monkey pox cases : ಕೋವಿಡ್ 19 ಆರಂಭಗೊಂಡು 2 ವರ್ಷಗಳೇ ಕಳೆದರೂ ಸಹ ಈಗಲೂ ಈ ಮಾರಕ ಸೋಂಕಿನಿಂದ ಸಾವನ್ನಪ್ಪುವವರಿದ್ದಾರೆ. ಸರ್ಕಾರಗಳು ಕೋವಿಡ್ ಸೋಂಕು ತಡೆಗಟ್ಟಲು ಲಸಿಕೆಗಳನ್ನು ಪೂರೈಕೆ ಮಾಡುತ್ತಲೇ ಇದೆ ಆದರೂ ಸಹ ಇಂದಿಗೂ ಕೋವಿಡ್ ಮುಕ್ತ ವಿಶ್ವವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಪ್ಲೇಗ್, ಕಾಲರಾದಂತಹ ಮಹಾಮಾರಿ ಜಗತ್ತಿಗೆ ಅಪ್ಪಳಿಸಿತ್ತಾದರೂ ಸಹ ಈಗಿನ ಜನತೆಗೆ ಕೋವಿಡ್ ಮಹಾಮಾರಿ ಬಳಿಕವೇ ಸಾಂಕ್ರಾಮಿಕ ಕಾಯಿಲೆಗಳ ಭೀಕರತೆ ಸ್ಪಷ್ಟವಾಗಿ ಅರ್ಥವಾಗಿದೆ. ಜಗತ್ತಿಗೆ ಇನ್ನೂ ಕೋವಿಡ್ನ ಭಯ ಇರುವಾಗಲೇ ಇದೀಗ ಮಂಕಿ ಪಾಕ್ಸ್ ಎಂಬ ಕಾಯಿಲೆಯು ಮುನ್ನೆಲೆಗೆ ಬಂದಿದೆ. ಕೇರಳದಲ್ಲಿ ಈಗಾಗಲೇ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ.
ಏನಿದು ಮಂಕಿಪಾಕ್ಸ್ ..?
ಹಿಂದೆ ನಿಫಾ ಎಂಬ ಕಾಯಿಲೆಯೊಂದು ಬಂದಿತ್ತು. ಬಾವಲಿಗಳಿಂದ ಈ ಕಾಯಿಲೆ ಮಾನವರಿಗೆ ಹಬ್ಬುತ್ತಿತ್ತು. ಅದೇ ರೀತಿ ಮಂಕಿಪಾಕ್ಸ್ ಕೂಡ ಪ್ರಾಣಿಗಳಿಂದಲೇ ಮನುಷ್ಯರಿಗೆ ಬರುವ ಕಾಯಿಲೆಯಾಗಿದೆ. ಪಾಕ್ಸ್ ವೈರಸ್ಗಳಿಂದ ಹೇಗೆ ಮನುಷ್ನಿಗೆ ಸ್ಮಾಲ್ ಪಾಕ್ಸ್ಗಳು ಬರುತ್ತವೆಯೋ ಇದು ಕೂಡ ಅದೇ ರೀತಿಯ ಕಾಯಿಲೆಯಾಗಿದೆ ಇಲಿಗಳಿಂದ ಈ ಕಾಯಿಲೆಯು ಮನುಷ್ಯರಿಗೆ ಬರುತ್ತದೆ. ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಮಂಕಿಪಾಕ್ಸ್ ಸೋಂಕು ಸಾಂಕ್ರಾಮಿಕ ರೋಗವಾಗಿದೆ. ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸೋಂಕು ಇದೀಗ ಕೇರಳದವರೆಗೂ ಪಸರಿಸಿದೆ.
ಹೇಗೆ ಹರಡುತ್ತದೆ..?
ಮಂಕಿ ಪಾಕ್ಸ್ ಸೋಂಕಿತ ಪ್ರಾಣಿಯ ಸಂಪರ್ಕದಿಂದ ಈ ಕಾಯಿಲೆ ಉಂಟಾಗುತ್ತದೆ. ಮಂಕಿಪಾಕ್ಸ್ ಸೋಂಕಿತ ಪ್ರಾಣಿಯ ಮೇಲಾದ ಗಾಯದ ನೀರು ಮನುಷ್ಯನ ಚರ್ಮಕ್ಕೆ ಸೋಕಿದರೆ ಅಥವಾ ಸೋಂಕಿತ ಪ್ರಾಣಿಯು ಮನುಷ್ಯನನ್ನು ಕಚ್ಚುವ ಅಥವಾ ಪರಚಿದರೆ ಈ ಸೋಂಕು ಮನುಷ್ಯರಿಗೂ ಹರಡುತ್ತದೆ. ಇದಾದ ಬಳಿಕ ಮನುಷ್ಯನಿಂದ ಮನುಷ್ಯನಿಗೆ ಈ ಕಾಯಿಲೆಯು ಹರಡುತ್ತಾ ಹೋಗುತ್ತದೆ.
