ಮುಂಬೈ : ದೇಶದಾದ್ಯಂತ ಎಪ್ರಿಲ್ 1 ರಿಂದ ಬಿಎಸ್ -6 ಗುಣಮಟ್ಟದ ಪೆಟ್ರೋಲ್ ಮತ್ತು ಡಿಸೇಲ್ ಪೂರೈಕೆಯಾಗಲಿದೆ. ವಾಹನ ಸವಾರರು ಶುದ್ದ ಡಿಸೇಲ್, ಪೆಟ್ರೋಲ್ ಗಳನ್ನು ತಮ್ಮ ವಾಹನಗಳಿಗೆ ತುಂಬಿಸಲು ಕಾತರರಾಗಿದ್ದಾರೆ. ಆದ್ರೆ ಬಿಎಸ್-6 ಪೆಟ್ರೋಲ್, ಡಿಸೇಲ್ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ.

ಇಂಡಿಯಲ್ ಆಯಿಲ್ ಕಾರ್ಪೋರೇಷನ್ (ಐಒಸಿ) ಈಗಾಗಲೇ ಬಿಎಸ್-6 ಡಿಸೇಲ್ ಹಾಗೂ ಪೆಟ್ರೋಲ್ ಪೂರೈಕೆ ಮಾಡಲು ಸಿದ್ದವಿರುವುದಾಗಿ ಹೇಳಿಕೊಂಡಿದೆ. ಆದರೆ ಸಾರ್ವಜನಿಕ ವಲಯದ ತೈಲ ಕಂಪೆನಿಗಳು ಬಿಎಸ್-6 ಗುಣಮಟ್ಟದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುವುದಕ್ಕಾಗಿ ಸಂಸ್ಕರಣಾಗಾರಗಳನ್ನು ನವೀಕರಿಸಲು ಸುಮಾರು 80 ಸಾವಿರ ಕೋಟಿ ರೂ. ವೆಚ್ಚ ಮಾಡಿವೆ.

ಈ ನವೀಕರಣ ವೆಚ್ಚವನ್ನು ಗ್ರಾಹಕರ ಮೇಲೆ ವಿಧಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂದು ಐಒಸಿ ಹೇಳಿದೆ.

ದೇಶದಾದ್ಯಂತ ಪರಿಶುದ್ದವಾಗಿರೋ ಪೆಟ್ರೋಲ್ ಹಾಗೂ ಡಿಸೇಲ್ ಸಿಗುತ್ತೆ ಅಂತಾ ಖುಷಿಯಲ್ಲಿದ್ದ ಗ್ರಾಹಕರಿಗೆ ಇದೀಗ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಕೊಂಚ ಬೇಸರವನ್ನು ಮೂಡಿಸಿದೆ. ಆದರೆ ಲೀಟರ್ ಗೆ ಎಷ್ಟು ರೂಪಾಯಿ ಏರಿಕೆಯಾಗಲಿದೆ ಅನ್ನೋದನ್ನು ಐಓಸಿ ಹೇಳಿಲ್ಲ.
