ಆಂಧ್ರಪ್ರದೇಶ : ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವ ಜೋಡಿಯೊಂದು ತರಗತಿಯಲ್ಲಿಯೇ ವಿವಾಹವಾಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ನಡೆದಿದೆ.
ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಬ್ಬರು ನವೆಂಬರ್ 17ರಂದು ತರಗತಿಯಲ್ಲಿ ಮದುವೆಯಾಗಿದ್ದರು. ವಿದ್ಯಾರ್ಥಿಗಳ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಾಂಶುಪಾಲರು ವಿದ್ಯಾರ್ಥಿಗಳ ವಿರುದ್ದ ಶಿಸ್ತುಕ್ರಮಕೈಗೊಂಡಿದ್ದರು.
ಇಬ್ಬರೂ ವಿದ್ಯಾರ್ಥಿಗಳನ್ನು ಕಾಲೇಜಿನಿಂದಲೇ ಡಿಬಾರ್ ಮಾಡಲಾಗಿದ್ದು, ಮಕ್ಕಳ ವಿವಾಹದ ಸುದ್ದಿ ಪೋಷಕರಿಗೂ ಆಘಾತ ತಂದಿದೆ. ಸದ್ಯ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.