ನಿಗೂಢಗಳ ಬೀಡು ಈ ದೇವಾಲಯ; ಇಲ್ಲಿ ಮಿಡಿಯುತ್ತೆ ಕೃಷ್ಣನ ಜೀವಂತ ಹೃದಯ

Puri Jagannath Temple : ಇಲ್ಲಿನ ನಿಗೂಢದಲ್ಲಿ ಮೊದಲಿನ ಸಾಲಲ್ಲಿ ನಿಲ್ಲೋದೇ ಇಲ್ಲಿನ ಬ್ರಹ್ಮ ಪದಾರ್ಥ. ಹೌದು , ಪುರಿಯ ಜಗನ್ನಾಥನ ಹೃದಯ ಭಾಗದಲ್ಲಿ ಒಂದು ವಸ್ತುವನ್ನು ಪ್ರತಿಷ್ಠಾಪಿಸಲಾಗಿದೆ. ಇದನ್ನು ಬ್ರಹ್ಮ ಪದಾರ್ಥ ಅಂತ ಕರೆಯಲಾಗುತ್ತೆ. ಇದನ್ನು ಶ್ರೀಕೃಷ್ಣ ಪರಮಾತ್ಮನ ಜೀವಂತ ಹೃದಯ ಅಂತಾನು ನಂಬಲಾಗುತ್ತದೆ .

Puri Jagannath Temple : ಭಾರತೀಯ ದೇವಾಲಯ ಅನ್ನೋದು ಶ್ರದ್ದಾ ಕೇಂದ್ರ ಅನ್ನೋದು ಎಷ್ಟು ನಿಜವೋ, ಅದೊಂದು ನಿಗೂಢಗಳ ಗುಚ್ಚ ಅನ್ನೋದು ಅಷ್ಟೇ ನಿಜ . ಇಲ್ಲಿ ಮಾನವನ ಯೋಚನೆಗೂ ನಿಲುಕದ ವಿಚಾರಗಳಿವೆ. ಇದನ್ನು ವಿಜ್ಞಾನ ಆನ್ನೋದೋ ಅಥವಾ ನಮ್ಮ ಹಿರಿಯರಲ್ಲಿ ಇದ್ದ ತಂತ್ರಜ್ಞಾನ ಅನ್ನುವುದೋ ಅಥವಾ ನಮ್ಮ ದೇವರ ಶಕ್ತಿ, ಪವಾಡ ಅನ್ನೋದೋ ಅಂತ ಹಲವು ಬಾರಿ ಗೊಂದಲಕ್ಕೆ ಈಡಾಗುವಂತೆ ಮಾಡುತ್ತೆ. ಅಂತದೇ ಒಂದು ದೇವಾಲಯದ ಇದು. ಪುರಿಯ ಜಗನ್ನಾಥ ದೇವಾಲಯದಲ್ಲಿ ಗಾಳಿ , ಅಗ್ನಿ ನೀರು ತಮ್ಮ ನಿಯಮ ಮೀರಿ ನಡೆಯುತ್ತೆ.

Puri Jagannath Temple Amazing Facts This temple is a place of mysteries Krishna living heart beats here
Image Credit to Original Source

ಇಲ್ಲಿ ನಡೆಯೋದು ಮಾನವನ ಊಹೆಗೂ ಮೀರಿದ ಪವಾಡಗಳು . .ಇದನ್ನು ಹೇಳುತ್ತಾ ಹೋದರೆ ಎಲ್ಲರೂ ಒಂದು ಬಾರಿ ಮೂಕ ವಿಸ್ಮಿತರಾಗೋದು ಖಂಡಿತ . ಮತ್ತೊಂದು ವಿಶೇಷವೆಂದರೆ ಇಲ್ಲಿ ಕಲ್ಲಿನ ದೇವರ ಬದಲು ಕಟ್ಟಿಗೆ ದೇವರನ್ನು ವೂಜಿಸಲಾಗುತ್ತೆ. ಅದರಲ್ಲೂ ಇಲ್ಲಿನ ದೇವರ ಮೂರ್ತಿಯಲ್ಲಿ ಶ್ರೀಕೃಷ್ಣ ಪರಮಾತ್ಮನ ನಿಜವಾದ ಹೃದಯ ಬಡಿಯುತ್ತಂತೆ. ಇಲ್ಲಿ ಪರಮಾತ್ಮ ಅಣ್ಣ ಬಲರಾಮ ಹಾಗೂ ಸುಭದ್ರೆಯ ಜೊತೆ ಜಗನ್ನಾಥನಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ .

