ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದ ಸ್ಟಾರ್..! ಉತ್ತರ ಕರ್ನಾಟಕದ ಜನರ ಕಣ್ಣೀರು ಒರೆಸಲು ಸಿದ್ಧವಾದ ಕಿಚ್ಚ ಸುದೀಪ್..!

ಸ್ಟಾರ್ ಗಳು ಕೇವಲ ಸಿನಿಮಾದಲ್ಲಿ ಸಮಾಜಸೇವೆ ಮಾಡೋ ಪಾತ್ರ ಮಾಡ್ತಾರೆ. ನಿಜ ಜೀವನದಲ್ಲಿ ಯಾರ ಸಹಾಯಕ್ಕೂ ಬರೋದಿಲ್ಲ ಅನ್ನೋ ಟೀಕೆ ಇದೆ. ಆದರೆ ಕಿಚ್ಚ್ ಸುದೀಪ್ ಈ ಮಾತಿಗೆ ಅಪವಾದದಂತಿದ್ದು, ಸದಾಕಾಲ ನೊಂದವರ ಹಾಗೂ ಅಗತ್ಯ ಉಳ್ಳವರ ಸಹಾಯಕ್ಕೆ ಧಾವಿಸುತ್ತಿದ್ದಾರೆ. ಈಗ ಉತ್ತರ ಕರ್ನಾಟಕದ ಜನರ ಕಣ್ಣಿರು ಒರೆಸಲು ಮುಂದಾಗಿದ್ದು, ಸಹಾಯವಾಣಿ ಆರಂಭಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗಾಗಿ ಕಿಚ್ಚ ಸುದೀಪ್ ಮನಸ್ಸು ಮಿಡಿದಿದ್ದು, ಅವರ ಸಹಾಯಕ್ಕಾಗಿ ತಮ್ಮ ಟ್ರಸ್ಟ್ ಮೂಲಕ ಸಹಾಯಹಸ್ತ ಚಾಚಿದ್ದು, ಅಗತ್ಯ ವಸ್ತುಗಳನ್ನು ಒದಗಿಸಲು ಮುಂದಾಗಿದ್ದಾರೆ. ಸಹಾಯವಾಣಿ ಆರಂಭಿಸಿರುವ ಕಿಚ್ಚ ಸುದೀಪ್ ಟ್ರಸ್ಟ್, ಅಗತ್ಯ ಉಳ್ಳವರು ದೂರವಾಣಿ ಕರೆ ಮಾಡಿ ಅಗತ್ಯ ವಸ್ತುಗಳ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.

ರಾಯಚೂರು, ಹುಬ್ಬಳ್ಳಿ, ಕಲ್ಬುರ್ಗಿ,ಯಾದಗಿರಿ ಜನರಿಗಾಗಿ ಸಹಾಯವಾಣಿ ಆರಂಭಿಸಿರುವ ಟ್ರಸ್ಟ್, ನೀವು ಈಗಾಗಲೇ ಹಿಂದಿನ ವರ್ಷ ಸುರಿದ ಮಳೆಗೆ ಕಂಗಾಲಾಗಿದ್ದೀರಿ. ಚೇತರಿಸಿಕೊಳ್ಳುವಷ್ಟರಲ್ಲಿ ಕೊರೋನಾ ಮಹಾಮಾರಿ ಆವರಿಸಿದೆ. ಈಗ ಮತ್ತೆ ಪ್ರವಾಹ ನಿಮ್ಮನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ನೀವು ಕಷ್ಟದಲ್ಲಿದ್ದೀರಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ. ದೂರವಾಣಿ ಕರೆ ಮಾಡಿ. ಅಗತ್ಯವಿರೋ ವಸ್ತುಗಳ ಮಾಹಿತಿ ನೀಡಿ ಎಂಬರ್ಥದಲ್ಲಿ ಸಂದೇಶ ಸಿದ್ಧಪಡಿಸಿದ್ದಾರೆ.

ಈ ಹಿಂದೆಯೂ ಸುದೀಪ್ ಟ್ರಸ್ಟ್ ಹಲವು ಅಗತ್ಯ ಉಳ್ಳವರ ಸಹಾಯಕ್ಕೆ ಧಾವಿಸಿದ್ದು, ರೋಗಿಗಳಿಗೆ ಚಿಕಿತ್ಸೆ, ವಿದ್ಯಾರ್ಥಿಗಳ ಶುಲ್ಕ ಪಾವತಿ, ಮದುವೆಗೆ ಧನಸಹಾಯ, ವಿದ್ಯಾರ್ಥಿಗಳಿಗೆ ಶೂ ವಿತರಣೆ ಹೀಗೆ ಅಗತ್ಯ ಉಳ್ಳವರ ಸಹಾಯಕ್ಕೆ ಸುದೀಪ್ ಸ್ಪಂದಿಸಿದ್ದಾರೆ.

ವೃದ್ಧಾಶ್ರಮ ನಡೆಸಲು ಮುಂದಾಗಿರುವ ಸುದೀಪ್, ತಮ್ಮ ಹುಟ್ಟುಹಬ್ಬದಂದು ವೃದ್ಧಾಶ್ರಮ ನಿರ್ಮಾಣಕ್ಕೆ ಚಾಲನೆ ಕೂಡ ನೀಡಿದ್ದಾರೆ. ಈಗ ನೀರಿನಲ್ಲಿ ಬದುಕು ಕೊಚ್ಚಿಕೊಂಡು ಹೋಗಿ ಅಕ್ಷರಷಃ ಬೀದಿಗೆ ಬಂದಿರುವ ಉತ್ತರ ಕರ್ನಾಟಕದ ಜನರ ನೆರವಿಗೆ ಧಾವಿಸಿ ನಿಜಾರ್ಥದಲ್ಲಿ ಚಕ್ರವರ್ತಿ ಎನ್ನಿಸಿದ್ದಾರೆ.

Comments are closed.