ನವದೆಹಲಿ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿಷೇಧ ಹೇರಿದೆ. ಬ್ಯಾಂಕಿ ವಹಿವಾಟಿನ ಮೇಲೆ ನಿಯಂತ್ರಣ ಬಿದ್ದಿರೋ ಬೆನ್ನಲ್ಲೇ ಪೋನ್ ಪೇ ಗ್ರಾಹಕರು ವಹಿವಾಟು ನಡೆಸೋದಕ್ಕಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಳಗಿನಿಂದಲೇ ಪೋನ್ ಪೇ ಗ್ರಾಹಕರು ಪೋನ್ ಪೇ ಮೂಲಕ ಯಾವುದೇ ವ್ಯವಹಾರ ನಡೆಸೋದಕ್ಕೆ ಸಾಧ್ಯವಾಗುತ್ತಿಲ್ಲ. ಪೋನ್ ಪೇ ಮೂಲಕ ವ್ಯವಹಾರಕ್ಕೆ ಮುಂದಾದ್ರೆ ನಾವು ತಾಕ್ಕಾಲಿಕವಾಗಿ ಲಭ್ಯವಿಲ್ಲ, ಅನಿಗದಿತ ನಿರ್ವಹಣೆ ಕಾರ್ಯದಲ್ಲಿದ್ದೇವೆ. ಅನಾನೂಕೂಲತೆಗೆ ನಾವು ಕ್ಷಮೆ ಯಾಚಿಸುತ್ತೇವೆ. ಅತೀ ಶೀಘ್ರದಲ್ಲಿಯೇ ನಾವು ಹಿಂದಿರುಗುತ್ತೇವೆ ಅನ್ನೋ ಮೆಸೆಜ್ ಪೋನ್ ಪೇ ಯಿಂದ ಗ್ರಾಹಕರಿಗೆ ಬರ್ತಿದೆ.

ಪೋನ್ ಪೇ ಕಂಪೆನಿ ಯೆಸ್ ಬ್ಯಾಂಕ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ವ್ಯವಹಾರ ನಡೆಸುತ್ತಿದೆ. ಆದ್ರೀಗ ಯೆಸ್ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರೋದ್ರಿಂದಾಗಿ ಪೋನ್ ಪೇ ಎಲ್ಲಾ ಸೇವೆಗಳು ಅಲಭ್ಯವಾಗಿದೆ. ಅತೀ ಶೀಘ್ರದಲ್ಲಿಯೇ ಗ್ರಾಹಕರ ಸೇವೆ ರೆಡಿ ಅಂತಾ ಪೋನ್ ಪೇ ಹೇಳುತ್ತಿದೆ. ಆದರೆ ಎಷ್ಟು ದಿನ ಹಿಡಿಯುತ್ತೇ ಅಂತಾ ನಿಖರವಾಗಿ ಹೇಳಿಲ್ಲ. ಹೀಗಾಗಿ ಪೋನ್ ಪೇ ನೆಚ್ಚಿಕೊಂಡಿರೋ ಗ್ರಾಹಕರು ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿದ್ದಾರೆ.