ಡಿಎಲ್ ಪರವಾನಗಿ ಅವಧಿ ಮುಗಿದಿದ್ರೆ ಸಿಗೋದಿಲ್ಲ ವಿಮಾ ಮೊತ್ತ .!

ಉಡುಪಿ : ಅಪಘಾತದ ಸಂದರ್ಭದಲ್ಲಿ ವಾಹನ ಚಾಲಕನ ಪರವಾನಿಗೆ ಅವಧಿ ಮುಗಿದಿದ್ರೆ ಯಾವುದೇ ವಿಮಾ ಮೊತ್ತವನ್ನು ಪಾವತಿಸಲಾಗುವುದಿಲ್ಲ ಎಂದು ಉಡುಪಿಯ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಉಡುಪಿ ಜಿಲ್ಲೆಯ ಬೈಂದೂರಿನ ಕಲ್ತೋಡು ಗ್ರಾಮದ ಚಂದ್ರಶೇಖರ ಶೆಟ್ಟಿ (48 ವರ್ಷ) ಎಂಬವರ ಕಾರು 2019ರ ಮೇ 25ರಂದು ಗೋಳಿಹೊಳೆಯ ಬಳಿಯಲ್ಲಿ ಅಪಘಾತಕ್ಕೀಡಾಗಿತ್ತು. ಕಾರು ಚಾಲನೆ ಮಾಡುತ್ತಿದ್ದ ಚಂದ್ರಶೇಖರ ಶೆಟ್ಟಿ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ರಾಯಲ್ ಸುಂದರಂ ವಿಮಾ ಕಂಪೆನಿಯೊಂದಿಗೆ ಕಾರಿಗೆ ವಿಮೆ ಮಾಡಲಾಗಿತ್ತು. ಚಂದ್ರಶೇಖರ ಶೆಟ್ಟಿ ಅವರ ಮಗ 15 ಲಕ್ಷ ವಿಮಾ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆಯಲ್ಲಿ ಮೃತರ ವಾಹನ ಪರವಾನಗಿ ಮಾನ್ಯವಾಗಿಲ್ಲ ಅನ್ನೋ ಕಾರಣಕ್ಕೆ ಕಂಪೆನಿ ವಿಮಾ ಮೊತ್ತವನ್ನು ನೀಡಲು ಕಂಪೆನಿ ಹಿಂದೇಟು ಹಾಕಿತ್ತು.

ಈ ಕುರಿತು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಅಪಘಾತದ ಸಂದರ್ಭದಲ್ಲಿ ವ್ಯಕ್ತಿಯ ಚಾಲನಾ ಪರವಾನಗಿ ಮಾನ್ಯವಾಗಿಲ್ಲದಿದ್ದರೆ ವೈಯಕ್ತಿಕ ಅಪಘಾತ ವಿಮೆಯನ್ನು ವಿತರಿಸಲು ವಿಮಾ ಕಂಪನಿಯು ಜವಾಬ್ದಾರನಾಗಿರುವುದಿಲ್ಲ ಅಭಿಪ್ರಾಯಪಟ್ಟಿದೆ.

Comments are closed.