karnataka cet : ಜುಲೈ 30ರಂದು ಸಿಇಟಿ ಫಲಿತಾಂಶ ಪ್ರಕಟ : ಸಚಿವ ಡಾ.ಸಿ.ಎನ್​ ಅಶ್ವತ್ಥ ನಾರಾಯಣ ಮಾಹಿತಿ

ಬೆಂಗಳೂರು : karnataka cet : ರಾಜ್ಯದಲ್ಲಿ ನಡೆದಿರುವ ಸಿಇಟಿ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 30ರಂದು ಪ್ರಕಟಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್​ ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ. ಜೂನ್​ ಮಧ್ಯ ವಾರದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಇಂದು ಸಚಿವ ಡಾ.ಸಿ.ಎನ್​ ಅಶ್ವತ್ಥ ನಾರಾಯಣ ಫಲಿತಾಂಶ ಘೋಷಣೆಯ ದಿನಾಂಕವನ್ನು ಪ್ರಕಟಿಸಿದ್ದಾರೆ.


ಪರೀಕ್ಷಾ ಅಕ್ರಮಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಈ ಬಾರಿ ಸಿಇಟಿ ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಹಾಗೂ ಭದ್ರತೆಗಳ ಸಮೇತ ನಡೆಸಲಾಗಿತ್ತು. ಈ ಬಾರಿ ಸಿಬಿಎಸ್​ಇ ಹಾಗೂ ಐಸಿಎಸ್​ಇ ಪಠ್ಯ ಕ್ರಮದ ವಿದ್ಯಾರ್ಥಿಗಳಿಗೂ ಜೂನ್​ ಮಧ್ಯಭಾಗದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅವಕಾಶವನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ಜುಲೈ 26ರರ(ಮಂಗಳವಾರ) ಒಳಗಾಗಿ ತಮ್ಮ ಅಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಲಾಗಿದೆ.


ಜೂನ್​ 16,17 ಹಾಗೂ 18ರಂದು ರಾಜ್ಯದಲ್ಲಿ ಸಿಇಟಿ ಪರೀಕ್ಷೆಗಳನ್ನು ನಡೆಸಲಾಗಿತ್ತು.ಜುಲೈ 30ರಂದು ಪ್ರಕಟವಾಗುವ ಫಲಿತಾಂಶವನ್ನು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ kea.kar.nic.in ನಲ್ಲಿ ವೀಕ್ಷಿಸಬಹುದಾಗಿದೆ . ಇಂಜಿನಿಯರಿಂಗ್​ ಸೇರಿದಂತೆ ವಿವಿಧ ವೃತ್ತಿ ಪರ ಕೋರ್ಸ್​ಗಳಿಗೆ ಸಿಇಟಿ ಅಂಕ ಮುಖ್ಯವಾಗಿದೆ.

CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) CBSE 12 ನೇ ತರಗತಿ ಫಲಿತಾಂಶಗಳನ್ನು 2022 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಟರ್ಮ್ 1 ಮತ್ತು ಟರ್ಮ್ 2 ಪರೀಕ್ಷೆಗಳಿಗೆ ನೀಡಲಾದ ಅಂಕಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ ಹಾಗೂ ಡಿಜಿಲಾಕರ್‌ ಮೂಲಕ ಫಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ.

ಸಿಬಿಎಸ್‌ಇ ಬೋರ್ಡ್‌ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಎಪ್ರಿಲ್‌ 26 ರಿಂದ ಜೂನ್‌ 15ರ ವರೆಗೆ ನಡೆಸಿತ್ತು. ಇಂದು ಬೆಳಗ್ಗೆ 9:30ಕ್ಕೆ ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿತ್ತು. ಅಲ್ಲದೇ ಇಂದು ಮಧ್ಯಾಹ್ನ 2 ಗಂಟೆಗೆ 10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ. ದೇಶದಾದ್ಯಂತ ಒಟ್ಟು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಈ ಪೈಕಿ 91.54% ರಷ್ಟು ವಿದ್ಯಾರ್ಥಿಗಳು ಹಾಗೂ 91.25% ಬಾಲಕರು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳು ಈಗ ಅಧಿಕೃತ ಪೋರ್ಟಲ್ – cbseresults.nic.in ಮತ್ತು DigiLocker ಅಪ್ಲಿಕೇಶನ್ ಮತ್ತು Umang ಅಪ್ಲಿಕೇಶನ್ ಮೂಲಕ ಲಾಗ್ ಇನ್ ಮಾಡುವ ಮೂಲಕ CBSE XII ಫಲಿತಾಂಶ 2022 ಅನ್ನು ಟರ್ಮ್ 2 ಗಾಗಿ ಪರಿಶೀಲಿಸಬಹುದು. ತಮ್ಮ CBSE 12 ನೇ ತರಗತಿ ಫಲಿತಾಂಶಗಳನ್ನು 2022 ಪರಿಶೀಲಿಸಲು, ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ ಮತ್ತು ಅವರ ಪರೀಕ್ಷಾ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ನಮೂದಿಸಬೇಕಾಗುತ್ತದೆ. ಈ ವಿವರಗಳನ್ನು ಇನ್‌ಪುಟ್ ಮಾಡಿದ ನಂತರ, ವಿದ್ಯಾರ್ಥಿಗಳಿಗೆ CBSE 12ನೇ ಫಲಿತಾಂಶ 2022 ಅಂಕಪಟ್ಟಿ ಅಥವಾ ಅಂತಿಮ ಫಲಿತಾಂಶಗಳನ್ನು ಒಳಗೊಂಡಿರುವ ಮಾರ್ಕ್‌ಶೀಟ್ ಅನ್ನು ಒದಗಿಸಲಾಗುತ್ತದೆ.

ಇದನ್ನು ಓದಿ : monkey pox cases : ಏನಿದು ಮಂಕಿ ಪಾಕ್ಸ್​ ಸೋಂಕು, ಲಕ್ಷಣಗಳೇನು, ಮುಂಜಾಗ್ರತಾ ಕ್ರಮ ಹೇಗಿರಬೇಕು : ಇಲ್ಲಿದೆ ಮಾಹಿತಿ

ಇದನ್ನೂ ಓದಿ : Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ

Comments are closed.