ಬೊಜ್ಜು ಉಳ್ಳವರ ಮೇಲೆ ಕೊರೊನಾ ಲಸಿಕೆ ಪರಿಣಾಮ ಬೀರುತ್ತಾ..? ಏನು ಹೇಳುತ್ತಾರೆ ತಜ್ಞರು..!

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಬೊಜ್ಜು ಹೊಂದಿರುವ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ಪೂರ್ಣ ಪ್ರಮಾಣದಲ್ಲಿ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಸಿಕೆಯನ್ನು ನೀಡುತ್ತಿರೋ ಬೆನ್ನಲ್ಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿದೆ. ಲಸಿಕೆ ಯಾರ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಅನ್ನೋ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿದೆ. ಕೊರೊನಾ ಹೆಮ್ಮಾರಿ ವಿಶ್ವನ್ನೇ ಆತಂಕಕ್ಕೆ ದೂಡಿದ ಬೆನ್ನಲ್ಲೇ ತಜ್ಞರ ಸಂಶೋಧನಾ ವರದಿಗಳು ಮತ್ತಷ್ಟು ಆತಂಕವನ್ನು ಹೆಚ್ಚಿಸುತ್ತಿವೆ. ಅದ್ರಲ್ಲೂ ಬೊಜ್ಜು ಉಳ್ಳವರಿಗೆ ಸಂಬಂಧಪಟ್ಟಂತೆ ವಿಶೇಷವಾದ ಸಂಶೋಧನೆಯನ್ನು ನಡೆಸಲಾಗುತ್ತಿದೆ.

ಸಾಮಾನ್ಯರಿಗಿಂತಲೂ ಸ್ಥೂಲಕಾಯರು ಅಥವಾ ಬೊಜ್ಜು ಉಳ್ಳವರ ಮೇಲೆ ಕೊರೊನಾ ಲಸಿಕೆ ವಿಭಿನ್ನವಾದ ಪರಿಣಾಮವನ್ನು ಬೀರುತ್ತದೆ. ಬೊಜ್ಜು ಉಳ್ಳವರು ಹಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಕೊರೊನಾ ಲಸಿಕೆ ಪೂರ್ಣ ಪ್ರಮಾಣದಲ್ಲಿ ಪರಿಣಾಮವನ್ನು ಬೀರುವುದಿಲ್ಲ ಅನ್ನೋದು ಹಲವು ವೈದ್ಯರ ಅಭಿಪ್ರಾಯ.

ಇತ್ತೀಚಿಗಷ್ಟೇ ಬಳ್ಳಾರಿಯಲ್ಲಿ ಲಸಿಕೆ ಪಡೆದುಕೊಂಡಿದ್ದ 43 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ನಿಂದಾಗಿ ಹಾಗೂ ಬೊಜ್ಜು ಹೆಚ್ಚಾಗಿದ್ದರಿಂದಲೂ ವ್ಯಕ್ತಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಅಧ್ಯಯನಗಳು ನಡೆದ ನಂತರವೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಬಹುತೇಕ ಆರೋಗ್ಯ ತಜ್ಞರು ಬೊಜ್ಜು ಉಳ್ಳವರ ವಿಚಾರದಲ್ಲಿ ಶಾಕಿಂಗ್ ಹೇಳಿಕೆಯನ್ನೇ ನೀಡುತ್ತಿದ್ದಾರೆ. ನಿಜಕ್ಕೂ ಬೊಜ್ಜು ಉಳ್ಳವರ ಮೇಲೆ ಲಸಿಕೆಯ ಪರಿಣಾಮ ಎಷ್ಟಿದೆ ಅನ್ನೋ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.

Comments are closed.