ಥಿಯೇಟರ್ ಗೆ ಮಾತ್ರ ಕರೋನಾ ರೂಲ್ಸ್….!! ಕೆರಳಿದ ಸ್ಯಾಂಡಲ್ ವುಡ್ ಸ್ಟಾರ್ಸ್….!!

ಕೊರೋನಾ ಬಳಿಕ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದ ಸಿನಿಮಾ ರಂಗಕ್ಕೆ ಕರ್ನಾಟಕ ಸರ್ಕಾರ ಶಾಕ್ ನೀಡಿದ್ದು ಥಿಯೇಟರ್ ಗಳಿಗೆ 100 ಕ್ಕೆ 100 ಪ್ರವೇಶಕ್ಕೆ ಅನುಮತಿ ನೀಡದಿರಲು ನಿರ್ಧರಿಸಿದೆ.

ಕೊರೋನಾ ಬಳಿಕ ತೆರೆ ಕಾಣಲು ಸಿದ್ಧ ವಾಗಿದ್ದ ಬಿಗ್ ಬಜೆಟ್ ಚಿತ್ರಗಳಿಗೆ ರಾಜ್ಯ ಸರ್ಕಾರ ಆಘಾತ ಉಂಟುಮಾಡಿದ್ದು, ಥಿಯೇಟರ್ ಗಳ ಮೇಲಿನ ನಿರ್ಬಂಧ ಮುಂದುವರೆಸುವ ಸರ್ಕಾರದ ನಿರ್ದಾರದಿಂದ ಚಿತ್ರತಂಡ ಹಾಗೂ ನಟರು ಕಂಗಾಲಾಗಿದ್ದಾರೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ನೇರವಾಗಿ ಧ್ವನಿ ಎತ್ತಿದ್ದು, ಮಾರುಕಟ್ಟೆ,ಬಸ್ ಸೇರಿದಂತೆ ಇತರೆಡೆ ಇಲ್ಲದ ನಿರ್ಬಂಧ ಥಿಯೇಟರ್ ಮೇಲೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದಾರೆ. ಮಾರುಕಟ್ಟೆ, ರಸ್ತೆ, ಬಸ್ ಗಳು ತುಂಬಿ ತುಳುಕುತ್ತಿವೆ. ಆದರೆ ಥಿಯೇಟರ್ ಗಳಿಗೆ ಮಾತ್ರ ಯಾಕೆ 100 ಕ್ಕೆ 100 ಅವಕಾಶವಿಲ್ಲ ಎಂದು ಧ್ರುವ್ ಸರ್ಜಾ ಪ್ರಶ್ನಿಸಿದ್ದಾರೆ.

ಧ್ರುವ್ ಸರ್ಜಾ ಸರ್ಕಾರದ ನಿಲುವು ಪ್ರಶ್ನಿಸಿ ಮಾಡಿರುವ ಟ್ವೀಟ್ ನ್ನು ಕೆಜಿಎಫ್ ಚಿತ್ರತಂಡ ಬೆಂಬಲಿಸಿದೆ. ಚಿತ್ರನಿರ್ದೇಶಕ ಪ್ರಶಾಂತ್ ನೀಲ್ ಧ್ರುವ್ ಟ್ವೀಟ್ ಶೇರ್ ಮಾಡಿ ರ್ರೀಟ್ವೀಟ್ ಮಾಡಿದ್ದು, ಚಲನಚಿತ್ರ ಕೇವಲ ಮನೋರಂಜನೆ ಮಾತ್ರವಲ್ಲ ಹಲವರಿಗೆ ಇದೇ ಜೀವನ ಎಂದಿದ್ದಾರೆ.

ಕೇಂದ್ರಸರ್ಕಾರ ಥಿಯೇಟರ್ ಗಳ ಮೇಲಿನ ನಿರ್ಬಂಧ ಸಡಿಲಿಸಿದ್ದು, ರಾಜ್ಯ ಸರ್ಕಾರಗಳಿಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಮಾತ್ರ ಫೆ. 28ರವರೆಗೆ ಥಿಯೇಟರ್ ಗಳ ಮೇಲಿನ ನಿಯಂತ್ರಣ ಮುಂದುವರೆಸಲು ನಿರ್ಧರಿಸಿದ್ದು ಈಗ ಸ್ಯಾಂಡಲ್ ವುಡ್ ಸ್ಟಾರ್,ಡೈರೆಕ್ಟರ್ಸ್ ಹಾಗೂ ಪ್ರ್ಯೊಡ್ಯುಸರ್ ಗಳ ಆತಂಕಕ್ಕೆ ಕಾರಣವಾಗಿದೆ.

ಫೆ.5 ಕ್ಕೆ ಇನ್ಸ್ಟೆಕ್ಟರ್ ವಿಕ್ರಂ, ಫೆ.19 ಕ್ಕೆ ಪೊಗರು, ಮಾರ್ಚ್ 11 ಕ್ಕೆ ರಾಬರ್ಟ್, ಏಪ್ರಿಲ್ 1ಕ್ಕೆ ಯುವರತ್ನ ರಿಲೀಸ್ ಗೆ ಸಿದ್ಧವಾಗಿದೆ.

Comments are closed.