ಸಿದ್ದರಾಮಯ್ಯನವರ ದೇಶ ನಿಷ್ಠೆಯ ಬಗ್ಗೆ ಅನುಮಾನವಿದೆ : ಪೇಜಾವರ ಶ್ರೀ

ಉಡುಪಿ : ಅಯೋಧ್ಯೆ ರಾಮಮಂದಿರಕ್ಕೆ ನಾನು ಯಾರಿಗೂ ದೇಣಿಗೆ ನೀಡಿ ಎಂದು ಒತ್ತಾಯ ಮಾಡಿಲ್ಲ. ವಿಶ್ವದಾದ್ಯಂತ ದೇಣಿಗೆ ಕೊಡುವವರು ಸಂತೋಷದಿಂದ ಕೊಡುತ್ತಿದ್ದಾರೆ. ನೀವು ವಿವಾದಿತ ಸ್ಥಳ ಎನ್ನುತ್ತಿದ್ದೀರಿ. ಹಾಗಾದ್ರೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನೀವು ಒಪ್ಪುವುದಿಲ್ಲ. ನನಗೆ ಸಿದ್ದರಾಮಯ್ಯನವರ ದೇಶ ನಿಷ್ಠೆಯ ಬಗ್ಗೆಯೇ ಅನುಮಾನವಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯ ಪೇಜಾವರ ಮಠದಲ್ಲಿ ಮಾತನಾಡಿದ ಅವರು, ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ ಎಂದಿರುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ನಿರೀಕ್ಷೆಗೆ ಮೀರಿ ರಾಮಭಕ್ತರು ದೇಣಿಗೆ ನೀಡುತ್ತಿದ್ದಾರೆ. ಜನರು ತಾವೇ ಮುಂದೆ ಬಂದು ದೇಣಿಗೆ ನೀಡುತ್ತಿರುವಾಗ ಒತ್ತಾಯ ಪೂರ್ವಕವಾಗಿ ದೇಣಿಗೆ ಸಂಗ್ರಹಿಸುವ ಪ್ರಶ್ನೆಯೇ ಇಲ್ಲ.

ಕುಮಾರಸ್ವಾಮಿ ಅವರು ದಾಖಲೆ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ತಾವು ಮಾಡಿರುವ ಆರೋಪಕ್ಕೆ ಸಣ್ಣ ದಾಖಲೆಯನ್ನೂ ಕೊಟ್ಟರೂ ಬೆಲೆ ಇರುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ದ್ದವರು ಹೇಳಿಕೆ ನೀಡುವ ಸ್ವಲ್ಪ ಯೋಚನೆ ಮಾಡಬೇಕು. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರಿಗೆ ಕುಮಾರಸ್ವಾಮಿ ಅವರ ವ್ಯಕ್ತಿತ್ವದ ಬಗ್ಗೆಯೇ ಅನುಮಾನ ಮೂಡುತ್ತದೆಯೇ ಹೊರತು ನಮ್ಮ ಸಂಸ್ಥೆಯ ಮೇಲೆ ಸಂಶಯ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Comments are closed.