ಏಳನೀರನ್ನು ಒಂದೇ ಪ್ಲೇವರ್ ಹಾಗೂ ರುಚಿಯಲ್ಲಿ ಕುಡಿದು ಬೇಸರವಾಗಿದ್ಯಾ? ಹಾಗಿದ್ರೆ ನೀವೊಮ್ಮೆ ಮೈಸೂರಿಗೆ ಹೋಗಿ ಬನ್ನಿ. ಅಲ್ಲಿ ನಿಮಗೆ ಸಿಗಲಿದೆ ಪ್ಲೇವರ್ ಹಾಗೂ ಸ್ವಾದ ಹೆಚ್ಚಿಸಿದ ಏಳನೀರು. ಇದು ಕೋಕೋನೆಕ್ಸ್ಟ್ ಕೆಫೆಯ ವೈಶಿಷ್ಟ್ಯತೆ.

ಮೈಸೂರಿನ ಸರಸ್ವತಿಪುರಂನಲ್ಲಿ ವಿದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವಂತ ಏಳನೀರಿನ ಸ್ವಾದ ಹೆಚ್ಚಿಸುವ ಕೆಫೆ ಆರಂಭವಾಗಿದ್ದು, ಕೇವಲ ಸರಸ್ವತಿಪುರಂ ಮಾತ್ರವಲ್ಲ ನಗರದ 12 ಕಿಯೋಸ್ಕ್ ಹಾಗೂ ಆನ್ ಲೈನ್ ನಲ್ಲೂ ಈ ಏಳನೀರನ್ನು ಸವಿಯುವ ಅವಕಾಶ ಗ್ರಾಹಕರಿಗೆ ಇದೆ.

ಬ್ಯಾಂಕಾಕ್ ಹಾಗೂ ಥೈಲ್ಯಾಂಡ್ ಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಮಾದರಿಯ ಕೆಫೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿದ್ದು, ನಾಗಾರ್ಜುನ್, ಅದ್ವಿತ್ ಹಾಗೂ ಪವನ್ ಪಾರ್ಟನರಶಿಪ್ ನಲ್ಲಿ ಈ ಕೆಫೆ ಆರಂಭಿಸಿದ್ದಾರೆ.

ಇಲ್ಲಿ ಸ್ವಾಭಾವಿಕವಾಗಿ ಸಿಗುವ ಏಳನೀರಿಗೆ ವಿವಿಧ ಹಣ್ಣುಗಳು, ಬ್ಲಾಕ್ ಬೆರ್ರಿ, ಲೀಚ್, ಮ್ಯಾಂಗೋ,ಕಿವಿ,ಆರೇಂಜ್,ಸ್ಟ್ರಾಬೆರಿಯಂತಹ ಪ್ಲೇವರ್ ಗಳನ್ನು ಸ್ವಾದ ಹೆಚ್ಚಿಸಿ ನೀಡಲಾಗುತ್ತದೆ. ಇದರೊಂದಿಗೆ ಏಳನೀರಿನ ಎಳೆಯ ತಿರುಳು(ಗಂಜಿ) ಐಸ್ಕ್ರೀಂ,ಪ್ರೂಟ್ ಸಲಾಡ್,ವೆಜಿಟೆಬಲ್ ಸಲಾಡ್,ಮ್ಯಾಕ್ಸ್ ಟೇಲ್ಸ್, ಪಾಪಿಂಗ್ ಬೂಬಾ ಎಂಬ ಹೆಸರಿನ ವಿಶಿಷ್ಟ ಸ್ವಾದಿಷ್ಟ ತಿನಿಸು ಹಾಗೂ ಪಾನಿಯಗಳು ಲಭ್ಯವಿದೆ.

ನೇರವಾಗಿ ರೈತರಿಂದ ಏಳನೀರು ಸಂಗ್ರಹಿಸುವ ಕೋಕೋಕೆಫೆ, ಅದನ್ನು ಕೆತ್ತಿ ಅದಕ್ಕೆ ಕೆಡದಂತೆ ಬಯೋಡಿಗ್ರೇಡೆಬಲ್ ಕಾಗದ ಸುತ್ತಿ ತಾಜಾತನ ಕಾಯ್ದುಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ ಕೇವಲ ಏಳನೀರು ಕುಡಿಯಲು ಕೂಡ ಅವಕಾಶವಿದ್ದು, ಆಕರ್ಷಕ ಏಳನೀರು ಒಫನರ್ ಕೂಡ ಇಲ್ಲಿ ಲಭ್ಯವಿದೆ.

ಕೊಕೊನೆಕ್ಸ್ಟ್ ತನ್ನದೇ ಫ್ಯಾಕ್ಟರಿ ಹೊಂದಿದ್ದು, ಅಲ್ಲಿಂದ ಐಟಂಗಳನ್ನು ಸಿದ್ಧಪಡಿಸಿ ಪೊರೈಸಲಾಗುತ್ತದೆ. ಆನ್ ಲೈನ್ ಆರ್ಡರ್ ಮತ್ತು ಡೆಲಿವರು ಲಭ್ಯವಿದೆ. 40 ರೂಪಾಯಿಯಿಂದ ಏಳನೀರಿನ ಐಟಂಗಳು ಇಲ್ಲಿ ಲಭ್ಯವಿದೆ. ಮತ್ಯಾಕೆ ತಡ ಬರೋ ಬೇಸಿಗೆಯಲ್ಲಿ ನೀವೊಮ್ಮೆ ಮೈಸೂರಿನ ಕೋಕೋ ಕೆಫೆಗೆ ಹೋಗೋದು ಮರಿಬೇಡಿ.