ಸೋಜುಗದ ಖ್ಯಾತಿಯ ಗಾಯಕಿ ಅನನ್ಯ ಭಟ್ ತಂದೆ ಅರೆಸ್ಟ್

ಮೈಸೂರು : ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿವೃತ್ತ ಉಪನ್ಯಾಸಕ ಪರಮಶಿವಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

2020ರ ಸಪ್ಟೆಂಬರ್ 20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಉಪನ್ಯಾಸಕ ಪರಶಿವಮೂರ್ತಿ ಕೊಲೆಯಾಗಿತ್ತು. ಘಟನೆಗೆ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸಿದ್ದರು.

ಆದರೆ ಪರಮಶಿವಮೂರ್ತಿಗೆ ಹತ್ಯೆಗೆ ವಿಶ್ವನಾಥ ಭಟ್ ಸುಫಾರಿ ನೀಡಿರೋದು ತನಿಖೆಯ ವೇಳೆಯಲ್ಲಿ ಬಯಲಾಗಿತ್ತು. ಆರೋಪಿ ಸಿದ್ದರಾಜು ಎಂಬಾತ ಕೊಲೆಗೆ ಸುಫಾರಿ ನೀಡಿರುವ ವಿಷಯವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಅಷ್ಟಕ್ಕೂ ವಿಶ್ವನಾಥ ಭಟ್ ಹಾಗೂ ಪರಮಶಿವಮೂರ್ತಿ ಸಹೋದ್ಯೋಗಿಗಳಾಗಿದ್ದರು. ಪರಮಶಿವ ಮೂರ್ತಿ ಸಂಸ್ಕೃತ ಪಾಠ ಶಾಳೆಯ ಕಾರ್ಯದರ್ಶಿಯಾಗಿದ್ದು, ಪ್ರತೀ ತಿಂಗಳು ಕಮಿಷನ್ ಗಾಗಿ ಪೀಡಿಸುತ್ತಿದ್ದ.

ಮಾತ್ರವಲ್ಲದೇ ವಿಶ್ವನಾಥ್ ಭಟ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ವಿಶ್ವನಾಥ ಭಟ್ ಇದೇ ಕಾರಣದಿಂದಲೇ ವಿಶ್ವನಾಥ್ ಭಟ್ 7 ಲಕ್ಷ ರೂಪಾಯಿಗೆ ಸುಫಾರಿ ಕೊಟ್ಟು ಹತ್ಯೆ ಮಾಡಿಸಿದ್ದ ಅನ್ನೋದು ತನಿಖೆಯ ವೇಳೆಯಲ್ಲಿ ಬಯಲಾಗಿದೆ.

ಈ ಹಿಂದೆಯೇ ವಿಶ್ವನಾಥ ಭಟ್ ವಿರುದ್ದ ಆರೋಪ ಕೇಳಿಬಂದಿದ್ದರೂ ಕೂಡ ಬಲವಾದ ಸಾಕ್ಷಾಧಾರ ಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಬಂಧಿಸಿರಲಿಲ್ಲ. ಆದ್ರೀಗ ಸಾಕ್ಷ್ಯಗಳ ಬಲವಾಗುತ್ತಿ ದ್ದಂತೆಯೇ ವಿಶ್ವನಾಥ್ ಭಟ್ ರನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಅನನ್ಯ ಭಟ್ ತಂದೆಯಿಂದ ದೂರವಾಗಿ ಕಳೆದೆರಡು ವರ್ಷಗಳಿಂದಲೂ ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

Comments are closed.