ಇಮೇಜ್ ಡ್ಯಾಮೇಜ್ ತಡೆಯಲು ಶಿಲ್ಪಾ ಶೆಟ್ಟಿ ಮಾಸ್ಟರ್ ಪ್ಲ್ಯಾನ್…! ಪತಿಯಿಂದ ವಿಚ್ಛೇಧನಕ್ಕೆ ಮುಂದಾದ್ರಾ ಕರಾವಳಿ ಬೆಡಗಿ…!!

ಮುಂಬೈ: ಕಿರುತೆರೆಯ ರಿಯಾಲಿಟಿ ಶೋ, 14 ವರ್ಷಗಳ ಬಳಿಕ ಮತ್ತೊಮ್ಮೆ ಹಿರಿತೆರೆಗೆ ಎಂಠ್ರಿ ಹೀಗೆ ನಾನಾ ಕಾರಣಗಳಿಂದ ಖುಷಿ ಖುಷಿಯಾಗಿದ್ದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಗೆ ಬದುಕು ಸಖತ್ ಶಾಕ್ ನೀಡಿದೆ. ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕೊಂಡಿರೋದಿಕ್ಕೆ ಶಿಲ್ಪಾ ಸಖತ್ ಗರಂ ಆಗಿದ್ದು ಪತಿಯಿಂದ ದೂರವಾಗೋದಿಕ್ಕೆ ನಿರ್ಧರಿಸಿದ್ದಾರಂತೆ.

ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಸಿನಿಮಾ ನಿರ್ಮಾಣ ಹಾಗೂ ಪ್ರಸಾರದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ ಕುಂದ್ರಾರನ್ನು ಮುಂಬೈನ ಸಿಸಿಬಿ ಪೊಲೀಸರು ಬಂಧಿಸಿದ್ದರು. 14 ದಿನಗಳ ಪೊಲೀಸ್ ಕಸ್ಟಡಿಯ ಬಳಿಕ  ರಾಜ್ ಕುಂದ್ರಾಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಹೀಗಾಗಿ ರಾಜ್ ಕುಂದ್ರಾ ಈಗ ಜೈಲು ಸೇರಿದ್ದಾರೆ. ಈ ಮಧ್ಯೆ ಮೊದ ಮೊದಲು ರಾಜ್ ಕುಂದ್ರಾ ನಿರಪರಾಧಿ. ಪತಿ ತೆಗೆದಿದ್ದು ಕಾಮೋತ್ತೇಜಕ ಸಿನಿಮಾವೇ ಹೊರತು ಪೋರ್ನ್ ಸಿನಿಮಾಗಳಲ್ಲ ಎಂದು ಪತಿಯನ್ನು ಸಮರ್ಥಿಸಿಕೊಂಡಿದ್ದ ಶಿಲ್ಪಾ ಶೆಟ್ಟಿಗೆ ಈಗ ಭಯ ಎದುರಾಗಿದೆ.

ಪತಿ ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು ನಿಜ ಎಂಬುದು ಬಹುತೇಕ ಸಾಬೀತಾಗಿದ್ದು, ಎಲ್ಲ ಸಾಕ್ಷ್ಯಾಧಾರಗಳು ರಾಜ್ ಕುಂದ್ರಾ ವಿರುದ್ಧವೇ ಬೊಟ್ಟು ಮಾಡುತ್ತಿವೆ. ಹೀಗಾಗಿ ಶಿಲ್ಪಾ ಶೆಟ್ಟಿ ತಮಗಾಗುವ ಡ್ಯಾಮೇಜ್ ಕುರಿತು ಚಿಂತಿಸಲಾರಂಭಿಸಿದ್ದು, ಇದರಿಂದ ತಪ್ಪಿಸಿಕೊಳ್ಳಲು ರಾಜ್ ಕುಂದ್ರಾರಿಂದ ದೂರವಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ರಾಜ್ ಕುಂದ್ರಾ ಪೋರ್ನ್ ಸಿನಿಮಾ ತಯಾರಿಕೆಯಲ್ಲಿ ತೊಡಗಿದ್ದು ಶಿಲ್ಪಾ ಶೆಟ್ಟಿಗೆ ಗೊತ್ತಿರಲಿಲ್ಲ ಎನ್ನಲಾಗಿದ್ದು, ಪತಿ ಕಾಮೋತ್ತೇಜಕ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದೇ ನಂಬಿದ್ದರಂತೆ ಶಿಲ್ಪಾ ಶೆಟ್ಟಿ. ಈಗ ಸತ್ಯ ಬಹಿರಂಗವಾಗಿದ್ದು, ಶಿಲ್ಪಾ ಶೆಟ್ಟಿಗೆ ಆಘಾತವಾಗಿದೆ.

ಹೀಗಾಗಿ ಬಾಲಿವುಡ್ ನಲ್ಲಿ ತಮ್ಮ ಇಮೇಜ್ ಹಾಗೂ ಕೆರಿಯರ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರಿಂದ ವಿಚ್ಛೇಧನ ಪಡೆಯುವ ಕುರಿತು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಿಲ್ಪಾ ಶೆಟ್ಟಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Comments are closed.