ರಾಕಿ ಅಭಿಮಾನಿಗಳಿಗೆ ಸಿದ್ಧವಾಯ್ತು ಹಬ್ಬದೂಟ….! ಕೆಜಿಎಫ್-2 ರಿಲೀಸ್ ಡೇಟ್ ಫಿಕ್ಸ್….!!

ಭಾರತದ ಸಿನಿ ಇತಿಹಾಸದಲ್ಲೇ ಹೊಸ ಸಂಚಲನ ಮೂಡಿಸಿದ ಚಿತ್ರ ಕೆಜಿಎಫ್. ಕೆಜಿಎಫ್ ಸೃಷ್ಟಿಸಿದ ಹವಾದಲ್ಲೇ ಕೆಜಿಎಫ್-2 ಕೂಡ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳಿಗೆ ಕಾಯುವಿಕೆ ಕೊನೆಯಾಗುವ ಮುನ್ಸೂಚನೆ ಸಿಕ್ಕಿದೆ.

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಕೆಜಿಎಫ್-2 ರಿಲೀಸ್ ಯಾವಾಗ ಅನ್ನೋ ಪ್ರಶ್ನೆ ಲಕ್ಷಾಂತರ ಅಭಿಮಾನಿಗಳನ್ನು ಕಾಡುತ್ತಿದೆ. ಯಶ್ ಅಭಿಮಾನಿಗಳಂತೂ ಥಿಯೇಟರ್ ಗೆ ನುಗ್ಗೋಕೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಈಗಾಗಲೇ ಕೆಜಿಎಫ್-2 ಶೂಟಿಂಗ್ ಮುಗಿಸಿರೋ ಯಶ್ ಫ್ಯಾಮಿಲಿ ಸಮೇತ ಮಾಲ್ಡಿವ್ಸ್ ಗೆ ಹಾರಿದ್ದರೇ, ಇತ್ತ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಕೆಜಿಎಫ್-2 ಯಾವಾಗ ತೆರೆಗೆ ಬರಲಿದೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು ಚಿತ್ರತಂಡ ಬರೋಬ್ಬರಿ 6 ತಿಂಗಳ ಬಳಿಕ ಕೆಜಿಎಫ್-2 ರೀಲಿಸ್ ಗೆ ಮುಹೂರ್ತ ಫಿಕ್ಸ್ ಮಾಡಿದೆ.

ಕೆಜಿಎಫ್-2 ದಲ್ಲಿ ಯಶ್ ನ ರಾಕಿ ಪಾತ್ರದಷ್ಟೇ ಜನಜನಿತವಾದ ಇನ್ನೊಂದು ಪಾತ್ರ ಅಧೀರಾ. ಬಾಲಿವುಡ್ ನಟ ಸಂಜಯ್ ದತ್ ತಮ್ಮ ಅನಾರೋಗ್ಯದ ನಡುವೆಯೂ ಮಿಂಚಿದ ಈ ಪಾತ್ರ ಸಾಕಷ್ಟು ಕ್ಯೂರಿಯಾಸಿಟಿ ಹಾಗೂ ಹೈಪ್ ಸೃಷ್ಟಿಸಿದೆ.

https://kannada.newsnext.live/you-know-whats-the-most-google-searched-food-in-2020/

ಹೀಗೆ ಜನಮನಸೆಳೆದ ಅಧೀರಾ ಸಂಜಯ್ ದತ್ ಹುಟ್ಟುಹಬ್ಬ ಜುಲೈ 29. ಹೀಗಾಗಿ ಅಧೀರಾ ಹುಟ್ಟುಹಬ್ಬದ ಗಿಫ್ಟ್ ಆಗಿ ಹಿಂದಿ ಸೇರಿದಂತೆ ಒಟ್ಟು ೫ ಭಾಷೆಯಲ್ಲಿ ಕೆಜಿಎಫ್-2 ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.

ಆದರೆ ಕೆಜಿಎಫ್-2 ರಿಲೀಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಇನ್ನು ಎರಡು ಟೀಸರ್ ರಿಲೀಸ್ ಮಾಡೋ ಪ್ಲ್ಯಾನ್ ನಲ್ಲಿರೋ ಕೆಜಿಎಫ್-2 ನಿರ್ದೇಶಕ ನೀಲ್, ಬಳಿಕೆ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಸಧ್ಯಕ್ಕೆ ಊಹಾಪೋಹವಾದರೂ ಬಹುತೇಕ ಜುಲೈ 30 ಕೆಜಿಎಫ್-2 ವಿಶ್ವದ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣೋದು ಬಹುತೇಕ ಖಚಿತವಾಗಿದ್ದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಈಗಲೇ ದಿನಗಣನೆ ಆರಂಭಿಸಿದ್ದಾರೆ.

Comments are closed.