ಆಭರಣ ಪ್ರಿಯರಿಗೆ ಮತ್ತೆ ಶಾಕ್ : ಏರಿಕೆ ಕಾಣುತ್ತಿದೆ ಚಿನ್ನದ ದರ

ಬೆಂಗಳೂರು : ಕಳೆದ ಕೆಲ ದಿನಗಳಲ್ಲಿ ಇಳಿಕೆಯನ್ನು ಕಾಣುತ್ತಿದ್ದ ಬಂಗಾರ ಇದೀಗ ಆಭರಣ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟಿದೆ. ಚಿನ್ನದ ದರದಲ್ಲಿ ಏರಿಕೆಯನ್ನು ಕಾಣುತ್ತಿದ್ದು, 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 50,080 ರೂ. ಹಾಗೂ 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ45,910 ರೂಪಾಯಿಗೆ ಏರಿಕೆಯಾಗಿದೆ. ಅಲ್ಲದೇ ಬೆಳ್ಳಿಯ ದರದಲ್ಲಿಯೂ ಏರಿಕೆ ಕಂಡಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಭಾರೀ ಕುಸಿತ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಕೊಂಚ ಏರಿಕೆಯಾಗಿದೆ. ಈ ಹಿಂದೆ 24 ಕ್ಯಾರೆಟ್ ಚಿನ್ನದ ಬೆಲೆ 49.150 ರಷ್ಟದ್ದು, 50.080ರೂ.ಗೆ ಏರಿಕೆಯಾಗಿದ್ರೆ, 22 ಕ್ಯಾರೆಟ್ ಚಿನ್ನದ ಬೆಲೆ 45.910 ರೂಪಾಯಿಯಿಂದ 48.150ಕ್ಕೆ ಏರಿಕೆಯಾಗಿದೆ. ದೇಶದಲ್ಲಿಯೇ ದೆಹಲಿ, ಜೈಪುರ ಹಾಗೂ ಲಕ್ನೋದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ.

ಇನ್ನು ಬೆಳ್ಳಿಯ ದರದಲ್ಲಿಯೇ ಭಾರೀ ಏರಿಕೆಯನ್ನು ಕಂಡಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಒಂದೂವರೆ ಸಾವಿರ ರೂ. ಏರಿಕೆಯನ್ನು ಕಂಡಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 62,400 ರೂ. ಇತ್ತು. ಇಂದು 1 ಕೆಜಿ ಬೆಳ್ಳಿಯ ಬೆಲೆ 63,900 ರೂ. ಆಗಿದೆ. ಬೆಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಗೆ 62,900 ರೂ. ಆಗಿದೆ. ಮೂರು ದಿನಗಳಿಂದ ಇಳಿಕೆಯಾಗಿದ್ದ ಬೆಳ್ಳಿಯ ಬೆಲೆ ಮತ್ತೆ ಗಗನಕ್ಕೇರುವ ಲಕ್ಷಣಗಳು ಕಾಣುತ್ತಿವೆ.

Comments are closed.