ಅಚ್ಚರಿಗೆ ಕಾರಣವಾಗಿದೆ ಇಲ್ಲಿನ ವಿಸ್ಮಯಗಳು :

ಹೌದು, ಇಲ್ಲಿನ ಕಣ ಕಣಗಳೂ ಕೂಡಾ ದೇವರ ಶಕ್ತಿಯನ್ನು ಪ್ರತಿಬಿಂಬ. ಇಲ್ಲಿ ಕಾಣಿಸುವ ಅಚ್ಚರಿಗಳು ಆಧುನಿಕ ಮಾನವನಿಗೆ ಸವಾಲಾಗಿದೆ ನಿಂತಿದೆ. ಅದನ್ನು ಬೇಧಿಸಲೂ ಎಷ್ಟೇ ಪ್ರಯತ್ನಪಟ್ರೂ ಮಾನವನಿಗೆ ಸಾಧ್ಯವಾಗುತ್ತಿಲ್ಲ ಅನ್ನೋದೆ ಅಚ್ಚರಿ.

ಗಾಳಿಯ ವಿರುದ್ದ ದಿಕ್ಕಿಗೆ ಹಾರುತ್ತೆ ಗೋಪುರದ ಮೇಲಿನ ದ್ವಜ. ಸಾಮಾನ್ಯವಾಗಿ ಗಾಳಿ ಬರುವ ಧಿಕ್ಕಿಗೆ ಬಾವುಟ ಹಾರಾಡುತ್ತೆ ಆದರೆ ಇಲ್ಲಿ ಗಾಳಿಯ ವಿರುದ್ಧ ದಿಕ್ಕಿಗೆ ಬಾವುಟ ಹಾರೋದನ್ನು ನಾವು ನೋಡಬಹುದು. ಇಲ್ಲಿ ನಿತ್ಯವೂ ಈ ಬಾವುಟವನ್ನು ಬದಲಾಯಿಸಲಾಗುತ್ತೆ 45 ಮಹಡಿಯ ಗೋಪುರವನ್ನು ಹತ್ತಿ ಪೂಜಾರಿ ನಿತ್ಯ ದ್ವಜವನ್ನು ಬದಲಾಯಿಸುತ್ತಾರೆ . ಒಂದು ದಿನ ಇದು ತಪ್ಪಿದ್ರೆ 15 ವರ್ಷ ದೇವಾಲಯವನ್ನು ಮುಚ್ಚಬೇಕಾಗುತ್ತಂತೆ .

Puri Jagannath Temple Amazing Facts This temple is a place of mysteries Krishna living heart beats here
Image Credit to Original Source

ಇನ್ನೊಂದು ಅಚ್ಚರಿ ಏನೆಂದ್ರೆ ಇಲ್ಲಿ ಗೋಪುರದ ಮೇಲೆ ಯಾವುದೇ ಪ್ರಾಣಿಯಾಗಲಿ ಪಕ್ಷಿಯಾಗಲಿ ಅಥವಾ ಯಾವುದೇ ಜೀವಿಯಾಗಲಿ ಹಾರಾಡಲ್ಲವಂತೆ. ಮತ್ತೊಂದು ಅಚ್ಚರಿ ಅಂದ್ರೆ ದೇವಾಲಯದ ಗೋಪುರದಲ್ಲಿ 1 ಟನ್ ತೂಕದ ಸುದರ್ಶನ ಚಕ್ರವನ್ನು ಜೋಡಿಸಲಾಗಿದೆ. 20 ಅಡಿ ಎತ್ತರದಲ್ಲಿರುವ ಇದನ್ನು ಪುರಿ ನಗರದ ಯಾವುದೇ ಭಾಗದಿಂದ ನಿಂತು ನೋಡಿದರೂ ನೋಡುಗರತ್ತ ಮುಖ ಮಾಡಿದೆ ಅಂತಾನೇ ಅನಿಸುತ್ತೆ.

