ಎಣ್ಣೆ ಅಂಗಡಿಗಾಗಿ ಎರಡು ಫ್ಯಾಮಿಲಿ ನಡುವೆ ಪ್ರತಿಷ್ಠೆ ಫೈಟ್…! ಬರೋಬ್ಬರಿ 510 ಕೋಟಿಗೆ ಹರಾಜಾಯ್ತು ಲಿಕ್ಕರ್ ಶಾಪ್….!!

ಒಮ್ಮೊಮ್ಮೆ ಜನರು ಪ್ರತಿಷ್ಟೆಗಾಗಿ ಏನೇನೋ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಲ್ಲಿ ನಡೆದಿದ್ದು ಅದೇ ಲಿಕ್ಕರ್ ಶಾಪ್ ಖರೀದಿಯನ್ನೇ ಪ್ರತಿಷ್ಠೆ ಮಾಡಿಕೊಂಡ ಎರಡು ಕುಟುಂಬದಿಂದಾಗಿ 72 ಲಕ್ಷ ರೂಪಾಯಿಯ ಹೆಂಡದಂಗಡಿ ಬರೋಬ್ಬರಿ 510 ಕೋಟಿಗೆ ಹರಾಜಾಗೋ ಮೂಲಕ ಜನರು ಹುಬ್ಬೇರಿಸುವಂತೆ ಮಾಡಿದೆ.

ರಾಜಸ್ಥಾನದ ಹನುಮಗಡ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಆರಂಭವಾದ ಲಿಕ್ಕರ್ ಶಾಪ್ ಹರಾಜು ಪ್ರಕ್ರಿಯೆ ರಾತ್ರಿಯಾದರೂ ಮುಗಿದಿರಲಿಲ್ಲ. ಕೊನೆಗೂ ಎರಡು ಕುಟುಂಬಗಳ ಪೈಕಿ ಒಂದು ಕುಟುಂಬ 510 ಕೋಟಿಗೆ ತಮ್ಮ ಪೈಪೋಟಿ ಕೊನೆಗೊಳಿಸಿದ್ದರಿಂದ ಇನ್ನೊಂದು ಕುಟುಂಬ 72 ಲಕ್ಷದ ಶಾಪ್ ನ್ನು 510 ಕೋಟಿಗೆ ಖರೀದಿಸಿ ಗೆದ್ದು ಬೀಗಿದೆ.

ರಾಜಸ್ಥಾನದಲ್ಲಿ ಈ ಹಿಂದಿನಿಂದಲೂ ಲಿಕ್ಕರ್ ಶಾಪ್ ಗಳನ್ನು ಹರಾಜಿನಲ್ಲಿ ಮಾರಾಟ ಮಾಡುವುದು ಸಾಮಾನ್ಯ.  ಈ ಹಿಂದೆ ಮುಖ್ಯಮಂತ್ರಿ ವಸುಂಧರಾ ರಾಜೆ ಈ ಪದ್ಧತಿ ರದ್ದುಗೊಳಿಸಿದ್ದರು. ಆದರೆ ಈ ಕಾಂಗ್ರೆಸ್ ನ ಗೆಹ್ಲೋಟ್ ಸರ್ಕಾರ  ಈ ಪದ್ಧತಿ ಪುನರಾರಂಭಿಸಿದೆ.

ಹನುಮನಗಡದ ನೋಹರ್ ನಲ್ಲಿರೋ ಈ ಮದ್ಯದಂಗಡಿಯ ಬೆಲೆ 72.70ಲಕ್ಷ ರೂಪಾಯಿ. ಕಳೆದ ವರ್ಷ  ಈ ಶಾಪ್ ನ್ನು ಆನಲೈನ್ ಲಾಟರಿ ಮೂಲಕ 65 ಲಕ್ಷಕ್ಕೆ ಸೇಲ್ ಮಾಡಲಾಗಿತ್ತು. ಈ ಭಾರಿ ಮತ್ತೆ ಹರಾಜು ಪ್ರಕ್ರಿಯೆಯಲ್ಲಿ ಸೇಲ್ ಮಾಡಲಾಗಿದ್ದು, ಅತ್ಯಧಿಕ ಅಂದ್ರೆ ಬರೋಬ್ಬರಿ 510 ಕೋಟಿಗೆ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ.

ಕಿರಣ್ ಕನ್ವಾರ್ ಎಂಬುವವರು ತಮ್ಮ ಎದುರಾಳಿ ಫ್ಯಾಮಿಲಿಯಿಂದ ಈ ಅಂಗಡಿಯನ್ನು ತಪ್ಪಿಸಲೇಬೇಕೆಂದು ಪಣತೊಟ್ಟು ಬರೋಬ್ಬರಿ 510 ಕೋಟಿ ಬಿಡ್ ಮಾಡಿ ಗೆದ್ದಿದ್ದಾರೆ.  ಈಗ ಬಿಡ್ ನಲ್ಲಿ ಗೆದ್ದ ಕಿರಣ ಕನ್ವಾರ್ ಮೂರೇ ದಿನದಲ್ಲಿ 510 ಕೋಟಿಯ ಶೇಕಡಾ 2 ರಷ್ಟು ಹಣವನ್ನು ಠೇವಣಿ ಇರಿಸಬೇಕು.ಇಲ್ಲದಿದ್ದರೇ ಬಿಡ್ ರದ್ದಾಗಲಿದೆ.

ಒಟ್ಟಿನಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ  ಮೂಲಬೆಲೆಯ ಸುಮಾರು 708 ಪಟ್ಟು ಹೆಚ್ಚು ಬೆಲೆಗೆ ಮದ್ಯದಂಗಡಿ ಮಾರಾಟವಾಗಿದೆ. ಈ ಮೊದಲು ಕೂಡ ಇದೇ ರೀತಿಯ ಪ್ರತಿಷ್ಠೆಗಾಗಿ 11 ಹಾಗೂ 8.9 ಕೋಟಿಗೆ ಅಂಗಡಿಗಳು ಹರಾಜಾದ ಉದಾಹರಣೆ ಇದೆ.  

Comments are closed.