ಕೊರೋನಾ ಬಳಿಕ ಬೆಲೆ ಏರಿಕೆ ಬರೆ ….! ಪೆಟ್ರೋಲ್-ಡಿಸೇಲ್ ಜೊತೆಯಲ್ಲೇ ಏರಿಕೆಯಾಯ್ತು ಟ್ಯಾಕ್ಸಿ ಪ್ರಯಾಣದರ….!!

ಪೆಟ್ರೋಲ್-ಡಿಸೇಲ್ ದರ ಏರುಮುಖವಾಗುತ್ತಿದ್ದಂತೆ ಗ್ರಾಹಕರ ಜೇಬು ಸುಡಲಾರಂಭಿಸಿದ್ದು, ಸ್ವಂತ ವಾಹನ ಬಿಟ್ಟು ಟ್ಯಾಕ್ಸಿ ಏರುವ ಚಿಂತನೆಯಲ್ಲಿದ್ದರೇ ಅಲ್ಲೂ ನಿಮಗೆ ಶಾಕ್ ಕಾದಿದೆ. ಟ್ಯಾಕ್ಸಿಗಳ ಮಿನಿಮಮ್ ದರವೇ 75ರ ಗಡಿ ತಲುಪಿದ್ದು, ಟ್ಯಾಕ್ಸಿ ಹತ್ತುವ ಮುನ್ನ ಪರ್ಸ್ ತುಂಬಿಸಿಕೊಳ್ಳುವುದನ್ನು ಮರಿಬೇಡಿ.

ಪೆಟ್ರೋಲ್-ಡಿಸೇಲ್ ಶತಕದ ಅಂಚು ತಲುಪುತ್ತಿದ್ದಂತೆ ನೀರಿಕ್ಷೆಯಂತೆ ಪ್ರಯಾಣದರ ಏರಿಕೆ ಪರ್ವ ಆರಂಭವಾಗಿದ್ದು, ಮೊದಲ ಹಂತದಲ್ಲಿ ಟ್ಯಾಕ್ಸಿ ದರ ಪರಿಕ್ಷರಣೆಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.  ನಾನ್ ಏಸಿ ಟ್ಯಾಕ್ಸಿಗಳ 4 ಕಿಲೋಮೀಟರ್ ಪ್ರಯಾಣ ದರ ಮಿನಿಮಮ್ 75 ರೂಪಾಯಿಗಳಾಗಿದ್ದು, ಬಳಿಕ ಪ್ರತಿಕಿಲೋಮೀಟರ್ ಗೆ 18 ರೂಪಾಯಿ ದರವಿದೆ.

ಹವಾನಿಯಂತ್ರಿತ ಟ್ಯಾಕ್ಸಿಗಳ ಮಿನಿಮಮ್ ಪ್ರಯಾಣ ದರ 4 ಕಿಲೋಮೀಟರ್ ಗೆ 100 ರೂಪಾಯಿ ಆಗಿದ್ದು,ನಂತರದ ಪ್ರತಿಕಿಲೋಮೀಟರ್ ಗೆ 24 ರೂಪಾಯಿ ನಿಗದಿಯಾಗಿದೆ.

ವೇಟಿಂಗ ದರವನ್ನು ಹೆಚ್ಚಿಸಲಾಗಿದ್ದು, ಮೊದಲ 5 ನಿಮಿಷಗಳ ಕಾಯುವಿಗೆ ಫ್ರೀ, ಬಳಿಕ ನಿಮಿಷಕ್ಕೆ 1 ರೂಪಾಯಿ ವೇಟಿಂಗ್ ಚಾರ್ಜ್ ಕೊಡಬೇಕು. 120 ಕೆಜಿಯವರೆಗಿನ ಲಗೇಜ್ ಕ್ಯಾರಿಂಗ್ ಉಚಿತವಾಗಿದ್ದು, ಅದನ್ನು ಮೀರಿದ್ರೇ ಪ್ರತಿ 20 ಕೆಜಿಗೆ 7 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.

ಇದು ಹಗಲಿನಲ್ಲಿ ಸಂಚರಿಸುವ ಟ್ಯಾಕ್ಸಿಗಳ ದರವಾದರೇ, ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚರಿಸುವ ವಾಹನಗಳ ರೇಟ್ ನ್ನು ಮೂಲದರದಿಂದ ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ. ಬರೋಬ್ಬರಿ 7 ವರ್ಷಗಳ ನಂತರ ಟ್ಯಾಕ್ಸಿ ರೇಟ್ ಹೈಕ್ ಆಗಿದ್ದು, ಕೊರೋನಾ ಸಂಕಷ್ಟದಿಂದ ಕಂಗಾಲಾಗಿದ್ದ ಜನರಿಗೆ ಒಂದೊಂದೆ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದೆ.

Comments are closed.