ಬಿಗ್​​​ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್​ ಅಂದ್ರು ವಿನಯ್​ ಪತ್ನಿ ಅಕ್ಷತಾ..?

ಬಿಗ್​ಬಾಸ್ ಸೀಸನ್​ 10 ನಡೀತಾ ಇದ್ದು ವಿನಯ್​ (Vinay) ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ. ಕಳೆದ ವಾರ ಸುದೀಪ್​​ ವಿನಯ್​ರನ್ನು ಆನೆಗೆ ಹೋಲಿಕೆ ಮಾಡಿದ ಬಳಿಕ ವಿನಯ್​ ಅಬ್ಬರ ಜೋರಾಗಿದೆ.

ಕನ್ನಡ ಕಿರುತೆರೆಯ ಅತೀದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್​ಬಾಸ್ (BiggBoss Kannada season 10) ​. ಸದ್ಯ ಕಲರ್ಸ್​ ಕನ್ನಡ ವಾಹಿನಿಯಲ್ಲಿ (Colours Kannada)  ಬಿಗ್​ಬಾಸ್ ಸೀಸನ್​ 10 ನಡೀತಾ ಇದ್ದು ವಿನಯ್​ (Vinay) ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ. ಕಳೆದ ವಾರ ಸುದೀಪ್​​ ವಿನಯ್​ರನ್ನು ಆನೆಗೆ ಹೋಲಿಕೆ ಮಾಡಿದ ಬಳಿಕ ವಿನಯ್​ ಅಬ್ಬರ ಜೋರಾಗಿದೆ.

Bigg Boss cheated on my husband says Bigg Boss Kannada Contest  Vinay wife Akshatha
Image Credit to Original Source

ಈ ವಾರ ಹಳ್ಳಿ ಸೊಗಡಿನ ಗೇಮ್​ ನ್ನು ಬಿಗ್​ಬಾಸ್​ ಸ್ಪರ್ಧಿಗಳು ಆಡಿದ್ದು ಇದರಲ್ಲಿ ವಿನಯ್​ & ಟೀಂ ಜಯಭೇರಿ ಬಾರಿಸಿದೆ. ಅಷ್ಟೇ ಅಲ್ಲದೇ ಈ ವಾರದ ಕ್ಯಾಪ್ಟನ್​ ಆಗಿ ವಿನಯ್​ ಆಯ್ಕೆ ಕೂಡ ಆಗಿದ್ದಾರೆ. ಕ್ಯಾಪ್ಟನ್​ ಆಗಿ ಆಯ್ಕೆಯಾಗುತ್ತಿದ್ದಂತೆಯೇ ಆನೆ ಬಂತೊಂದಾನೆ ಅಂತಾ ಸಂಗೀತಾಗೆ ಟಾಂಗ್​ ನೀಡಿದ್ದು ಈ ಪ್ರೊಮೋ ಇದೀಗ ಸಖತ್​ ವೈರಲ್​ ಕೂಡ ಆಗಿದೆ.

ಇದನ್ನೂ ಓದಿ : ‘ಬಿಗ್​​​ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು’ : ಹೀಗ್ಯಾಕ್​ ಅಂದ್ರು ವಿನಯ್​ ಪತ್ನಿ ಅಕ್ಷತಾ..?

ವಿನಯ್​ ಕ್ಯಾಪ್ಟನ್​ ಆಗ್ತಿದ್ದಂತೆಯೇ ಬಿಗ್​ಬಾಸ್​ ಸ್ಪರ್ಧಿ, ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ನನ್ನ ಕೆಟ್ಟದಿನಗಳು ಅರಂಭವ ಅದಂತಿದೆ ಅಂತ ಕೂಡ ಹೇಳಿದ್ದಾರೆ. ಆದರೆ ಬಿಗ್​ಬಾಸ್​ನಲ್ಲಿ ವಿನಯ್​ ಮಹಿಳಾ ಸ್ಪರ್ಧಿಗಳನ್ನು ಏಕವಚನದಲ್ಲಿ ಮಾತನಾಡಿಸುವ ರೀತಿ ಹಾಗೂ ಕಾಲು ಕೆರೆದುಕೊಂಡು ಜಗಳ ಮಾಡುವ ಪರಿ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿದೆ.

