ವಿರುಷ್ಕಾ ಮನೆಗೆ ಮಹಾಲಕ್ಷ್ಮೀ….! ಹೆಣ್ಣುಮಗುವಿಗೆ ಜನ್ಮನೀಡಿದ ಅನುಷ್ಕಾ ವಿರಾಟ್ ಕೊಹ್ಲಿ…!!

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಕುಟುಂಬ ಹಾಗೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಟೀಂಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದು, ನಿಮ್ಮೊಂದಿಗೆ ಈ ವಿಚಾರ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ನಾವು ಹೆಣ್ಣುಮಗುವಿನ ಪಾಲಕರಾಗಿದ್ದೇವೆ. ಮಧ್ಯಾಹ್ನ ನಮಗೆ ಹೆಣ್ಣು ಮಗು ಜನಿಸಿದೆ ಎಂದಿದ್ದಾರೆ.

ನಮ್ಮ ಬದುಕಿನ  ಹೊಸ ಅಧ್ಯಾಯವನ್ನು ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಿಮ್ಮೆಲ್ಲರ ಹಾರೈಕೆ ಹಾಗೂ ಪ್ರೀತಿಯಿಂದ ಅನುಷ್ಕಾ ಹಾಗೂ ಬೇಬಿ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ನೀವೆಲ್ಲರೂ ನಮ್ಮ ಪ್ರವೈಸಿಯನ್ನು ಗೌರವಿಸುತ್ತಿರೆಂದು ಭಾವಿಸಿದ್ದೇನೆ ಎಂದಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ವಿರುಷ್ಕಾ ಜೋಡಿ ಡಿಫರೆಂಟ್ ಪೋಟೋ ಜೊತೆ ತಾವು ಮಗುವನ್ನು ನೀರಿಕ್ಷಿಸುತ್ತಿರುವ ಸಂಗತಿಯನ್ನು ರೀವಿಲ್ ಮಾಡಿದ್ದರು. ಗರ್ಭಿಣಿಯಾಗಿದ್ದರೂ ವಿರಾಟ್ ಜೊತೆ ಕೆಲ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಅನುಷ್ಕಾ ಬೇಬಿ ಬಂಪ್ ಜೊತೆ ಗಮನ ಸೆಳೆದಿದ್ದರು.

8 ತಿಂಗಳ ಬಳಿಕವೂ ವೈದ್ಯರ ಸಲಹೆ ಮೇರೆಗೆ ಶೀರ್ಷಾಸನ ಮಾಡಿದ್ದ ಅನುಷ್ಕಾ, ಜಾಹೀರಾತಿನ ಶೂಟಿಂಗ್ ಸೇರಿದಂತೆ ಪ್ರಗೆನ್ಸಿ  ವೇಳೆಯೂ ತಮ್ಮೆಲ್ಲ ಚಟುವಟಿಕೆಗಳನ್ನು ಸಹಜವಾಗಿಯೇ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದರು.

ಕೆಲ ತಿಂಗಳ ದಿನಗಳ ಹಿಂದೆ ಪೆಟರ್ನಟಿ ಲೀವ್ಹ್ ಪಡೆದು ಇಂಡಿಯಾಕ್ಕೆ ಮರಳಿದ್ದ ವಿರಾಟ್ ಅನುಷ್ಕಾ ಆರೈಕೆಯಲ್ಲಿ ತೊಡಗಿಕೊಂಡಿದ್ದರು.

Comments are closed.