ನವದೆಹಲಿ : ದೇಶದಲ್ಲಿ ಬೇಹುಗಾರಿಕೆ ನಡೆಸಿದ ಆರೋಪ ಬಯಲಾದ ಬೆನ್ನಲ್ಲೇ ಪಾಕಿಸ್ತಾನದ ಇಬ್ಬರು ಹೈಕಮಿಷನ್ ಅಧಿಕಾರಿಗಳಿಗೇ ಭಾರತ ಬಿಟ್ಟುತೊಲಗುವಂತೆ ವಿದೇಶಾಂಗ ಸಚಿವಾಲಯ ಸೂಚನೆಯನ್ನು ನೀಡಿದೆ.

ಪಾಕ್ ಹೈಕಮಿಷನ್ ಅಧಿಕಾರಿಗಳಾದ ಅಬಿದ್ ಹುಸೇನ್ ಮತ್ತು ತಾಹೀರ್ ಹುಸೇನ್ ಎಂಬಿಬ್ಬರು ಬೇಹುಗಾರಿಕೆ ನಡೆಸುತ್ತಿದ್ದ ವೇಳೆಯಲ್ಲಿ ಭದ್ರತಾಪಡೆಯ ಸಿಬ್ಬಂಧಿಗಳ ಕೈಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದರು. ದೇಶದ ಹಲವು ಕಡೆಗಳಲ್ಲಿ ಇಬ್ಬರು ಅಧಿಕಾರಿಗಳು ನಕಲಿ ಭಾರತೀಯ ಗುರುತಿನ ಚೀಟಿಯನ್ನು ಬಳಸಿದ್ದಾರೆಂಬ ಮಾಹಿತಿ ಬಹಿರಂಗವಾಗಿದೆ.

ಈ ಹಿನ್ನೆಲೆಯಲ್ಲಿ 24 ಗಂಟೆಗಳ ಒಳಗಾಗಿ ಇಬ್ಬರು ಪಾಕ್ ಹೈಕಮಿಷನ್ ಅಧಿಕಾರಿಗಳು ದೇಶ ಬಿಟ್ಟು ತೊಲಗುವಂತೆ ಖಡಕ್ ಆದೇಶವನ್ನು ನೀಡಲಾಗಿದೆ.