ಸೋಮವಾರ, ಏಪ್ರಿಲ್ 28, 2025
HomeBreakingಮೈಸೂರು ದಸರಾಕ್ಕೂ ಕೊರೋನಾ ಭೀತಿ…! ನಾಡಹಬ್ಬಕ್ಕೆ ಬರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ..!!

ಮೈಸೂರು ದಸರಾಕ್ಕೂ ಕೊರೋನಾ ಭೀತಿ…! ನಾಡಹಬ್ಬಕ್ಕೆ ಬರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ..!!

- Advertisement -

ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೂ ಕೊರೋನಾ ಸೋಂಕಿನ ಬಿಸಿ ತಟ್ಟಿದ್ದು, ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದ ಜಿಲ್ಲಾಡಳಿತ  ಈ ಬಾರಿ ದಸರಾವನ್ನು ಮನೆಯಲ್ಲೇ ಕುಳಿತು ನೋಡಿ ಎನ್ನುತ್ತಿದೆ. ಇದಲ್ಲದೇ ದಸರಾದಲ್ಲಿ ಪಾಲ್ಗೊಳ್ಳುವವರಿಗೆ ಕೊರೋನಾ ಸೋಂಕು ಪರೀಕ್ಷೆ ಕಡ್ಡಾಯ ಎನ್ನುವ ಮೂಲಕ ಹಬ್ಬ ಸವಿ ಸವಿಯುವ ಸಂಭ್ರಮದಲ್ಲಿದ್ದವರಿಗೆ ಶಾಕ್ ನೀಡಿದೆ.

 ಸಚಿವ ಎಸ್.ಟಿ.ಸೋಮಶೇಖರ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು,  ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯ.  ನಿಯಮ ಸಚಿವರು,ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ದಸರಾ ಸಮಿತಿ ರೂಪಿಸಿದ ಎಲ್ಲ ನಿಯಮಗಳನ್ನು ನಾವು ಚಾಚು ತಪ್ಪದೆ ಪಾಲಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಪರೀಕ್ಷೆ ಕಡ್ಡಾಯ ಎಂದಿದ್ದಾರೆ.

ಈಗಾಗಲೇ ದಸರಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಅವುಗಳ ಪರಿಶೀಲನೆ ವೇಳೆ ಸಂಗತಿ ಬಹಿರಂಗಪಡಿಸಿದ್ದಾರೆ. ಈಗಾಗಲೇ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 26 ರಂದು ಜಂಬೂಸವಾರಿ ನಡೆಯಲಿದ್ದು, ಅದಕ್ಕಾಗಿ ತಾಲೀಮು ನಡೆದಿದೆ. ಉದ್ಘಾಟನೆಗೆ ಕೆಲ ಸಚಿವರು ಮಾತ್ರ ಆಗಮಿಸಲಿದ್ದು, ಬಹುತೇಕ ಸಚಿವರು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕೊರೋನಾ ಸೋಂಕಿನ ಅಪಾಯ ಇರೋದರಿಂದ ಹೆಚ್ಚಿನ ಜನಸಾಂದ್ರತೆಗೆ ಅವಕಾಶ ನೀಡದೆ ನಾಡಹಬ್ಬ ಆಚರಿಸಲು ಸಿದ್ಧತೆ ನಡೆದಿದೆ. ಸರಳಾ ದಸರಾ ಆಚರಣೆ ನಡೆಯಲಿದೆ ಎಂದಿದ್ದಾರೆ.

RELATED ARTICLES

Most Popular