ಸೋಮವಾರ, ಜೂನ್ 16, 2025
HomeBreakingಯುವರತ್ನ ಕ್ಕೂ ಮುನ್ನ ಪವರ್ ಸ್ಟಂಟ್….! ಬ್ಯಾಕ್ ಡ್ರೈವ್ ವಿಡಿಯೋ ಸಖತ್ ವೈರಲ್…!!

ಯುವರತ್ನ ಕ್ಕೂ ಮುನ್ನ ಪವರ್ ಸ್ಟಂಟ್….! ಬ್ಯಾಕ್ ಡ್ರೈವ್ ವಿಡಿಯೋ ಸಖತ್ ವೈರಲ್…!!

- Advertisement -

ಸದಾ ಫಿಟನೆಸ್ ಗೆ ಆದ್ಯತೆ ನೀಡೋ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೊಮ್ಮೆ ಬ್ಯಾಕ್ ಡೈವ್ ವಿಡಿಯೋ ಜೊತೆ ಸುದ್ದಿಯಾಗಿದ್ದಾರೆ.

ಇತ್ತೀಚಿಗಷ್ಟೇ ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಪವರ್ ಸ್ಟಾರ್ ಅಲ್ಲಿನ ಪ್ರವಾಸಿ ತಾಣಗಳಿಗೆ ಹೋಗಿ ಸಖತ್ ಎಂಜಾಯ್ ಮಾಡಿದ್ದರು. ಮುರುಡೇಶ್ವರದ ಅರಬ್ಬಿ ಸಮುದ್ರದ ನೇತ್ರಾಣಿ ಗುಡ್ಡದಲ್ಲಿ ಬ್ಯಾಕ್ ಡೈವ್ ಮಾಡೋ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಫಿಟನೆಸ್ ಫ್ರೀಕ್ ಆಗಿರೋ ಪುನೀತ್ ರಾಜಕುಮಾರ್ ಸದಾ ಸ್ಲೈಕ್ಲಿಂಗ್, ವರ್ಕೌಟ್ ಅಂತ ಬ್ಯುಸಿಯಾಗಿರ್ತಾರೆ. ಹೀಗಾಗಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿದಾಗಲೂ ಸಾಹಸ ಮೆರೆದ ಪುನೀತ್ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಬ್ಯಾಕ್ ಡೈವ್ ಮಾಡೋ ಮೂಲಕ ಸಪ್ರೈಸ್ ನೀಡಿದ್ದಾರೆ.

ಅಷ್ಟೇ ಅಲ್ಲ ಇದರೊಂದಿಗೆ ಕ್ಯಾಪ್ಸನ್ ನೀಡಿರೋ ಪುನೀತ್ ರಾಜಕುಮಾರ್, ಹೊಸದೊಂದು ಲೋಕಕ್ಕೆ ಎಂಟ್ರಿ. ಬ್ಯಾಕ್ ಡೈವ್ ಮೂಲಕ ಎಂದಿದ್ದಾರೆ. ಈ ಸ್ಟಂಟ್ ನ್ನು ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಮಾಡಲಾಗಿದೆ. ಹೀಗಾಗಿ ಯಾರು ಇದನ್ನು ಪ್ರಯತ್ನಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಸಧ್ಯ ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ಪುನೀತ್ ರಾಜಕುಮಾರ್ ಯುವರತ್ನ ಸಿನಿಮಾ ರಿಲೀಸ್ ಗೆ ಕಾದಿದ್ದಾರೆ. ಏಪ್ರಿಲ್ 1 ರಂದು ಯುವರತ್ನ ರಾಜ್ಯದಾದ್ಯಂತ ರಿಲೀಸ್ ಆಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ಯುವರತ್ನ ಬಿಡುಗಡೆಯಲ್ಲಿ ವಿಳಂಬ ವಾಗಿತ್ತು.

RELATED ARTICLES

Most Popular