Death Threat : ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಗೆ ಕೊಲೆ ಬೆದರಿಕೆ; ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿವಾಹವಾದ ಬಾಲಿವುಡ್ ನಟರಾದ ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆಗಳು ಬಂದಿವೆ ಎಂದು ಮುಂಬೈ ಪೊಲೀಸರು ವರದಿ ಮಾಡಿದ್ದಾರೆ.ಸುದ್ದಿ ಸಂಸ್ಥೆ ಎಎನ್ ಐ (ANI) ವರದಿ ಮಾಡಿದಂತೆ, ಮುಂಬೈ ಪೊಲೀಸರು ಸಾಮಾಜಿಕ ಮಾಧ್ಯಮದ ಮೂಲಕ ನಟರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 506-II (ಅಪರಾಧ ಬೆದರಿಕೆ) ಮತ್ತು 354-ಡಿ (ಹಿಂಬಾಲಿಸುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ(Death Threat).

ಕೆಲ ಸಮಯದ ಹಿಂದೆ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೂ ಪತ್ರದ ರೂಪದಲ್ಲಿ ಕೊಲೆ ಬೆದರಿಕೆ ಬಂದಿತ್ತು. ಮೇ ತಿಂಗಳಲ್ಲಿ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರಂತೆಯೇ ತಂದೆ-ಮಗ ಜೋಡಿಯು ಅದೇ ಸಮಸ್ಯೆ ಎದುರಿಸುತ್ತಾರೆ ಎಂದು ಅದು ಉಲ್ಲೇಖಿಸಿದೆ. ಘಟನೆಯ ನಂತರ ಸಲ್ಮಾನ್ ಮತ್ತು ಅವರ ಕುಟುಂಬದ ಭದ್ರತೆಯನ್ನು ಹೆಚ್ಚಿಸಲಾಗಿದೆ.ವರದಿಗಳ ಪ್ರಕಾರ, ಬೆದರಿಕೆಯ ಬಗ್ಗೆ ವಿಕ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕತ್ರೀನಾ ಈ ವರ್ಷ ಮಾಲ್ಡೀವ್ಸ್‌ನಲ್ಲಿ ತನ್ನ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9, 2021 ರಂದು ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ರಾಜಸ್ಥಾನದಲ್ಲಿ ಭವ್ಯವಾದ ವಿವಾಹದಲ್ಲಿ ವಿವಾಹವಾದರು. ಆದರೆ ಮದುವೆಗೆ ಮೊದಲು, ವಿಕ್ಕಿ ಅಥವಾ ಕತ್ರಿನಾ ಅವರ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ಕತ್ರಿನಾ ‘ಮೆರ್ರಿ ಕ್ರಿಸ್‌ಮಸ್’ನಲ್ಲಿ ವಿಜಯ್ ಸೇತುಪತಿಯೊಂದಿಗೆ ನಟಿಸಲಿದ್ದಾರೆ. ಮುಂಬರುವ ಚಿತ್ರವನ್ನು ಶ್ರೀರಾಮ್ ರಾಘವನ್ ಅವರು ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ಜೊತೆ ‘ಟೈಗರ್ 3’ ಕೂಡ ಇದೆ.

ಮತ್ತೊಂದೆಡೆ, ವಿಕ್ಕಿ ಪ್ರಸ್ತುತ ಮೇಘನಾ ಗುಲ್ಜಾರ್ ಅವರ ಬಹು ನಿರೀಕ್ಷಿತ ಚಿತ್ರ ಸ್ಯಾಮ್ ಬಹದ್ದೂರ್, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಅವರ ಜೀವನಚರಿತ್ರೆಗಾಗಿ ತಯಾರಿಯಲ್ಲಿ ನಿರತರಾಗಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರ ಇನ್ನೂ ಟೈಲ್ಡ್ ಆಗದ ಚಿತ್ರದಲ್ಲಿ ಅವರು ಸಾರಾ ಅಲಿ ಖಾನ್ ಅವರೊಂದಿಗೆ ಸ್ಕ್ರೀನ್ ಹಂಚಲಿದ್ದಾರೆ . ನಂತರ ಅವರು ಭೂಮಿ ಪೆಡ್ನೇಕರ್ ಅವರೊಂದಿಗೆ ‘ಗೋವಿಂದಾ ನಾಮ್ ಮೇರಾ’ ಸಹ ಹೊಂದಿದ್ದಾರೆ.

ಇದನ್ನೂ ಓದಿ: Coorg Tourist Places: ‘ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ’; ಕೂರ್ಗ್ ನಲ್ಲಿ ಇವುಗಳನ್ನು ಮಿಸ್ ಮಾಡದೇ ಭೇಟಿ ನೀಡಿ

(Death Threat to Katrina Kaif and Vicky Kaushal)

Comments are closed.