CM Basavaraj Bommai : ಪತ್ರಕರ್ತರಿಗೆ ದೀಪಾವಳಿ ನಗದು ಗಿಫ್ಟ್ : ಕೊನೆಗೂ ಮೌನ ಮುರಿದ ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು : ದೀಪಾವಳಿಯ ಸಂದರ್ಭದಲ್ಲಿ ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ನಗದು ಗಿಫ್ಟ್ ನೀಡಿರುವ ಕುರಿತು ಕಾಂಗ್ರೆಸ್ ಆರೋಪ ಮಾಡಿದೆ. ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಕೊನೆಗೂ ಮೌನ ಮುರಿದಿದ್ದಾರೆ. ನಾನು ಯಾರಿಗೂ ಗಿಫ್ಟ್ ಕೊಡುವಂತೆ ಸೂಚನೆಯನ್ನು ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ ಸುಳ್ಳು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಟೂಲ್ ಕಿಟ್ ನ ಮುಂದುವರಿದ ಭಾಗ. ಕಾಂಗ್ರೆಸ್ ಅವಧಿಯಲ್ಲಿ ಐಪೋನ್, ಚಿನ್ನದ ನಾಣ್ಯ, ಮೊಬೈಲ್ ನೀಡಿದ್ದರು. ಕಾಂಗ್ರೆಸ್ ಗೆ ಇದೀಗ ಆರೋಪ ಮಾಡಲು ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ನಗದು ಗಿಫ್ಟ್ ನೀಡಿರುವ ಕುರಿತು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಲೋಕಾಯುಕ್ತರು ತನಿಖೆಯನ್ನು ನಡೆಸಲಿ, ಸತ್ಯಾಂಶ ಹೊರಗೆ ಬರಲಿ. ಎಲ್ಲಾ ಪತ್ರಕರ್ತರು ಗಿಫ್ಟ್ ತೆಗೆದುಕೊಂಡಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಮಾಡಿರುವ ಆರೋಪವನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಇನ್ನು ಕೆಆರ್ ಪುರಂ ಸರ್ಕಲ್ ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ನಂದೀಶ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೂಕ್ತ ಅಂಶಗಳಿದ್ದರೆ, ತನಿಖೆ ನಡೆಯಲಿದೆ. ಡಿಜಿ ಅವರು ನಿನ್ನೆ ಊರಲ್ಲಿ ಇರಲಿಲ್ಲ, ಇಂದು ಬಂದಿದ್ದಾರೆ. ಹೀಗಾಗಿ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ತನಿಖೆ ನಡೆಸುವಂತೆ ಸೂಚನೆಯನ್ನು ನೀಡಿದ್ದೇನೆ. ನಂದೀಶ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲು ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲಾ ಎಂದಿದ್ದಾರೆ.

ಇದನ್ನೂ ಓದಿ : Siddaramaiah’s contest from Kolar :ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ದೃಢ : ಮುಂದಿನ ತಿಂಗಳಿನಿಂದಲೇ ಪ್ರಚಾರ ಕಾರ್ಯ

ಇದನ್ನೂ ಓದಿ : Steering Committee: ಪದಗ್ರಹಣ ಬೆನ್ನಲ್ಲೇ ಹೊಸ ಕಮಿಟಿ ರಚಿಸಿದ ಖರ್ಗೆ; ಮೂವರು ಕನ್ನಡಿಗರಿಗೂ ಮಣೆ..

ಇದನ್ನೂ ಓದಿ : One nation One uniform: ಒಂದು ದೇಶ, ಪೊಲೀಸರಿಗೆ ಒಂದು ಸಮವಸ್ತ್ರ: ರಾಜ್ಯ ಸರ್ಕಾರಗಳು ಚರ್ಚಿಸುವಂತೆ ಸಲಹೆ ನೀಡಿದ ಪ್ರಧಾನಿ

ಇನ್ನೊಂದೆಡೆಯಲ್ಲಿ ಪತ್ರಕರ್ತರಿಗೆ ಗಿಫ್ಟ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಟ್ವೀಟರ್ ಮೂಲಕ ಆರೋಪ ಪ್ರತ್ಯಾರೋಪವನ್ನು ನಡೆಸುತ್ತಿವೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕೂಡ ಪತ್ರಕರ್ತರಿಗೆ ಲಂಚ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಅಲ್ಲದೇ ಸರಕಾರದ ಲಂಚ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎಂದಿರುವ ಪ್ರಾಮಾಣಿಕ ಪತ್ರಕರ್ತರಿಂದ ಸರಕಾರದ ಅಕ್ರಮ ಹೊರಬಂದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇನ್ನು ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಬಿಜೆಪಿ, ರಾಜ್ಯ ಸರಕಾರದ ವಿರುದ್ದ ಕಾಂಗ್ರೆಸ್ ನಿರಂತರವಾಗಿ ಗಾಳಿಯಲ್ಲಿ ಗುಂಡು ಹೊಡೆಯವ ಕಾರ್ಯವನ್ನು ಮಾಡುತ್ತಿದೆ. ಈ ರೀತಿಯ ಆರೋಪಗಳು ಸತ್ಯಕ್ಕೆ ದೂರವಾದುದು ಎಂದಿದೆ.

Diwali cash gift to journalists: CM Basavaraj Bommai has finally broken his silence

Comments are closed.