ಇದನ್ನೂ ಓದಿ : Kota Amrutheshwari Temple : ಸಂತಾನ ಭಾಗ್ಯ ಕರುಣಿಸುವ ಅಮೃತೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಇನ್ನೊಂದು ಮಹಾ ಅಚ್ಚರಿ ಅಂದ್ರೆ ಸಮುದ್ರದ ತಟದಲ್ಲಿ ಎಂಬಂತೆ ಇರುವ ದೇವಾಲಯದ ಒಳಗಡೆ ನಮಗೆ ಸಮುದ್ರ ಶಬ್ಥವೇ ಕೇಳಿಸಲ್ಲ. ಈ ದೇವಾಲಯ ಸಮುದ್ರದ ತಟದಲ್ಲಿರುವ ದೇವಾಲಯ. ಹೀಗಾಗಿ ಸಮುದ್ರದ ಅಬ್ಬರ ಕೇಳಿಸಲೇಬೇಕು. ಆದ್ರೆ ಈ ದೇವಾಲಯದಲ್ಲಿ ನಾಲ್ಕು ದ್ವಾರಗಳಿದ್ದು ಮೊದಲನೇ ದ್ವಾರ ಸಿಂಗ ದ್ವಾರದಲ್ಲಿ ಹೋಗುವಾಗ ಮಾತ್ರ ಸಮುದ್ರದ ಸದ್ದು ನಮಗೆ ಕೇಳಿಸುತ್ತೆ. ಆದರೆ ವಾಪಾಸ್ ಬರುವಾಗ ಯಾವ ಸದ್ದು ಕೇಳಿಸಲ್ಲ ಅನ್ನೋದೆ ವಿಶೇಷ.

Puri Jagannath Temple Amazing Facts This temple is a place of mysteries Krishna living heart beats here
Image Credit to Original Source

ಇಷ್ಟೇ ಅಲ್ಲಾ, ಇಲ್ಲಿ ಮಾಡುವ ಪ್ರಸಾದ ಹೆಚ್ಚು ಕಮ್ಮಿ ಆಗೋದೆ ಇಲ್ಲ . ಪುರಿಯ ಜಗನ್ನಾಥನಿಗಾಗಿ ನಿತ್ಯ 56 ಬಗೆಯ ಭೋಗ ಅಥವಾ ಖಾದ್ಯಗಳನ್ನು ತಯಾರಿಸಲಾಗುತ್ತೆ . ಇದನ್ನು ಛಪನ್ ಭೋಗ್ ಅಂತಾನು ಕರೆಯಲಾಗುತ್ತೆ. ಬರುವ 10 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಇದನ್ನೇ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತೆ. ನಿತ್ಯವೂ ಇಲ್ಲಿ ಒಂದೇ ರೀತಿಯಲ್ಲಿ ಪ್ರಸಾದ ತಯಾರಿಸಲಾಗುತ್ತೆ .ಆದರೆ ಇಲ್ಲಿಯವರೆಗೆ ಒಂದು ದಿನವೂ ಪ್ರಸಾದ ಕಮ್ಮಿ ಆಗಿರೋದಾಗ್ಲಿ ಅಥವಾ ಉಳಿಯೋದಾಗ್ಲಿ ಆಗಿಲ್ಲ ಅಂತಾರೆ ಇಲ್ಲಿನ ಜನ .

ಇನ್ನು ಇಲ್ಲಿನ ಅಡಿಗೆಯ ಶಾಲೆಯಲ್ಲಿ ಏಳು ಮಡಿಕೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಆಹಾರ ಬೇಯಿಸಲಾಗುತ್ತೆ, ಆದ್ರೆ ಅಚ್ಚರಿಯೆಂದ್ರೆ ಮೊದಲು ಮೇಲಿನ ಮಡಿಕೆಯ ಆಹಾರ ಬೆಂದು , ಕೊನೆಯಲ್ಲಿ ಕೆಳಗಿನ ಮಡಿಕೆಯ ಆಹಾರ ಬೇಯುತ್ತಂತೆ . ಇಲ್ಲಿ ಒಂದು ಸಾರಿ ಬಳಸಿದ ಮಡಿಕೆಯನ್ನು ಮತ್ತೆ ಬಳಸಲಾಗುದಿಲ್ಲ.

