ಮಧ್ಯರಾತ್ರಿ 12 ಕ್ಕೆ ಜ್ಯೂನಿಯರ್ ಚಿರು ಪೋಟೋ ರಿವೀಲ್…! ಇನ್ ಸ್ಟಾಗ್ರಾಂನಲ್ಲಿ ಮೇಘನಾರಾಜ್ ಕೊಟ್ರು ಬ್ರೇಕಿಂಗ್ ನ್ಯೂಸ್….!!

ಸ್ನೇಹಜೀವಿ, ಸ್ಯಾಂಡಲ್ ವುಡ್ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ 8 ತಿಂಗಳು ಕಳೆದಿದೆ. ಚಿರು ನಿಧನದ 4ತಿಂಗಳ  ಬಳಿಕ ಜನಿಸಿದ ಮಗುವನ್ನು ಅಭಿಮಾನಿಗಳು, ಮೇಘನಾರಾಜ್ ಹಾಗೂ ಚಿರು ಸರ್ಜಾ ಕುಟುಂಬ ಜ್ಯೂನಿಯರ್ ಚಿರು ಎಂದೇ ನಂಬಿದೆ. ಹೀಗಾಗಿ ಅಭಿಮಾನಿಗಳು ಜ್ಯೂನಿಯರ್ ಚಿರುವನ್ನು ಕಣ್ತುಂಬಿಕೊಳ್ಳೋಕೆ ಕಾದಿದ್ದಾರೆ.

ಅಭಿಮಾನಿಗಳ ಈ ಕಾತರಕ್ಕೆ ಮೇಘನಾರಾಜ್ ಫುಲ್ ಸ್ಟಾಪ್ ಇಟ್ಟಿದ್ದು. ಫೆ.13 ರ ಮಧ್ಯರಾತ್ರಿ 12 ಕ್ಕೆ ಪೋಟೋ ಹಂಚಿಕೊಳ್ಳಲಿದ್ದಾರೆ.  ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಇವತ್ತು ರಾತ್ರಿ 12 ಗಂಟೆಗೆ ನನಗೆ ಹಾಗೂ ಚಿರುಗೆ ಪ್ರೌಡ್ ಮೊಮೆಂಟ್. ನಾವು ನಮ್ಮ ಮುದ್ದು ಹಾಗೂಪ್ರೀತಿಯ ಬದುಕನ್ನು ನಿಮಗೆ ಇಂಟ್ರಡ್ಯೂಸ್ ಮಾಡಿಸುತ್ತೇವೆ ಎಂದಿದ್ದಾರೆ.

ಮೊನ್ನೆಯಷ್ಟೇಇನ್ ಸ್ಟಾಗ್ರಾಂನಲ್ಲಿ ಫೆ.14 ರಂದು ಸಪ್ರೈಸ್ ಕಾದಿದೆ ಎಂಬ ಪೋಸ್ಟ್ ಹಾಕಿದ್ದರು. ಹೀಗಾಗಿ ಅಭಿಮಾನಿಗಳು ಬಹುಷಃ ಜ್ಯೂನಿಯರ್ ಚಿರು ನಾಮಕರಣ ಅಥವಾ ಪೋಟೋ ರಿವೀಲ್ ಮಾಡಬಹುದು ಎಂದುಕೊಂಡಿದ್ದರು. ಅಭಿಮಾನಿಗಳ ನೀರಿಕ್ಷೆಯಂತೆ ಮೇಘನಾ ರಾಜ್ ಫೆ.14 ರಂದು ಜ್ಯೂನಿಯರ್ ಚಿರು ಪೋಟೋ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಶುಕ್ರವಾರ ಚಿರಂಜೀವಿ ಹಾಗೂ ತಮ್ಮ ಪೋಟೋಗಳನ್ನು ಒಳಗೊಂಡ ಸುಂದರ ವಿಡಿಯೋ ಹಂಚಿಕೊಂಡಿದ್ದ ಮೇಘನಾ ಅದರಲ್ಲಿ ತಮ್ಮ ಹಾಗೂ ಜ್ಯೂನಿಯರ್ ಚಿರುನ ಸಿಲೋಟ್ ಪೋಟೋವೊಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಅಷ್ಟೇ ಅಲ್ಲ ವಿಡಿಯೋದಲ್ಲಿ ಪುಟಾಣಿ ಚಿರುನ ಧ್ವನಿಯನ್ನು ಕೇಳಿಸಿ ಸಂಭ್ರಮ ಹಂಚಿಕೊಂಡಿದ್ದರು.

ಫೆ.14 ರಂದು ನೀವು ಜ್ಯೂನಿಯರ್ ಚಿರುಗೆ ಹೆಲ್ಲೋ ಹೇಳಿ ಎಂದಿದ್ದರು. ಈಗ ಪೋಟೋವನ್ನು ಮಧ್ಯರಾತ್ರಿ 12 ಗಂಟೆಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಮೇಘನಾ ರಾಜ್ ಪೋಸ್ಟ್ ಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡ್ತಿದ್ದಾರೆ.

ಅಕ್ಟೋಬರ್ 22 ರಂದು ಮೇಘನಾರಾಜ್ ಗಂಡುಮಗುವಿಗೆ ಜನ್ಮನೀಡಿದ್ದು, ಈಗಾಗಲೇ ಜ್ಯೂನಿಯರ್ ಚಿರುಗೆ ಮೂರು ತಿಂಗಳು ಕಳೆದಿದೆ. ಅಜ್ಜ ಸುಂದರ ರಾಜ್ ಮಗುವನ್ನು ಚಿಂಟು ಎಂದು ಕರೆಯುತ್ತಿದ್ದು, ಮೇಘನಾ ಹಾಗೂ ಚಿರಂಜೀವಿ ಸರ್ಜಾ ಹೆಸರು ಸೇರಿಸಿ ಜ್ಯೂನಿಯರ್ ಚಿರುಗೆ ಚಿರಂತನ್ ಅಥವಾ ಚಿಂತನ್ ಎಂದು ಹೆಸರು ಇಡಲಾಗುತ್ತದೆ ಎನ್ನಲಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ನಾಮಕರಣ ನಡೆಯಲಿದೆ ಎನ್ನಲಾಗಿತ್ತು. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಹೀಗಾಗಿ ಜ್ಯೂನಿಯರ್ ಚಿರುವನ್ನು ನೋಡಲು ಕಾತರರಾಗಿರುವ ಅಭಿಮಾನಿಗಳಿಗಾಗಿ ಮೇಘನಾ ರಾಜ್ ಮುದ್ದು ಮಗುವಿನ ಪೋಟೋಹಂಚಿಕೊಳ್ಳುತ್ತಿದ್ದಾರೆ.

Comments are closed.