ವೀಕೆಂಡ್ ಕರ್ಪ್ಯೂ ಉಡುಪಿಯಲ್ಲಿ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ : ಡಿಡಿಪಿಐ ಆದೇಶ

ಉಡುಪಿ : ಕೊರೊನಾ ವೈರಸ್ ಸೋಂಕಿನ‌ ಹಿನ್ನೆಲೆಯಲ್ಲಿ ರಾಜ್ಯದಾ ದ್ಯಂತ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಿಕ್ಷಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸು ವಂತೆ ನ್ಯೂಸ್ ನೆಕ್ಸ್ಟ್ ಗೆ ಡಿಡಿಪಿ ಎನ್‌.ಎಚ್‌.ನಾಗೂರ ತಿಳಿಸಿದ್ದಾರೆ.

ವೀಕೆಂಡ್ ಕರ್ಪ್ಯೂ ಇದ್ದರೂ ಕೂಡ ಉಡುಪಿ ಜಿಲ್ಲೆಯ ಶಿಕ್ಷಕರು ಶನಿವಾರ ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಮೌಲ್ಯಾಂಕನ ಕಾರ್ಯ ವನ್ನು ನಡೆಸುವಂತೆ ಡಿಡಿಪಿಐ ಆದೇಶಿಸಿದ್ದರು. ಆದರೆ ಡಿಡಿಪಿಐ ಅವರ ಆದೇಶದ ವಿರುದ್ದ ಶಿಕ್ಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದೀಗ ಸಾರಿಗೆ ಸೌಕರ್ಯದ ಸಮಸ್ಯೆ ಇರುವ ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗುವುದರಿಂದ ವಿನಾಯಿತಿಯನ್ನು ನೀಡಲಾಗಿದ್ದು, ಮನೆಯಿಂ ದಲೇ ಕರ್ತವ್ಯ‌ ನಿರ್ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಹಾಜರಾಗದ ಶಿಕ್ಷಕರನ್ನು ಗೈರು ಹಾಜರಾತಿ ಎಂದು ಪರಿಗಣಿಸದಂತೆಯೂ ಆದೇಶಿಸಿ ದ್ದಾರೆ.

ಈಗಾಲೇ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ಆದೇಶ ಮಾಡಲಾಗಿದೆ. ಉಡುಪಿ ಡಿಡಿಪಿಐ ಅವರು ಎಲ್ಲಾ ಶಿಕ್ಷಕರಿಗೂ ವರ್ಕ್ ಫ್ರಂ ಹೋಮ್ ಆದೇಶ ಮಾಡಿ ಆದೇಶಿಸಿದ್ದಾರೆ.

Comments are closed.