ಲಾಕ್ ಡೌನ್ ನಡುವಲ್ಲೇ ಜನಸಾಮಾನ್ಯರಿಗೆ ಬಿಗ್ ಶಾಕ್ : ದಿಢೀರ್ ಏರಿಕೆಯಾಯ್ತು ಅಡುಗೆ ಅನಿಲ ಬೆಲೆ

0

ನವದೆಹಲಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಲಾಕ್ ಡೌನ್ ಆದೇಶವನ್ನು ಸಡಲಿಗೊಳಿಸಿದೆ. ಜನಜೀವನ ಸಹಜ ಸ್ಥಿತಿಗೆ ಮರುಳುವ ಹೊತ್ತಲ್ಲೇ ಅಡುಗೆ ಅನಿಲ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರತೀ ಸಿಲಿಂಡರ್ ಮೇಲಿನ ದರವನ್ನು 11 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ ಬೆಲೆ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಎಲ್​ಪಿಜಿ ದರದಲ್ಲಿ ಬಾರೀ ಇಳಿಕೆ ಕಂಡಿತ್ತು. 744 ರೂಪಾಯಿಗೆ ಏರಿಕೆಯಾಗಿದ್ದ ಅಡುಗೆ ಅನಿಲ 581 ರೂಪಾಯಿಗೆ ಇಳಿಕೆಯಾಗಿತ್ತು. ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ದರ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 11 ರೂಪಾಯಿ ಏರಿಕೆ ಕಂಡಿದೆ.

ಇಂಧನ ರೀಟೇಲರ್​​ಗಳು ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್​ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತಿದ್ದು,. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್​ಪಿಜಿ ಬೆಲೆ ಹಾಗೂ ಅಮೆರಿಕ ಡಾಲರ್ ಮತ್ತು ಭಾರತೀಯ ರುಪೀ ಮೌಲ್ಯಗಳನ್ನು ಆಧರಿಸಿ ಈ ಬೆಲೆ ನಿರ್ಧಾರ ಮಾಡಲಾಗುತ್ತದೆ.

ಆದರೆ ಅಡುಗೆ ಸಿಲಿಂಡರ್ ದರ ನಗರದಿಂದ ನಗರಕ್ಕೆ ಬದಲಾವಣೆಯಾಗುತ್ತಿದ್ದು, ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆಯಲ್ಲಿ 11.50 ರೂಪಾಯಿ ಏರಿಕೆ ಮಾಡಲಾಗಿದ್ದು, ಉಳಿದ ನಗರಗಳಲ್ಲಿಯೂ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಲಿದೆ.

Leave A Reply

Your email address will not be published.