ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದ ಕುಡಿ ಮತ್ತು ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ಮೇಘನಾ ರಾಜ್ (Meghana Raj) ಹಾಗೂ ಚಿರು ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja Birthday) ಮೂರನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ವರ್ಷ ಸ್ಪೆಶಲ್ ಬರ್ತಡೇ ಸೆಲಿಬ್ರೆಟ್ ಮಾಡಿದ ನಟಿ ಮೇಘನಾ ಮಗನ ಹುಟ್ಟುಹಬ್ಬದ ಅದ್ದೂರಿ ವಿಡಿಯೋ ರಿಲೀಸ್ ಮಾಡಿದ್ದಾರೆ.

ತಂದೆಯನ್ನು ಕಳೆದುಕೊಂಡ ಐದು ತಿಂಗಳ ಬಳಿಕ ಜನಿಸಿದ ರಾಯನ್ ಸರ್ಜಾ ಕೇವಲ ಸುಂದರ್ ರಾಜ್ ಕುಟುಂಬ ಮಾತ್ರವಲ್ಲ ಸರ್ಜಾ ಕುಟುಂಬಕ್ಕೂ ಉತ್ತರಾಧಿಕಾರಿ. ಸದ್ಯ ಎರಡನೇ ವರ್ಷ ಪೊರೈಸಿ ಮೂರನೇ ವರ್ಷಕ್ಕೆ ಕಾಲಿಟ್ಟ ರಾಯನ್ ರಾಜ್ ಸರ್ಜಾ ಬರ್ತಡೇಯನ್ನು ತಾಯಿ ಹಾಗೂ ನಟಿ ಮೇಘನಾ ವಿಭಿನ್ನವಾಗಿ ಆಚರಿಸಿದ್ದಾರೆ.

ಎರಡು ವರ್ಷಗಳ ಕಾಲ ಮನೆಯಲ್ಲೇ ಬೇರೆ ಬೇರೆ ಥೀಮ್ ನಲ್ಲಿ ರಾಯನ್ ಬರ್ತಡೇ ಆಚರಿಸಿದ ಮೇಘನಾ ಸರ್ಜಾ ಈ ಭಾರಿ ರೆಸಾರ್ಟ್ ಔಟಿಂಗ್ ನಲ್ಲಿ ಮಗನ ಬರ್ತಡೇ ಕೇಕ್ ಕಟ್ಟಿಂಗ್ ಮಾಡಿಸಿದ್ದಾರೆ. ನಗರದ ಹೊರ ವಲಯದಲ್ಲಿರೋ ರೆಸಾರ್ಟ್ ವೊಂದನ್ನು ಮಗನಿಗಾಗಿ ಬುಕ್ ಮಾಡಿದ ಮೇಘನಾ ತಮ್ಮ ಅತ್ಯಂತ ಆಪ್ತ ಕುಟುಂಬ ಸದಸ್ಯರ ಜೊತೆ ಅಲ್ಲಿಗೆ ತೆರಳಿದ್ದಾರೆ.
ಇದನ್ನೂ ಓದಿ : ಸಿನಿಮಾ ಶೂಟಿಂಗ್ ಬ್ರೇಕ್ ನಲ್ಲಿ ಹೇಗಿರುತ್ತೆ ಮೇಘನಾ ರಾಜ್ ದಿನಚರಿ ? ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿಡಿಯೋ
ಮೇಘನಾ ತಮ್ಮ ಮಗನ ರೆಸಾರ್ಟ್ ಬರ್ತಡೇ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಬ್ಲಾಗ್ ನಲ್ಲಿ ಹುಟ್ಟುಹಬ್ಬದ ಸಂಪೂರ್ಣ ವಿವರ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಮಕ್ಕಳಿಗೆ ನಾವು ಮನೆಯಲ್ಲೇ ಬರ್ತಡೇ ಮಾಡ್ತೇವೆ. ಆದರೆ ಕೇಕ್ ಕಟ್ಟಿಂಗ್, ಗೆಸ್ಟ್, ಗಿಫ್ಟ್, ಪೋಟೋಸೆಸನ್ ಅನ್ನೋದು ಕೆಲ ಮಕ್ಕಳಿಗೆ ಇರಿಟೇಟ್ ಮಾಡುತ್ತೆ.