ಇದನ್ನೂ ಓದಿ : Tirumala Tirupati Darshan Tickets : ತಿರುಮಲ ತಿರುಪತಿ ದರ್ಶನ ಮಾಡಲು ಸದವಕಾಶ; ಟಿಕೆಟ್‌ಗಳ ಸಂಖ್ಯೆ ಹೆಚ್ಚಿಸಲಿರುವ ಟಿಟಿಡಿ

ಅಪೂರ್ಣ ರೀತಿಯಲ್ಲಿದೆ ದೇವರ ವಿಗ್ರಹ :

ಪುರಿಯಲ್ಲಿರೋ ಈ ವಿಗ್ರಹ ಎಲ್ಲಾ ವಿಗ್ರಹದಂತೆ ಪೂರ್ಣವಾಗಿಲ್ಲ. ಬದಲಾಗಿ ಮರದ ಮೂರ್ತಿಯಾದರೂ ಇವಕ್ಕೆ ಕೈ ಕಾಲುಗಳಿಲ್ಲ. ಇದಕ್ಕೂ ಪುರಾಣದಲ್ಲಿ ಕಾರಣವಿದೆ. ಪುರಿಯ ಅವಂತಿ ರಾಜ್ಯದಲ್ಲಿ ಇಂದ್ರದುಮ್ಯ ಅನ್ನೋ ರಾಜನಿದ್ದ ಆತನಿಗೆ ಬುಡಕಟ್ಟು ಜನರು ಪೂಜಿಸೋ ನೀಲಮಾಧವನನ್ನು ದರ್ಶಿಸಬೇಕು ಎಂಬ ಮನಸಾಯಿತು. ಆದರೆ ಅದನ್ನು ನೋಡಲು ಹಲವು ನಿಯಮ ಇರುವುದರಿಂದ ರಾಜನಿಗೆ ದರ್ಶನ ಭಾಗ್ಯ ಸಿಕ್ಕಿರಲಿಲ್ಲ.

Puri Jagannath Temple Amazing Facts This temple is a place of mysteries Krishna living heart beats here
Image Credit to Original Source

ಇದರಿಂದ ದುಖಿಃತನಾದ ರಾಜನ ಕನಸಿನಲ್ಲಿ ಬಂದ ಕೃಷ್ಣ ಮಹಾನದಿಯಲ್ಲಿ ಮರದ ದಿಮ್ಮಿಯೊಂದು ಬರುತ್ತೆ . ಅದರಿಂದ ಮೂರ್ತಿಯನ್ನು ತಯಾರಿಸುವಂತೆ ತಿಳಿಸಿದ ಎನ್ನಲಾಗುತ್ತೆ. ಅದರಂತೆ ಸಿಕ್ಕಿದ ದಿಮ್ಮಿಯನ್ನು ಯಾರಿಂದಲೂ ಕೆತ್ತಲಾಗಲಿಲ್ಲ. ಆಗ ವಿಶ್ವ ಕರ್ಮನು ಬ್ರಾಹ್ಮಣ ವೇಷದಲ್ಲಿ ಬಂದು ತಾನು ವಿಗ್ರಹ ಕೊರೆದಾಗುವವರೆಗೆ ತಾನಿರು ಕೋಣೆಯನ್ನು ತೆರೆಯುವಂತಿಲ್ಲ ಎಂದು ಹೇಳಿದ.

ಕೆಲವು ದಿನದ ನಂತರ ಕೋಣೆಯಿಂದ ಯಾವ ಸದ್ದು ಬರದಿದ್ದಾಗ ಬಾಗಿಲು ತೆರೆದು ನೋಡಲಾಯಿತು. ಆಗ ಅಲ್ಲಿ ಅಪೂರ್ಣವಾದ ವಿಗ್ರಹಗಳು ಇದ್ದವು. ಅಂದಿನಿಂದ ಇಂದಿನ ವರೆಗೂ ಇದನ್ನೇ ದೇವರಾಗಿ ಪೂಜಿಸಲಾಗುತ್ತೆ.

