ಚಿಕ್ಕ ಮಕ್ಕಳಿಗೆ ಊಟ ಮಾಡಿಸಿ ಹೊಟ್ಟೆ ತುಂಬಿಸುವುದು ಹರ ಸಾಹಸದ ಕೆಲಸ. ಯಾಕೆಂದರೆ ಸಣ್ಣ ಮಕ್ಕಳು ಒಂದು ದಿನ ತಿಂದ(Nutrition Food) ಆಹಾರವನ್ನು ಇನ್ನೊಂದು ದಿನ ತಿನ್ನಲು ಹೆಚ್ಚಾಗಿ ಇಷ್ಟಪಡುವುದಿಲ್ಲ. ಹುಟ್ಟಿದ ಮಗು ಆರು ತಿಂಗಳವರೆಗೆ ತಾಯಿಯ ಎದೆಹಾಲಿನಲ್ಲೇ ಇರುತ್ತದೆ. ಆರು ತಿಂಗಳಿನ ನಂತರ ಮಣ್ಣಿ ತರಹದ ಆಹಾರವನ್ನು ಕೊಡಲು ಪ್ರಾರಂಭಿಸುತ್ತಾರೆ. ಈ ಮಣ್ಣಿ ತರಹದ ಆಹಾರವನ್ನು ಅಂಗಡಿಯಿಂದ ತಂದು ಕೊಡುವ ಬದಲು ಮನೆಯಲ್ಲೇ ಸುಲಭ ರೀತಿಯಲ್ಲಿ ತಯಾರಿಸಿ ಕೊಡಬಹುದಾಗಿದೆ. ಮನೆಯಲ್ಲೇ ಈ ಮಣ್ಣಿಯನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿ :
- ಅಕ್ಕಿ
- ರಾಗಿ
- ಗೋಧಿ
- ಬಾರ್ಲಿ
- ಹೆಸರುಕಾಳು
ತಯಾರಿಸುವ ವಿಧಾನ :
ಮೊದಲಿಗೆ ಎಲ್ಲಾ ಕಾಳುಗಳನ್ನು ಒಂದೇ ಹದದಲ್ಲಿ ತೆಗೆದುಕೊಳ್ಳಬೇಕು. ಜಾಸ್ತಿ ಮಾಡಿ ಇಟ್ಟುಕೊಂಡು ಹಾಳು ಮಾಡುವ ಬದಲು ಎಲ್ಲವನ್ನೂ ಒಂದು ಕಪ್ ಹದದಲ್ಲಿ ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಕಾಟನ್ ಬಟ್ಟೆ ಅಥವಾ ಒಂದು ಬೇರೆ ಬೇರೆ ಪ್ಲೇಟ್‌ಗಳಿಗೆ ಹಾಕಿ (ಬಿಸಿಲಿಗೆ ಬೇಡ ಮನೆಯ ಒಳಗೆ)ಒಣಗಿಸಿಕೊಳ್ಳಬೇಕು. ಎಲ್ಲಾ ಕಾಳುಗಳು ಸಂಪೂರ್ಣವಾಗಿ ನೀರು ಒಣೆದ ಮೇಲೆ ಒಂದು ಬಾಣಲೆಗೆ ಒಂದೊಂದಾಗಿ ಹಾಕಿ ಸ್ವಲ್ಪ ಗರಿ ಗರಿ ಆಗುವ ಹಾಗೆ ಹುರಿದುಕೊಳ್ಳಬೇಕು. ನಂತರ ಒಂದೊಂದಾಗಿ ಡ್ರೈ ಇರುವ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಪುಡಿ ಮಾಡಿದ ಹಿಟ್ಟನ್ನು ಒಂದು ಸಣ್ಣ ಜಾರಡಿಯ ಮೂಲಕ ಒಂದು ದೊಡ್ಡ ಪಾತ್ರೆಗೆ ಸೊಸಿಕೊಳ್ಳಬೇಕು. ಪುಡಿ ಮಾಡಿದ ಎಲ್ಲಾ ಹಿಟ್ಟನ್ನು ಪಾತ್ರೆಗೆ ಜರಡಿ ಹಿಡಿದ ಮೇಲೆ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮಿಕ್ಸ್ ಮಾಡಿದ ಪೌಡರ್‌ನ್ನು ಒಂದು ಬಾಟಲಿಗೆ ಹಾಕಿ ಶೇಖರಿಸಿ ಇಟ್ಟುಕೊಳ್ಳಬೇಕು. ನಂತರ ಈ ಪುಡಿಯನ್ನು ಮಕ್ಕಳು ತಿನ್ನುವ ಆಧಾರ ಮೇಲೆ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : Alovera Juice : ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ?
ಇದನ್ನೂ ಓದಿ : Ice Apple Or Palm Fruit : ಮಲಬದ್ದತೆ ತಡೆಯುತ್ತೆ ಚಳಿಗಾಲದ ತಾಳೆಹಣ್ಣು
ಇದನ್ನೂ ಓದಿ : Chickpea : ದೇಹದ ತೂಕ ಇಳಿಸಬೇಕಾ ? ಹಾಗಾದ್ರೆ ಹುರಿಗಡಲೆ ತಿನ್ನಿ
ಮಕ್ಕಳಿಗೆ ಇದನ್ನು ತಿನ್ನಿಸುವ ಮೊದಲು ಒಂದು ಪಾತ್ರೆಯಲ್ಲಿ ಅರ್ಧ ಲೋಟ ಹಾಲಿಗೆ ಕಾಲು ಲೋಟ ನೀರನ್ನು ಬೆರೆಸಿ ಅದಕ್ಕೆ ಒಂದು ಟೇಬಲ್ ಸ್ಪೂನ್(ಚಿಕ್ಕಮಕ್ಕಳಿಗೆ) ಈ ಮಣ್ಣಿ ಪೌಡರನ್ನು ಗಂಟು ಗಂಟು ಆಗದಂತೆ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಇಡಬೇಕು. ಗ್ಯಾಸ್ ಮೇಲೆ ಇಟ್ಟು ಸ್ಪೂನ್‌ನ್ನು ತಿರುಗಿಸುತ್ತಾ ಮಣ್ಣಿಯ ಹದಕ್ಕೆ ಬಂದ ಮೇಲೆ ಬಿಸಿ ಆರಿಸಿ ತಿನ್ನಿಸಬೇಕು. ಇದನ್ನು ಬಿಸಿ ಮಾಡಿ ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಿ ಮಕ್ಕಳಿಗೆ ನೀಡಿದರೆ ಇನ್ನೂ ರುಚಿಯಾಗಿರುತ್ತದೆ. ಇದನ್ನು ಆರು ವರ್ಷದ ಮಕ್ಕಳಿಂದ ಹಿಡಿದು ಮೂರು ವರ್ಷದ ಮಕ್ಕಳಿನವರೆಗೂ ಕೊಡಬಹುದಾಗಿದೆ. ಈ ಮಣ್ಣಿಯು ಮಕ್ಕಳ ಬೆಳವಣೆಗೆ ತುಂಬಾ ಸಹಾಯಕಾರಿಯಾಗಿರುತ್ತದೆ. ಇದರಲ್ಲಿ ಐದು ತರಹದ ಪದಾರ್ಥಗಳು ಇರುವುದರಿಂದ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ನೀಡುತ್ತದೆ.
Nutrition Food : This manni increases nutrition in children