ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಾಗಲಿದೆ. ಹೀಗಾಗಿ ಮೆಟ್ರೋ ಕೂಡ ವೀಕೆಂಡ್ ಸಂಚಾರ ನಿಲ್ಲಿಸಲಿದ್ದು, ಉಳಿದ ದಿನಗಳಲ್ಲೂ ಸಂಚಾರದ ಅವಧಿ ಕಡಿತಗೊಳಿಸಿದೆ.

ಶುಕ್ರವಾರ ರಾತ್ರಿ ೯ ರಿಂದ ಸೋಮವಾರ ಬೆಳಗ್ಗೆ ೬ ಗಂಟೆಯವರೆಗೆ ರಾಜ್ಯದಲ್ಲಿ ಕರ್ಪ್ಯೂ ಜಾರಿಯಾಗಿರೋದರಿಂದ ಬಿಎಮ್.ಆರ್.ಸಿ.ಎಲ್ ತನ್ನ ರೈಲುಗಳ ಸಂಚಾರ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ೭.೩೦ ಕ್ಕೆ ಮೆಟ್ರೋ ಸೇವೆ ನಿಲ್ಲಲಿದ್ದು ಸೋಮವಾರ ಮುಂಜಾನೆ ೭.೩೦ ಕ್ಕೆ ಮತ್ತೆ ಆರಂಭಗೊಳ್ಳಲಿದೆ.

ಇನ್ನು ಪ್ರತಿನಿತ್ಯ ನೈಟ್ ಕರ್ಪ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ವೀಕ್ ಡೇಸ್ ಮೆಟ್ರೋ ಸಂಚಾರದಲ್ಲೂ ಕಡಿತಗೊಳಿಸಲಾಗಿದೆ.

ಪ್ರತಿದಿನ ಬೆಳಗ್ಗೆ ೭.೩೦ ರಿಂದ ಸಂಜೆ ೭.೩೦ ರ ತನಕ ಮಾತ್ರ ಮೆಟ್ರೋ ಸಂಚಾರ ನಡೆಸಲಿದೆ.ಕರೋನಾಗೂ ಮುನ್ನ ನಗರದ ಹಲವು ಮಾರ್ಗಗಳಲ್ಲಿ ಪ್ರತಿ ೫ ನಿಮಿಷಕ್ಕೊಂದರಂತೆ ಮೆಟ್ರೋ ರಾತ್ರಿ ೧೦ ಗಂಟೆಯವರೆಗೆ ಸಂಚಾರ ನಡೆಸುತ್ತಿತ್ತು.

ಕೇವಲ ಮೆಟ್ರೋ ಮಾತ್ರವಲ್ಲ ಬಿಎಂಟಿಸಿ ಬಸ್ ಗಳನ್ನು ಕೂಡ ವೀಕೆಂಡ್ ನಲ್ಲಿ ರಸ್ತೆಗೆ ಇಳಿಸದೇ ಇರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಏರ್ಪೋರ್ಟ್ ಸೇರಿದಂತೆ ತೀರಾ ಅವಶ್ಯಕ ಪ್ರದೇಶಗಳಿಗೆ ಮಾತ್ರ ಬಸ್ ಸಂಚರಿಸಲಿದೆ.
