ತಮಿಳುನಾಡು: ತಲೈವಿ ಜಯಲಲಿತಾ ರಾಜಕೀಯ ದಿಕ್ಸೂಚಿಯಂತೆ ಬದುಕಿದ್ದ ತಮಿಳುನಾಡಿನ ರಾಜಕೀಯಕ್ಕೆ ಈಗ ಮತ್ತೊಮ್ಮೆ ಸ್ಟಾರ್ ಶೈನ್ ಟಚ್ ಸಿಗಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ.

ತಮಿಳುನಾಡಿನಲ್ಲಿ ೨೦೨೧ ರ ಮೇ ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ರಾಜಕೀಯ ರಂಗೇರಿದ್ದು ಬಹುಭಾಷಾ ನಟ ಕಮಲ್ ಹಾಸನ ಮಕ್ಕಳ್ ನಿಧಿಮಯಂ ಪಕ್ಷದ ಮೂಲಕ ನೇರ ರಾಜಕೀಯಕ್ಕೆ ಧುಮುಕಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಕೂಡ ರಾಜಕೀಯ ಪ್ರವೇಶಿಸಲು ಸಿದ್ಧ ವಾಗಿದ್ದು ಡಿಸೆಂಬರ್ ೩೧ ರಂದು ಅಧಿಕೃತವಾಗಿ ಪಕ್ಷ ಹಾಗೂ ಚಿಹ್ನೆ ಘೋಷಿಸಲಿದ್ದಾರೆ .ರಜನಿಕಾಂತ್ ಪಕ್ಷಕ್ಕೆ ಮಕ್ಕಳ್ ಸೇವೆ ಕಚ್ಚಿ ಎಂದು ಹೆಸರಿಡಲಾಗಿದ್ದು ಚುನಾವಣಾ ಆಯೋಗ ಅಟೋ ಚಿಹ್ನೆ ನೀಡಿದೆ.

ಈ ಮಧ್ಯೆ ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳ ನಡುವಿನ ರಾಜಕೀಯ ಜಿದ್ದಾಜಿದ್ದಿ ಮಾತ್ರಬನೋಡಿದ್ದ ತಮಿಳುನಾಡಿನ ಜನತೆಗೆ ಇಬ್ಬರೂ ಸ್ಟಾರ್ ಗಳು ಸೇರಿ ಮತ್ತೊಂದು ತೃತೀತ ರಂಗ ರಚಿಸಿ ಟಕ್ಕರ್ ನೀಡುವ ಮೂಲಕ ತ್ರಿಕೋನ ಫೈಟ್ ತೋರಿಸುವ ಮುನ್ಸೂಚನೆ ನೀಡಿದ್ದಾರೆ.

ಕಮಲಹಾಸನ ಪಕ್ಷ ಮತ್ತು ಚಿಹ್ನೆ ಘೋಷಿಸಿದ್ದರೂ ಇನ್ನು ಪಕ್ಷದ ಪ್ರಣಾಳಿಕೆ ಘೋಷಿಸಿಲ್ಲ. ಆದರೆ ತಮ್ಮ ಸಿದ್ಧಾಂತಗಳು ಎಡಪಂಥೀಯ ವಿಚಾರಧಾರೆಗಳನ್ನು ಹೊಂದಿರುತ್ತದೆ ಎಂಬ ಮುನ್ಸೂಚನೆ ನೀಡಿದ್ದಾರೆ.ಈ ಮಧ್ಯೆ ರಜನಿಕಾಂತ್ ಮತ್ತು ಕಮಲಹಾಸನ್ ಇಬ್ಬರೂ ಒಟ್ಟಾಗಿ ರಾಜಕೀಯ ನಡೆಸುತ್ತಾರೆ. ಚುನಾವಣೆಯಲ್ಲೂ ಮೈತ್ರಿಮಾಡಿಕೊಂಡು ಸ್ಪರ್ಧಿಸುತ್ತಾರೆ ಎನ್ನಲಾಗಿದೆ.

ಕೆಲದಿನಗಳ ಹಿಂದೆ ಮಧುರೈನಲ್ಲಿ ಸಾರ್ವಜನಿಕ ಸಭೆ ನಡೆಸಿದ್ದ ನಟ ಕಮಲಹಾಸನ್, ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ರಜನಿಕಾಂತ್ ರ ಹೊಸ ಪಕ್ಷದ ಜೊತೆ ಮೈತ್ರಿ ಸಂಗತಿಯನ್ನು ನಿರಾಕರಿಸಿರಲಿಲ್ಲ. ಬದಲಾಗಿ ಈಗಲೇ ಏನ್ನನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದರು.

ಈಗಲೂ ನಮ್ಮ ನಡುವೆ ಒಂದು ಪೋನ್ ಕಾಲ್ ನ ಮಾತುಕತೆ ಯಷ್ಟೇ ಬಾಕಿ ಎಂದು ಕಮಲ ಹಾಸನ್ ಹೇಳಿರೋದು ಎರಡು ಪಕ್ಷಗಳು ಮೈತ್ರಿ ರಾಜಕಾರಣ ದತ್ತ ಮುಖ ಮಾಡಿವೆ ಎಂಬ ಭಾವನೆ ಮೂಡಿಸಿದ್ದು, ಸಧ್ಯದಲ್ಲೇ ಈ ಗೊಂದಲಕ್ಕೆ ಉತ್ತರ ಸಿಗುವ ನೀರಿಕ್ಷೆ ಇದೆ