ಜಗನ್ನಾಥನ ದೇಹದಲ್ಲಿ ಕೃಷ್ಣನ ಹೃದಯ : ಬರಿಗೈಯಲ್ಲಿ ಮಟ್ಟಿದ್ರೆ ಅಪಾಯ

ಇಲ್ಲಿನ ನಿಗೂಢದಲ್ಲಿ ಮೊದಲಿನ ಸಾಲಲ್ಲಿ ನಿಲ್ಲೋದೇ ಇಲ್ಲಿನ ಬ್ರಹ್ಮ ಪದಾರ್ಥ. ಹೌದು , ಪುರಿಯ ಜಗನ್ನಾಥನ ಹೃದಯ ಭಾಗದಲ್ಲಿ ಒಂದು ವಸ್ತುವನ್ನು ಪ್ರತಿಷ್ಠಾಪಿಸಲಾಗಿದೆ. ಇದನ್ನು ಬ್ರಹ್ಮ ಪದಾರ್ಥ ಅಂತ ಕರೆಯಲಾಗುತ್ತೆ. ಇದನ್ನು ಶ್ರೀಕೃಷ್ಣ ಪರಮಾತ್ಮನ ಜೀವಂತ ಹೃದಯ ಅಂತಾನು ನಂಬಲಾಗುತ್ತದೆ . ಕೃಷ್ಣನ ದೇಹಾಂತ್ಯದ ನಂತರ ದೇಹವನ್ನು ಸುಡಲಾಯಿತು , ಆದರೆ ಆತನ ಹೃದಯ ಮಾತ್ರ ಸುಟ್ಟಿರಲಿಲ್ಲವಂತೆ .

ಅದನ್ನು ಸಮುದ್ರದಲ್ಲಿ ವಿಸರ್ಜಿಸಲಾಯಿತು. ಅದೇ ಮುಂದೆ ಮಹಾನದಿಯಲ್ಲಿ ಸಿಕ್ಕಿ ಜಗನ್ನಾಥನಲ್ಲಿ ಪ್ರತಿಷ್ಠಾಪಿಸಲಾಯಿತು ಅನ್ನೋದು ನಂಬಿಕೆ. ಇನ್ನು ಈ ಬ್ರಹ್ಮ ಪದಾರ್ಥವನ್ನು ಈ ವರೆಗೆ ಯಾರೂ ಸ್ವತಃ ನೋಡಿಲ್ಲ . ಯಾಕಂದ್ರೆ , 12  ವರ್ಷಗಳಿಗೊಮ್ಮೆ ದೇವರ ಮೂರ್ತಿಯನ್ನು ಬದಲಿಸುವ ವೇಳೆ ಇದನ್ನು ಹಳೇಯ ವಿಗ್ರಹದಿಂದ ಹೊಸ ವಿಗ್ರಹಕ್ಕೆ ಬದಲಿಸಲಾಗುತ್ತೆ . ಆ ವೇಳೆಯಲ್ಲಿ ಪೂಜಾರಿಯ ಕಣ್ಣಿಗೆ ಹಾಗೂ ಕೈಗಳಿಗೆ ಬಟ್ಟೆಯನ್ನು ಕಟ್ಟಲಾಗುತ್ತೆ . ಜೊತೆಗೆ ಪುರಿಯ ನಗರದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಮಾಡಲಾಗುತ್ತೆ . ಒಂದು ವೇಳೆ ಇದನ್ನು ನೇರವಾಗಿ ನೋಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಎಲ್ಲರ ಅಭಿಪ್ರಾಯ . ನಂತರ ಹಳೆ ಮೂರ್ತಿಗಳನ್ನು ದೇವಾಲಯದ ಆವರಣದಲ್ಲೇ ಹೂಳಲಾಗುತ್ತೆ .

Puri Jagannath Temple Amazing Facts This temple is a place of mysteries Krishna living heart beats here
Image Credit to Original Source

ಹೊಸ ರಥದಲ್ಲಿ ವರ್ಷಂಪ್ರತಿ ನಡೆಯಲಿದೆ ಅದ್ದೂರಿ ರಥೋತ್ಸವ :

ಜಗನ್ನಾಥನ ರಥೋತ್ಸವವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಭಾಗ್ಯ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಇಲ್ಲಿ ಈ ರಥೋತ್ಸವನ್ನು ನೋಡೋಕೆ ಅಂತಾನೆ ಸಾವಿರಾರು ಮಂದಿ ಬಂದು ಸೇರುತ್ತಾರೆ . ಇದು ಭಾರತದ ದೊಡ್ಡ ರಥೋತ್ಸವ ಅನ್ನುವ ಮಾತೂ ಇದೆ. ಇಲ್ಲಿ ಪ್ರತೀವರ್ಷವೂ ಜಗನ್ನಾಥನಿಗಾಗಿ ಹೊಸ ರಥವನ್ನು ನಿರ್ಮಿಸಲಾಗುತ್ತೆ .