Bigg Boss cheated on my husband says Bigg Boss Kannada Contest  Vinay wife Akshatha
Image Credit to Original Source

ವಿನಯ್​ನಂತಹ ಅಂಹಕಾರಿ ಸ್ಪರ್ಧಿ ಬಿಗ್​ಬಾಸ್​ ಇತಿಹಾಸದಲ್ಲಿಯೇ ಇರಲಿಲ್ಲ ಅಂತಾ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಇನ್ನು ಈ ಎಲ್ಲದರ ನಡುವೆ ಬಿಗ್​ಬಾಸ್​ ಸ್ಪರ್ಧಿ ವಿನಯ್​ ಗೌಡ ಪತ್ನಿ ಅಕ್ಷತಾ ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ನನ್ನ ಪತಿಯ ಹೆಸರು ಹಾಳಾಗುತ್ತಿದೆ ಎಂದು ಗೋಗರೆದಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ

ನನ್ನ ಪತಿ ತುಂಬಾ ಒಳ್ಳೆಯ ಮನುಷ್ಯ. ಸಮಾಜದಲ್ಲಿ ಇಂದು ಅವರ ಹೆಸರು ಹಾಳಾಗಿದೆ ಅಂದ್ರೆ ಅದಕ್ಕೆ ಬಿಗ್​ಬಾಸ್​ ಕಾರಣ ಅಂತಾ ಭಾವುಕರಾಗಿದ್ದಾರೆ. ಬೇಕು ಬೇಕಂತಲೇ ಪ್ರೋಮೋಗಳಲ್ಲಿ ನನ್ನ ಪತಿಯನ್ನು ವಿಲನ್​ರಂತೆ ತೋರಿಸುತ್ತಿದ್ದಾರೆ. ಅವರು ಮಾಡುವ ಒಳ್ಳೆಯ ಕೆಲಸಗಳು ಮೇನ್​ ಎಪಿಸೋಡ್​ನಲ್ಲಿ ಇರೋದೇ ಇಲ್ಲ.

Bigg Boss cheated on my husband says Bigg Boss Kannada Contest  Vinay wife Akshatha
Image Credit to Original Source

ನನ್ನ ಪತಿ ಇಮೇಜ್​ ಯಾಕೆ ಹಾಳು ಮಾಡುತ್ತಿದ್ದೀರಿ ಎಂದು ಪ್ರಶ್ನಿಸೋಣ ಅಂತಾ ಬಿಗ್​ಬಾಸ್​ ಟೀಂಗೆ ಕರೆ ಮಾಡಿದ್ರೆ ಅವರು ಕಾಲ್​ ರಿಸೀವ್ ಮಾಡುತ್ತಿಲ್ಲ. ನನ್ನ ಮಗನಿಗೆ ಶಾಲೆಯಲ್ಲಿ ನಿನ್ನ ಅಪ್ಪ ಕೆಟ್ಟವರು ಅಂತಾ ಹೇಳುತ್ತಿದ್ದಾರಂತೆ. ನನಗೆ ಅಂತಹ ಗಂಡನ ಜೊತೆ ಹೇಗೆ ಸಂಸಾರ ಮಾಡುತ್ತೀಯಾ ಎಂದು ಕೇಳ್ತಿದ್ದಾರೆ.

ಇದನ್ನೂ ಓದಿ : ರಂಗಿತರಂಗ ಹೀರೋ ಗ್ರ್ಯಾಂಡ್ ‌ರ್ರೀ ಎಂಟ್ರಿ: ದೂದ್‌ ಪೇಡಾ ದಿಗಂತ್ ಗೆ ಜೊತೆಯಾದ ನಿರೂಪ್ ಭಂಡಾರಿ

ನಮ್ಮನ್ನು ನಂಬಿ ನನ್ನ ಪತಿ ಅಂತವರಲ್ಲ ಎಂದು ಹೇಳಿದ್ದಾರೆ. ಇನ್ನು ಅಕ್ಷತಾ ಕಣ್ಣೀರು ಹಾಕಿದ ವಿಡಿಯೋಗಳ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಬಿಗ್​ಬಾಸ್​ ಮನೆ ಒಳಗೆ ನಿನ್ನ ಗಂಡ ಮಹಿಳಾ ಸ್ಪರ್ಧಿಗಳಿಗೆ ಕಣ್ಣೀರು ಹಾಕಿಸುತ್ತಿದ್ದಾನೆ. ಹೊರಗೆ ನೀನು ಕಣ್ಣೀರು ಹಾಕುತ್ತಿದ್ದೀಯಾ. ಕರ್ಮ ಎಂದರೆ ಇದೇ ಎಂದು ಹೇಳ್ತಿದ್ದಾರೆ .

Bigg Boss cheated on my husband says Bigg Boss Kannada Contest  Vinay wife Akshatha

Comments are closed.