- Advertisement -
ಪುತ್ತೂರು : ಪಿಕಪ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ನಡೆದಿದೆ.
ಉರುವಾಲು ಕೃಷ್ಣ ಶೆಟ್ಟಿ ಹಾಗೂ ಕಣಿಯೂರು ದಯಾನಂದ ಗೌಡ ಎಂಬವರೇ ಮೃತ ದುರ್ದೈವಿಗಳು. ಘಟನೆ ನಡೆಯುತ್ತಿದ್ದಂತೆಯೇ ಪಿಕಪ್ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.