ರಥ ತಯಾರಾಗೋ ಮುನ್ನ ನಿಗದಿತ ಸಮಯಕ್ಕೆ ಒರಿಸ್ಸಾದ ಕಾಡುಗಳಲ್ಲಿ ವಿಶಿಷ್ಟ ರೀತಿಯ ಮರವನ್ನು ಕಡಿದು ಅದನ್ನು ಮಹಾನದಿಯಲ್ಲಿ ಹರಿ ಬಿಡಲಾಗುತ್ತೆ. ಅದನ್ನು ಪುರಿಯಲ್ಲಿ ಮತ್ತೆ ಸಂಗ್ರಸಲಾಗುತ್ತೆ . ನಂತರ ನಡೆಯುವುದೇ ರಥದ ತಯಾರಿ ಅಕ್ಷಯ ತೃತ್ತೀಯದಂದು ನಿರ್ಮಾಣ ಕಾರ್ಯ ಆರಂಭವಾಗಿ ಮುಂದೆ 16 ಚಕ್ರಗಳ ಹಳದಿ ಮತ್ತು ಕೆಂಪು ಬಣ್ಣದ ರಥವಾಗಿ ನಿರ್ಮಾಣವಾಗುತ್ತೆ .

ಇನ್ನು ಈ ರಥೋತ್ಸವದ ವೇಳೆ ಕೃ಼ಷ್ಣನು 9 ದಿನಗಳ ವರೆಗೆ ತನ್ನ ಚಿಕ್ಕಮ್ಮನ ಮನೆಯಲ್ಲಿ ಇರುತ್ತಾನಂತೆ . ಇದರ ಪ್ರತೀಕವಾಗಿ 9 ದಿನ ಹತ್ತಿರದ ದೇವಾಲಯದಲ್ಲಿ ಕೊಂಡೊಯ್ಯವಾಗುತ್ತೆ . ಹೀಗೇ ಅಲ್ಲಿಂದ ವಾಪಾಸ್ ಬರುವ ಮೂಲಕ ಇಲ್ಲಿ ಜಾತ್ರೆ ರತ್ರೋತ್ಸವ ನಡೆಯುತ್ತೆ . ಇಲ್ಲಿ ನಡೆಯುವ ಜಾತ್ರೆಯನ್ನು ನೋಡಿದ್ರೆ ಎಲ್ಲಾ ಪಾಪ ಪರಿಹಾರ ವಾಗುತ್ತೆ ಅನ್ನೋದು ಭಕ್ತರ ನಂಬಿಕೆ

ಒಟ್ಟಾರೆ ಅಚ್ಚರಿಯ ತಾಣ ಅನ್ನಿಸಿರೋ ಈ ದೇವಾಲಯ ಇರೋದು ಎಲ್ಲಿ ಎಂದ್ರೆ ಒರಿಸ್ಸಾದ ನಗರ ಪುರಿಯಲ್ಲಿ . ಜಗನ್ನಾಥ ಪುರಿ ಅನ್ನಿಸಿಕೊಂಡಿರೋ ಈ ಜಗನ್ನಾಥನ ಆವಾಸಸ್ಥಾನ ದೇಶಾದ್ಯಂತ ಭಕ್ತರ ಶ್ರದ್ಧಾ ಕೇಂದ್ರ. ಬೆಂಗಳೂರಿನಿಂದ ಸುಮಾರು 1400 km ದೂರ ಇರೋ ಇಲ್ಲಿಗೆ ಹೋಗೋಕೆ ರೈಲು ಹಾಗೂ ವಿಮಾನದ ವ್ಯವಸ್ಥೆ ಇದೆ . ಇನ್ನು ಇಲ್ಲಿ ದೇವಾಲಯವು ದಿನದ 24 ಗಂಟೆಯೂ ತೆರೆದಿರುತ್ತೆ . ಹೀಗಾಗಿ ಭಾರತದ ವಿಸ್ಮಯದ ದೇವಾಲಯಕ್ಕೆ ಒಂದು ಸಲವಾದ್ರೂ ಭೇಟಿ ನೀಡಿ.

Puri Jagannath Temple Amazing Facts, This temple is a place of mysteries, Krishna’s living heart beats here

Comments are closed.