2 ತಿಂಗಳ ಬಳಿಕ ರಸ್ತೆಗಿಳಿದ ಬಿಎಂಟಿಸಿ ವೋಲ್ವೋ ಬಸ್

0

ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿನಿಂದ ಬಂದ್ ಆಗಿದ್ದ ಬಿಎಂಟಿಸಿ ವಾಯುವಜ್ರ ಬಸ್ ಗಳ ಸಂಚಾರ ಆರಂಭಗೊಂಡಿದೆ. ಸಾಮಾನ್ಯ ಬಿಎಂಟಿಸಿ ಬಸ್ ಗಳ ಜೊತೆಗೆ ಮೊದಲ ಹಂತದಲ್ಲಿ 75 ವಾಯು ವಜ್ರ ಬಸ್ ಗಳನ್ನು ಬಿಎಂಟಿಸಿ ರಸ್ತೆಗೆ ಇಳಿಸಿದೆ.

ಮೆಜೆಸ್ಟಿಕ್ ನಿಲ್ದಾಣದಿಂದ ಹೊಸಕೋಟೆ, ಕಾಡುಗೋಡಿ, ಅತ್ತಿಬೆಲೆ, ಸರ್ಜಾಪುರಕ್ಕೆ ತೆರಳಲಿದೆ. ಇನ್ನು ಹೆಬ್ಬಾಳದಿಂದ ಹೊರಡುವ ಬಸ್ ಬನಶಂಕರಿ , ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಗೆ ಸಂಚಾರ ನಡೆಸಲಿದೆ.

ಬನಶಂಕರಿ ಬಸ್ ನಿಲ್ದಾಣದಿಂದ ಐಟಿಪಿಎಲ್‌ ಹಾಗು ಎಲೆಕ್ಟ್ರಾನಿಕ್ ಸಿಟಿಯಿಂದ ಐಟಿಪಿಎಲ್ ಮಾರ್ಗದಲ್ಲಿ ವಾಯುವಜ್ರ ಸಂಚಾರ ನಡೆಸಲಿದೆ.

ಡಿಪೋ 13 ಕಾಮಾಕ್ಯ, ಡಿಪೋ 18 ವೈಟ್ ಫೀಲ್ಡ್, ಡಿಪೋ 25 ಎಚ್‌ಎಸ್ ಆರ್ ಲೇ ಔಟ್, ಡಿಪೋ 29 ಕೆ.ಆರ್ ಪುರಂ, ಡಿಪೋ 28 ಹೆಬ್ಬಾಳದಿಂದ ಬಸ್​​ಗಳು ಸಂಚಾರ ಆರಂಭಿಸಿವೆ.

ವೋಲ್ವೋ ಬಸ್ ಸಂಚಾರಕ್ಕೂ ಮೊದಲು ಬಸ್ ಗಳಿಗೆ ಪೂಜೆ ಸಲ್ಲಿಸಲಾಯಿತು. ಮೆಜಿಸ್ಟಿಕ್ ನಿಲ್ದಾಣದಿಂದ ಹೊರಡುವ 12 ಬಸ್ ಗಳಿಗೆ 150ಕ್ಕೂ ಅಧಿಕ ಡ್ರೈವರ್ ಹಾಗೂ ಕಂಡಕ್ಟರ್ ಗಳು ಆಗಮಿಸಿದ್ದರು. ಹೀಗಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ವೇಳೆಯ ಅಧಿಕಾರಿಗಳಿಗೆ ಚಾಲಕ ಹಾಗೂ ನಿರ್ವಾಹಕರು ಹಿಡಿಶಾಪ ಹಾಕಿದ್ದಾರೆ.

Leave A Reply

Your email address will not be published.