ಹೀಗಾಗಿ ಈ ಭಾರಿ ನಾನು ರಾಯನ್ ಗೆ ರೆಸಾರ್ಟ್ ನಲ್ಲಿ ಬರ್ತಡೇ ಫಿಕ್ಸ್ ಮಾಡಿದೆ ಎಂದು ಮೇಘನಾ ಮಾಹಿತಿ ನೀಡಿದ್ದಾರೆ. ರಾಯನ್ ರಾಜ್ ಸರ್ಜಾಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ನೀರಾಡೋದು ಅಂದ್ರೇ ತುಂಬಾ ಇಷ್ಟವಂತೆ. ಹೀಗಾಗಿ ಬೆಳಗ್ಗೆನೆ ರೆಸಾರ್ಟ್ ಗೆ ಕರೆದುಕೊಂಡು ಹೋದ ಮೇಘನಾ ಅಲ್ಲಿ ಸಂಜೆಯವರೆಗೂ ಮಗನ ಜೊತೆ ನೀರಾಡಿದ್ದಾರೆ.
ಇದನ್ನೂ ಓದಿ :7 ವರ್ಷಗಳ ಬಳಿಕ ಮಲೆಯಾಳಂನಲ್ಲಿ ಮೇಘನಾ ರಾಜ್ ಸರ್ಜಾ ಸಿನಿಮಾ
ಮೇಘನಾಗೆ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್ ಹಾಗೂ ಇತರ ಕುಟುಂಬ ಸದಸ್ಯರು ಸಾಥ್ ನೀಡಿದ್ದಾರೆ. ರಾತ್ರಿ ವೇಳೆ ಅದ್ದೂರಿಯಾಗಿ ಕೇಕ್ ಕಂಟಿಂಗ್ ನಡೆದಿದ್ದು, ರಾಯನ್ ರಾಜ್ ಸರ್ಜಾ ಪ್ರೀತಿಯ ತಂಗಿ ಧ್ರುವ್ ಸರ್ಜಾ ಪುತ್ರಿ ಕಣ್ಮಣಿ ಸೇರಿದಂತೆ ಸರ್ಜಾ ಕುಟುಂಬಸ್ಥರು ಈ ಸಂಭ್ರಮದಲ್ಲಿ ಭಾಗಿಯಾದರು.

ಈ ವೇಳೆ ಮಾತನಾಡಿದ ಸುಂದರ್ ರಾಜ್ ಮೊಮ್ಮಗನ ನೋಡಿ ಭಾವುಕರಾಗಿದ್ದಲ್ಲದೇ, ನನ್ನ ಮೊಮ್ಮಗ ದೊಡ್ಡವನಾದ ಮೇಲೆ ಏನಾಗುತ್ತಾನೆ ಗೊತ್ತಿಲ್ಲ. ಆದರೇ ಏನೇ ಅದರೂ ಅತನೊಬ್ಬ ವಂಡರ್ ಫುಲ್ ಪರ್ಸನ್ ಆಗ್ತಾನೇ. ನನ್ನಮೊಮ್ಮಗ ಯಾರ ಮುಂದೇಯೋ ತಲೆಬಗ್ಗಿಸದೇ ಬದುಕಬೇಕೆಂಬುದೇ ನನ್ನ ಆಸೆ ಎಂದಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್ ಅಂದ್ರು ವಿನಯ್ ಪತ್ನಿ ಅಕ್ಷತಾ..?
ಅಷ್ಟೇ ಅಲ್ಲ ರಾಯನ್ ಗೆ ಇಬ್ಬರೂ ಅಜ್ಜಿಯರು ಕೂಡ ಶುಭಹಾರೈಸಿದ್ದಾರೆ. ಇದಲ್ಲದೆ ಧ್ರುವ್ ಪತ್ನಿ ಪ್ರೇರಣಾ ಕೂಡ ರಾಯನ್ ಮೇಲೆ ತಮಗಿರೋ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಸರ್ಜಾ ಮಗನ ಖುಷಿ ಹಾಗೂ ಸಂಭ್ರಮಕ್ಕೆ ಇನ್ನಿಲ್ಲದ ಆದ್ಯತೆ ನೀಡುತ್ತಾರೆ.

ಅವನ ಖುಷಿಗಾಗಿಯೇ ರೆಸಾರ್ಟ್ ನಲ್ಲಿ ಬರ್ತಡೇ ಆಚರಿಸಿದ ಮೇಘನಾ ಮಗನ ನಗುವಲ್ಲಿ,ಆಟದಲ್ಲಿ ತಾವು ಮಗುವಿನಂತೆ ಆಟ ಆಡಿ ಖುಷಿ ಪಟ್ಟಿದ್ದಾರೆ. ಸದ್ಯ ತತ್ಸಮ್ ತದ್ಬವ್ ಗೆಲುವಿನ ಖುಷಿಯಲ್ಲಿರೋ ಮೇಘನಾ ರಾಜ್ ಸರ್ಜಾ ಹೊಸ ಸಿನಿಮಾಗೆ ಸಿದ್ಧವಾಗ್ತಿದ್ದು, ಹೊಸ ಹೇರ್ ಸ್ಟೈಲ್ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
Meghana Raj and Chiranjeevi Sarja Son Rayan Raj Sarja Royal Birthday Meghana Raj Sarja shared a video for fans