಾಗುತ್ತೆ. ಈ ಬಾರಿಯೂ ಸಂಕ್ರಾತಿಯಂದೇ ಉತ್ಸವ ನಡೆಯಲಿದೆ. ಇನ್ನು ಬ್ರಹ್ಮಲಿಂಗೇಶ್ವರನ ಜೊತೆಗೆ ಇಬ್ಬರು ಯಕ್ಷಿಯರ ವಿಗ್ರಹ ವಿದ್ದು , ಅವರನ್ನು ವಾತ ಯಕ್ಷಿ, ಮಲಯಾಳಿ ಯಕ್ಷಿ ಎಂದು ಕರೆಯುತ್ತಾರೆ.
ಇದನ್ನೂ ಓದಿ : ಅಯೋಧ್ಯೆಯಲ್ಲಿ ಕರ್ನಾಟಕ ಭವನ : ಯಾತ್ರಿಕರಿಗೊಂದು ಸಿಹಿಸುದ್ದಿ
ಅಂದಹಾಗೆ ಈ ಕ್ಷೇತ್ರ ಕುಂದಾಪುರದಿಂದ 25 ಕಿ.ಮೀ. ಉಡುಪಿಯಿಂದ 60 ಕಿ.ಮೀ. ದೂರದಲ್ಲಿದ್ದು, ಕೊಲ್ಲೂರು ಹಾಗೂ ಕುಂದಾಪುರಕ್ಕೆ ಹೋಗುವ ದಾರಿಯಲ್ಲಿ ಮದ್ಯದಲ್ಲಿ ಇದೆ. ಇನ್ನು ಈ ಮಾರಣ ಕಟ್ಟೆ ಇರುವ ಊರನ್ನು ಕಂಚಿನ ಕೊಡ್ಲು ಅಂತನೂ ಕರೆಯುತ್ತಾರೆ . ಇಲ್ಲಿ ಜಾತ್ರೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ ಎನ್ನೋದು ವಿಶೇಷ .
ಮಾರಣಕಟ್ಟೆ ಜಾತ್ರೆಯಲ್ಲಿ ವೀಕ್ಷಿಸಿ :
ಮಾರಣಕಟ್ಟೆ ಕೆಂಡಸೇವೆ :
ಮಾರಣಕಟ್ಟೆ ಮಂಡಲೋತ್ಸವ :
Maranakatte Jatre Miracle of Brahmalingeshwara