ಮೊದಲ ಚಿತ್ರದಲ್ಲಿ ಸಾಕಷ್ಟು ಭರವಸೆ ಮೂಡಿಸಿದ ಸಕ್ಕರೆ ನಾಡಿನ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಎರಡನೇ ಚಿತ್ರದ ಶೂಟಿಂಗ್ ಗೆ ಸಿದ್ಧತೆ ನಡೆಸಿದ್ದು, ಸಂಕ್ರಾಂತಿ ಬಳಿಕ ಮಂಡ್ಯದಲ್ಲಿ “ಬ್ಯಾಡ್ ಮ್ಯಾನರ್ಸ್” ಸದ್ದು ಜೋರಾಗಲಿದೆ.

ಅಮರ್ ಚಿತ್ರದ ಬಳಿಕ ಅಭಿಷೇಕ್ ಅಂಬರೀಶ್ ದುನಿಯಾ ಸೂರಿ ಜೊತೆ ಬ್ಯಾಡ್ ಮ್ಯಾನರ್ಸ್” ಸಿನಿಮಾ ನಿರ್ಮಿಸೋದಾಗಿ ಘೋಷಿಸಿದ್ದರು. ಜನವರಿ 15 ರ ಬಳಿಕ ಮಂಡ್ಯ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಶೂಟಿಂಗ್ ನಡೆಯಲಿದೆ. ಮೊದಲ ಶೆಡ್ಯೂಲ್ ನಲ್ಲಿ ಆಕ್ಯ್ಷನ್ ಸೀನ್ ಗಳನ್ನು ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.

ಮೊದಲ ಶೆಡ್ಯೂಲ್ ನಲ್ಲಿ 12 ದಿನಗಳ ಕಾಲ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ನಡೆಯಲಿದ್ದು, ಆಕ್ಷ್ಯನ್ ದೃಶ್ಯಗಳನ್ನು ರವಿವರ್ಮ ಸಾರಥ್ಯದಲ್ಲಿ ಚಿತ್ರೀಕರಿಸಲು ಸಿದ್ಧತೆ ನಡೆದಿದೆ. ಚಿತ್ರಕ್ಕೆ ಸೂರಿ ನಿರ್ದೇಶನ ಇರೋದು ಸಾಕಷ್ಟು ಕುತೂಹಲ ಹೆಚ್ಚಿಸಿದೆ.

ಮೊದಲ ಚಿತ್ರದಲ್ಲಿ ಲವ್ ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದ ಅಭಿಷೇಕ್ ಈ ಚಿತ್ರದಲ್ಲಿ ಸಖತ್ ಆಕ್ಷ್ಯನ್ ಸೀನ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಸಖತ್ ವರ್ಕೌಟ್ ಕೂಡ ಮಾಡಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ಅದ್ದೂರಿ ತಾರಾಗಣವಿದ್ದು, ಹಿರೋಯಿನ್ ಯಾರೆಂಬುದು ಇನ್ನು ಕನ್ಪರ್ಮ್ ಆಗಿಲ್ಲ. ಬ್ಯಾಡ್ ಮ್ಯಾನರ್ಸ್ ಗೆ ಚರಣರಾಜ್ ಸಂಗೀತವಿದ್ದು, ಸುಧೀರ್ ಕೆಎಂ ಚಿತ್ರ ನಿರ್ಮಿಸುತ್ತಿದ್ದಾರೆ. ಅಮರ್ ಬಳಿಕ ಬ್ಯಾಡ್ ಮ್ಯಾನರ್ಸ್ ನಲ್ಲಿ ಜ್ಯೂನಿಯರ್ ಅಂಬಿ ನೊಡೋಕೆ ಪ್ರೇಕ್ಷಕರು ಸಖತ್ ಉತ್ಸುಕರಾಗಿದ್ದಾರೆ.