ಬ್ರಹ್ಮಾವರ : ತನ್ನದೇ ಊರಿನ ವಿವಾಹಿತ ಮಹಿಳೆಯೋರ್ವರು ವ್ಯಕ್ತಿಯೋರ್ವನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದವನನ್ನೇ ಮಹಿಳೆಯ ಪ್ರಿಯಕರ ಬರ್ಭರವಾಗಿ ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕರ್ಜೆ ಸಮೀಪದ ಗುಡ್ಡೆಯಂಗಡಿಯಲ್ಲಿ ನಡೆದಿದೆ.
ಹೊಸೂರು ಗ್ರಾಮದ ಉದ್ಕಳ ನಿವಾಸಿಯಾಗಿರುವ ನವೀನ್ ನಾಯ್ಕ ಎಂಬವರೇ ಕೊಲೆಯಾದ ದುರ್ದೈವಿ. ಗುಡ್ಡೆಯಂಗಡಿಯ ನಿವಾಸಿಯಾಗಿರುವ ಸರಸ್ವತಿ ಎಂಬಾಕೆಯ ಮನೆಗೆ ಮಲ್ಪೆಯ ನಿವಾಸಿಯಾಗಿರುವ ಗೌತಮ್ ಎಂಬಾತ ಪದೇ ಪದೇ ಭೇಟಿ ನೀಡುತ್ತಿದ್ದ. ಇದನ್ನ ನೋಡಿದ ನವೀನ್ ಮಹಿಳೆಗೆ ಬುದ್ದಿ ಮಾತು ಹೇಳಿದ್ದಾನೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 15 ದಿನಗಳ ಹಿಂದೆಯಷ್ಟೇ ಗಲಾಟೆಯೂ ನಡೆದಿತ್ತು.
ನಂತರದಲ್ಲಿ ಗೌತಮ್ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಬಂದಿದ್ದ ನವೀನ್ ನನ್ನು ತನ್ನ 6 ಮಂದಿ ಸ್ನೇಹಿತರ ಜೊತೆಗೂಡಿ ಹತ್ಯೆ ಮಾಡಿದ್ದಾನೆ. ಅಲ್ಲದೇ ಗಲಾಟೆಯ ಬೆನ್ನಲ್ಲೇ ಸರಸ್ವತಿ ನವೀನ್ ಮನೆಗೆ ಬಂದ ತಾನು ಗೌತಮ್ ನನ್ನು ವಿವಾಹವಾಗಲಿದ್ದೇನೆ . ಒಂದೊಮ್ಮೆ ನಮ್ಮ ವಿಚಾರದಲ್ಲಿ ಮೂಗು ತೂರಿಸಿದ್ರೆ ಗೌತಮ್ ನಿನ್ನನ್ನ ಕೊಲೆ ಮಾಡುವುದಾಗಿ ಸರಸ್ವತಿ ಬೆದರಿಕೆಯೊಡ್ಡಿದ್ದಾಳೆ ಎನ್ನಲಾಗುತ್ತಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಬ್ರಹ್ಮಾವರ ಠಾಣೆಯ ಪೊಲೀಸರು ಘಟನೆ ನಡೆದ ಮೂರು ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.