ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿರುವ ಎಚ್.ವಿಶ್ವನಾಥ್ ಹಾಗೂ ಸಿ.ಪಿ.ಯೋಗೀಶ್ವರ್ ಅವರಿಗೆ ಲಕ್ ಖುಲಾಯಿಸಿದ್ದು, ಕೊನೆಗೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ರಾಜ್ಯವಿಧಾನ ಪರಿಷತ್ ಗೆ ಸಾಹಿತ್ಯ ಕ್ಷೇತ್ರದಿಂದ ಎಚ್.ವಿಶ್ವನಾಥ್, ಕಲಾ ಕ್ಷೇತ್ರದಿಂದ ಸಿ.ಪಿ.ಯೋಗೀಶ್ವರ್, ಸಮಾಜ ಸೇವಾ ಕ್ಷೇತ್ರದಿಂದ ಭಾರತಿ ಶೆಟ್ಟಿ, ಸೇವಾ ಕ್ಷೇತ್ರದಿಂದ ಶಾಂತರಾಮ್ ಸಿದ್ದಿ, ಹಾಗೂ ಶಿಕ್ಷಣ ಕ್ಷೇತ್ರದಿಂದ ಸಾಹೇಬಣ್ಣ ತಳವಾರ್ ಅವರು ಆಯ್ಕೆಯಾಗಿದ್ದಾರೆ.

ಈ ಪೈಕಿ ಭಾರತೀ ಶೆಟ್ಟಿ ಅವರು ಎರಡನೇ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಆದರೆ ರಾಜಕೀಯದಲ್ಲಿಯೇ ಇರದ ಸೇವಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವ ಸಾಹೇಬಣ್ಣ ತಳವಾರ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರಿರುವ ಶಾಂತರಾಮ್ ಸಿದ್ದಿ ಅವರ ಆಯ್ಕೆ ಅಚ್ಚರಿಯನ್ನು ತಂದಿದೆ. ಅದ್ರಲ್ಲೂ ರಾಜ್ಯ ಸರಕಾರ ಈ ಬಾರಿ ಸಿದ್ದ ಸಮುದಾಯಕ್ಕೆ ಮನ್ನಣೆಯನ್ನು ನೀಡಲಾಗಿದೆ.