ಮೇಘನಾ ರಾಜ್ ಕುಟುಂಬಕ್ಕೆ ಮುಗಿಯದ ಸಂಕಷ್ಟ….! ಫ್ಯಾಮಿಲಿಗೆ ಒಕ್ಕರಿಸಿದ ಕೊರೋನಾ…!!

  • ಪೂರ್ಣಿಮಾ ಹೆಗಡೆ

ಚಿರು ಇನ್ನಿಲ್ಲದ‌ ನೋವಿನ ನಡುವೆಯೇ ಜ್ಯೂನಿಯರ್ ಚಿರು ನೋಡಿ ಎಲ್ಲ ದುಃಖ ಮರೆಯೋ ಪ್ರಯತ್ನದಲ್ಲಿದ್ದ ಸುಂದರ ರಾಜ್ ಹಾಗೂ ಮೇಘನಾರಾಜ್ ಕುಟುಂಬಕ್ಕೆ ಕೊರೋನಾ ಸಂಕಷ್ಟ ಎದುರಾಗಿದೆ.ಮೇಘನಾ ರಾಜ್ ತಾಯಿ ಹಾಗೂ ಹಿರಿಯ ನಟಿ ಪ್ರಮೀಳಾ ಜೋಷಾಯ್ ಕೊರೋನಾ ಸೋಂಕಿಗೆ ತುತ್ತಾಗಿದ್ದು ಕಳೆದ ಮೂರು ದಿನದಿಂದ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ಸುಂದರ ರಾಜ್ ಹಾಗೂ ಮೇಘನಾ ರಾಜ್ ಕೊರೋನಾ ಟೆಸ್ಟ್ ಕೂಡ ಪಾಸಿಟಿವ್ ಬಂದಿದ್ದು, ಸುಂದರ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರುಗೆ ಕೊರೋನಾ ಟೆಸ್ಟ್ ಮಾಡಿಸಲಾಗಿಲ್ಲ. ಇನ್ನು ಮೇಘನಾ ಮನೆಯಲ್ಲೇ ಇದ್ದು ಮಗುವಿನೊಂದಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರಂತೆ.

ಪ್ರಮೀಳಾ ಜೋಷಾಯ್ ಮತ್ತು ಸುಂದರ ರಾಜ್ ಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಘನಾಗೆ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದ್ದರೂ ಯಾವುದೇ ರೋಗ ಲಕ್ಷಣವಿಲ್ಲದೇ ಆರೋಗ್ಯವಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಈ ಮೊದಲು ಸುಂದರ ರಾಜ್ ಕುಟುಂಬ ಎರಡು ಭಾರಿ ಕೊರೋನಾ ಪರೀಕ್ಷೆಗೆ ಒಳಪಟ್ಟಿತ್ತು. ಎರಡು ಭಾರಿ ನೆಗೆಟಿವ್ ಬಂದಿದ್ದು ಈ ಭಾರಿ ಕುಟುಂಬಕ್ಕೆ ಕುಟುಂಬವೇ ಕೊರೋನಾ ಸೋಂಕಿಗೆ ತುತ್ತಾಗಿದೆ. ಕಳೆದ ತಿಂಗಳು ಸುಂದರ ರಾಜ್ ಮನೆಯಲ್ಲಿ ಜ್ಯೂನಿಯರ್ ಚಿರುಗೆ ತವರಿನ ಕಡೆಯ ತೊಟ್ಟಿಲ ಶಾಸ್ತ್ರ ನೆರವೇರಿಸಲಾಗಿತ್ತು. ಈ ವೇಳೆ ಸಾಕಷ್ಟು ಸಂಬಂಧಿಕರು,ಸ್ನೇಹಿತರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಈ ಸಮಾರಂಭ ಹೊರತುಪಡಿಸಿದರೇ ಮೇಘನಾರಾಜ್ ಮನೆಯಿಂದ ಹೊರಕ್ಕೆ ಕಾಣಿಸಿಕೊಂಡಿರಲಿಲ್ಲ. ಆದರೂ ಕೊರೋನಾ ಸೋಂಕು ತಗುಲಿದ್ದು ಮುದ್ದು ಕಂದನಿರುವ ಮನೆಯಲ್ಲಿ ಕೊರೋನಾ ಸೋಂಕು ತಗುಲಿರುವುದನ್ನು ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ನೆಚ್ಚಿನ ನಟ ಕುಟುಂಬ ಬೇಗ ಚೇತರಿಸಿಕೊಳ್ಳಲಿ ಅಂತ ಪ್ರಾರ್ಥಿಸುತ್ತಿದ್ದಾರೆ.

ಇದಕ್ಕೂ ಮುನ್ನ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಸರ್ಜಾ ಕೊರೋನಾ ಪಾಸಿಟಿವ್ ಆಗಿದ್ದು ಬಳಿಕ ಚೇತರಿಸಿಕೊಂಡಿದ್ದರು.

Comments are closed.