ಮಂಗಳವಾರ, ಏಪ್ರಿಲ್ 29, 2025
HomeBreakingಗೂಗ್ಲಿ ಬೆಡಗಿ ಕೊಟ್ರು ಗುಡ್ ನ್ಯೂಸ್…..! ಕೃತಿ ಕರಬಂಧ ಕೈ ಹಿಡಿಯೋರ್ಯಾರು ಗೊತ್ತಾ…?!

ಗೂಗ್ಲಿ ಬೆಡಗಿ ಕೊಟ್ರು ಗುಡ್ ನ್ಯೂಸ್…..! ಕೃತಿ ಕರಬಂಧ ಕೈ ಹಿಡಿಯೋರ್ಯಾರು ಗೊತ್ತಾ…?!

- Advertisement -

ಸ್ಯಾಂಡಲ್ ವುಡ್ ನ ಗೂಗ್ಲಿ ಸಿನಿಮಾದಲ್ಲಿ ಯಶ್ ಗೆ ಜೋಡಿಯಾಗಿದ್ದ ನಟಿ ಕೃತಿ ಕರಬಂಧ ಕೊನೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಡೇಟಿಂಗ್ ನಲ್ಲಿರೋ ಕೃತಿ ತಮ್ಮ ಬಾಯ್ ಪ್ರೆಂಡ್ ಪುಲ್ಕಿತ್ ಸಾಮ್ರಾಟ್ ಜೊತೆ ಸಪ್ತಪದಿ ತುಳಿಯೋ ಮನಸ್ಸು ಮಾಡಿದ್ದಾರೆ.

ನಟ ಪುಲ್ಕಿತ್ ಸಾಮ್ರಾಟ್ ಜೊತೆ ಬಹುಕಾಲದಿಂದ ಡೇಟಿಂಗ್ ನಲ್ಲಿರೋ ಕೃತಿ ಕರಬಂಧ ಈ ವಿಚಾರವನ್ನು ಮುಕ್ತವಾಗಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಆದರೆ ಈ ಜೋಡಿ ಮದುವೆ ವಿಚಾರದಲ್ಲಿ ಮಾತ್ರ ಮೌನ ಮುರಿದಿರಲಿಲ್ಲ.

ಈಗ ಮದುವೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೃತಿ ಕರಬಂಧ, ನಾನು ಯಾವಾಗ ಮದುವೆಯಾಗುತ್ತೇನೆ, ಯಾರನ್ನು ಮದುವೆ ಆಗುತ್ತೇನೆ ಅನ್ನೋದು ನನ್ನ ವೈಯಕ್ತಿಕ ವಿಚಾರ. ಅದನ್ನು ತಿಳಿಯುವ ಹಕ್ಕು ನನ್ನ ಪೋಷಕರಿಗೆ ಮಾತ್ರ ಇದೆ ಎಂದು ನಾನು ಬಯಸುತ್ತೇನೆ.

ಆದರೂ ಕಾಲ ಕೂಡಿ ಬಂದಾಗ ಎಲ್ಲವನ್ನು ಬಹಿರಂಗ ಪಡಿಸುತ್ತೇನೆ. ನಾನು ಈ ಕ್ಷಣದಲ್ಲಿ ನಂಬಿಕೆ ಇಟ್ಟವಳು. ಹೀಗಾಗಿ ಮುಂದಿನದ್ದನ್ನು ಇನ್ನು ಯೋಚಿಸಿಲ್ಲ. ಕಾಲ ಬಂದಾಗ ಎಲ್ಲವೂ ಆಗುತ್ತದೆ ಎನ್ನುವ ಮೂಲಕ ಮದುವೆಯಾಗೋದು ನಿಜ ಯಾವಾಗ ಅನ್ನೋದು ಗೊತ್ತಿಲ್ಲ ಎಂಬಂತೆ ಒಗಟೊಗಟಾಗಿ ಮಾತನಾಡಿದ್ದಾರೆ.

ಅದ್ದೂರಿ ಮದುವೆ ಇಷ್ಟ ಪಡುತ್ತೀರಾ ಎಂಬ ಪ್ರಶ್ನೆಗೂ ಆ ಬಗ್ಗೆ ನಾನು ಇನ್ನು ಯೋಚಿಸಿಲ್ಲ ಎನ್ನುವ ಮೂಲಕ ಕೃತಿ ವೆಡ್ಡಿಂಗ್ ಪ್ಲ್ಯಾನ್ ಗೌಪ್ಯವಾಗಿಡಲು ಬಯಸುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಡೇಟಿಂಗ್ ನಲ್ಲಿದ್ದೇನೆ, ಮದುವೆಯಾಗುತ್ತೇನೆ ಎಂಬುದನ್ನು ಬಿಟ್ರೇ ಬೇರಾವ ಡಿಟೇಲ್ಸ್ ಕೊಡದ ಕೃತಿ ಮುಂದೊಂದು ದಿನ ಸದ್ದಿಲ್ಲದೇ ಸಪ್ತಪದಿ ತುಳಿದು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರೂ ಅಚ್ಚರಿಯೇನಿಲ್ಲ.  

RELATED ARTICLES

Most Popular