ತೆರೆಗೆ ಬರಲಿದೆ ಕೋತಿರಾಜನ ಕತೆ….! ಜೋಗದಲ್ಲಿ ಚಿತ್ರೀಕರಣ ಆರಂಭ…!!

ಜೀವನದಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಅಂತ ಜೋಗಕ್ಕೆ ಬರೋ ಅದೆಷ್ಟೋ ಪ್ರವಾಸಿಗರು ಅಲ್ಲೇ ಜೀವನ ಕೊನೆಯಾಗಿಸಿದ್ದು ಇದೆ. ಹೀಗೆ ಯಾರಾದ್ರು ಜೋಗದಲ್ಲಿ ಅತ್ಮಹತ್ಯೆ ಮಾಡಿಕೊಂಡ್ರೇ ನೆನಪಾಗೋ ಹೆಸರು ಕೋತಿ ರಾಜ್. ಇಂಥ ಸಾಹಸಿ ಕೋತಿ ರಾಜ್ ನ ಕತೆ ಈಗ ತೆರೆಗೆ ಬರಲಿದೆ.

ಕೋತಿಯಂತೆ‌ ಮರ ಹಾಗೂ ಕಡಿದಾದ ಗುಡ್ಡ-ಬೆಟ್ಟ,ಪ್ರಪಾತಕ್ಕೆ ಇಳಿದು ಹತ್ತುವ ಕಾರಣಕ್ಕೆ ಕೋತಿರಾಜ್ ಎಂದು ಹೆಸರು ಪಡೆದ ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಜೀವನ ಹಾಗೂ ಸಾಧನೆ ಕಿರುಚಿತ್ರವಾಗಿ ಪ್ರದರ್ಶನಗೊಳ್ಳಲಿದೆ.

ಚಿತ್ರದುರ್ಗ ಮೂಲದ ಜ್ಯೋತಿರಾಜ್, ಅಲ್ಲಿ ಕಲ್ಲಿನ ಕೋಟೆಯನ್ನು ಹತ್ತಿಳಿಯುವ‌ ಮೂಲಕ ಸಾಹಸ ಮೈಗೂಡಿಸಿಕೊಂಡು ಕೋತಿರಾಜ್ ಎಂದೇ ಖ್ಯಾತಿ ಪಡೆದಿದ್ದಾನೆ.ಜೋಗದಂತಹ ಅಪಾಯಕಾರಿ ಸ್ಥಳದಲ್ಲಿ ಯಾರಾದ್ರೂ ಆತ್ಮಹತ್ಯೆ ಗೆ ಶರಣಾದ್ರೇ ಜ್ಯೋತಿರಾಜ್ ನೇ ಕೆಳಕ್ಕೆ ಇಳಿದು ಹೆಣ ಎತ್ತಿಕೊಡುವ ಸಾಹಸ ಮಾಡ್ತಿದ್ದ.

ಹೀಗಾಗಿ ಜ್ಯೋತಿರಾಜ್ ನ ಸಾಹಸಗಳನ್ನು ಕಿರುಚಿತ್ರವಾಗಿಸಲು ಆಸ್ಟ್ರೇಲಿಯಾದ ಸ್ಟ್ಯಾನ್ಲಿ ಎಂಬುವವರು ಮುಂದೇ ಬಂದಿದ್ದು ಈಗಾಗಲೇ ಜೋಗದಲ್ಲಿ ಚಿತ್ರೀಕರಣ ಆರಂಭವಾಗಿದೆ.ದಿ ಇನ್ ಕ್ರೆಡಿಬಲ್ ಮಂಕಿ ಮ್ಯಾನ್ ಹೆಸರಿನಲ್ಲಿ ಕಿರುಚಿತ್ರ ನಿರ್ಮಿಸಲಾಗುತ್ತಿದ್ದು, ನಾಲ್ಕು ದಿನಗಳ ಕಾಲ ಜೋಗದಲ್ಲೇ ಚಿತ್ರೀಕರಣ ನಡೆಯಲಿದೆ. ಈ ಕಿರುಚಿತ್ರ ಕೋತಿರಾಜ್ ನ ಬಾಲ್ಯ,ಬದುಕು ಎಲ್ಲವನ್ನು ಒಳಗೊಂಡಿದೆ.

ಇನ್ನು‌ಜೋಗದಲ್ಲಿ ಜಲಪಾತಕ್ಕೆ ಇಳಿಯುವುದು ಸೇರಿದಂತೆ ಹಲವು ಸಾಹಸಮಯ ದೃಶ್ಯಗಳ ಚಿತ್ರೀಕರಣ ನಡೆದಿದ್ದು ಈ ಶೂಟಿಂಗ್ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರ್ತಿದ್ದಾರೆ.

Comments are closed.