ಏನಿದರ ಲಕ್ಷಣ..?
ಒಬ್ಬ ವ್ಯಕ್ತಿಗೆ ಮಂಕಿ ಪಾಕ್ಸ್ ಸೋಂಕು ತಗುಲಿದಲ್ಲಿ ಲಕ್ಷಣಗಳು ಗೋಚರವಾಗಲು 7 ರಿಂದ 21 ದಿನಗಳನ್ನು ತೆಗೆದುಕೊಳ್ಳುತ್ತದೆ. ಜ್ವರ, ಮೈ ಕೈ ನೋವು, ತಲೆ ನೋವು, ಬೆನ್ನು ನೋವು, ಮೈ ನಡುಗುವುದು, ವಿಪರೀತ ಸುಸ್ತು ಹಾಗೂ ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತವೆ. ಇದಾದ ಬಳಿಕ ಮೊದಲನೆಯದಾಗಿ ಮುಖಕ್ಕೆ ಹಾಗೂ ಕ್ರಮೇಣ ಮೈ ತುಂಬ ದದ್ದುಗಳು ಉಂಟಾಗುತ್ತದೆ.
ಈ ದದ್ದುಗಳು ಮೊದಲ ಪಾರದರ್ಶಕವಾಗಿರುತ್ತದೆ. ಕ್ರಮಣ ಇವುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಕೀವು ಕೂಡ ಇರುತ್ತದೆ, ಈ ದದ್ದುಗಳು ಗಟ್ಟಿಯಾಗುತ್ತದೆ. ಬಳಿಕ ಒಣಗಿ ಬಿದ್ದು ಹೋಗುತ್ತದೆ. ಎರಡರಿಂದ ನಾಲ್ಕು ವಾರಗಳ ಕಾಲ ಈ ಸೋಂಕು ಇರುತ್ತದೆ .
ಚಿಕಿತ್ಸೆಯೇನು..?
ಇದಕ್ಕೆ ಆಂಟಿ ವೈರಲ್ ಔಷಧಿಯನ್ನು ಬಿಟ್ಟರೆ ಯಾವುದೇ ನಿರ್ದಿಷ್ಟ ಔಷಧಿಗಳಿಲ್ಲ. ಇದಕ್ಕೆಂದುನೀಡಲಾಗುವ ವ್ಯಾಕ್ಸಿನ್ ಸೋಂಕಿನ ವಿರುದ್ಧ 85 ಪ್ರತಿಶತ ಪರಿಣಾಮಕಾರಿಯಾಗಿದೆ. 28 ದಿನಗಳ ಅಂತರದಲ್ಲಿ 2 ಡೋಸ್ಗಳನ್ನು ನೀಡಲಾಗುತ್ತದೆ.
ಮುನ್ನೆಚ್ಚರಿಕಾ ಕ್ರಮ :
ವಿಶ್ವ ಆರೋಗ್ಯ ಸಂಸ್ಥೆಯು ಲೈಂಗಿಕ ಕ್ರಿಯೆಯ ಮೂಲಕವೂ ಮಂಕಿಪಾಕ್ಸ್ ಸೋಂಕು ಹರಡುತ್ತದೆ ಎಂದು ಹೇಳಿದೆ. ಹೀಗಾಗಿ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವೆಲ್ಲ ರೀತಿಯಲ್ಲಿ ಕಾಳಜಿ ಮಾಡುತ್ತೆವೆಯೋ ಅದೇ ರೀತಿಯ ಮುಂಜಾಗ್ರತಾ ಕ್ರಮ ಮಂಕಿಪಾಕ್ಸ್ ವಿಚಾರದಲ್ಲಿಯೂ ಅಗತ್ಯ, ಮಾಸ್ಕ್ ಬಳಕೆ, ಸಾಮಾಜಿಕ ಅಂತರ, ನೈರ್ಮಲ್ಯ ಕಾಪಾಡಿಕೊಳ್ಳುವುದು ಇವೆಲ್ಲದರ ಜೊತೆಯಲ್ಲಿ ಪ್ರಾಣಿಗಳ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ.
ಇದನ್ನು ಓದಿ : Droupadi Murmu takes oath : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ
ಇದನ್ನೂ ಓದಿ : presidents takes oath : ಜುಲೈ 25ರಂದೇ ದೇಶದ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸುವುದೇಕೆ : ಇಲ್ಲಿದೆ ಕಾರಣ
monkey pox cases alarming day by day know about the symptoms and treatment first