ಭಾನುವಾರ, ಏಪ್ರಿಲ್ 27, 2025
HomeBreakingMartin: ರೀವಿಲ್ ಆಯ್ತು ಧ್ರುವ್ ಸರ್ಜಾ ಮಾರ್ಟಿನ್ ಅವತಾರ…! ಸಖತ್ ಮಾಸ್ ಲುಕ್ ನಲ್ಲಿ ಮನಸೆಳೆದ...

Martin: ರೀವಿಲ್ ಆಯ್ತು ಧ್ರುವ್ ಸರ್ಜಾ ಮಾರ್ಟಿನ್ ಅವತಾರ…! ಸಖತ್ ಮಾಸ್ ಲುಕ್ ನಲ್ಲಿ ಮನಸೆಳೆದ ಆಕ್ಷ್ಯನ್ ಪ್ರಿನ್ಸ್….!!

- Advertisement -

ಅದ್ದೂರಿ ಮೂಲಕ ಸ್ಯಾಂಡಲ್ ವುಡ್ ಮನಗೆದ್ದ ಪೊಗರಿನ ಧ್ರುವ್ ಸರ್ಜಾ ಮತ್ತೊಂದು ಮಾಸ್ ಟೈಟಲ್ ಜೊತೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ಎ.ಪಿ.ಅರ್ಜುನ್ ಜೊತೆಗಿನ ಧ್ರುವ್ ಸರ್ಜಾ ಸಿನಿಮಾ ಮಾರ್ಟಿನ್ ಫರ್ಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಮಾಸ್ ಅವತಾರದಲ್ಲಿ ಧ್ರುವ್ ಸರ್ಜಾ ಕಾಣಿಸಿಕೊಂಡಿದ್ದಾರೆ.

ಉದಯ ಮೆಹ್ತಾ ಬಂಡವಾಳ ಹೂಡುತ್ತಿರುವ ಈ ಮಾಸ್ ಚಿತ್ರಕ್ಕೆ ಎ.ಪಿ,.ಅರ್ಜುನ್ ಆಕ್ಷ್ಯನ್ ಕಟ್ ಹೇಳಿದ್ದು, ಧ್ರುವ್ ಸರ್ಜಾ ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಸಿನಿಮಾಗೆ ಮಾರ್ಟಿನ್ ಎಂದು ಹೆಸರಿಡಲಾಗಿದ್ದು, ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಪಾತ್ರದಲ್ಲಿ ಧ್ರುವ್ ಸರ್ಜಾ ಕಾಣಿಸಿಕೊಳ್ಳುತ್ತಾರಾ ಎಂಬ ಮಾತು ಕೇಳಿಬಂದಿತ್ತು.

ಈಗ ಧ್ರುವ್ ಸರ್ಜಾ ಮಾರ್ಟಿನ್ ಫರ್ಸ್ಟ್ ಲುಕ್ ರಿವೀಲ್ ಆಗಿದ್ದು, ಕೈಯಲ್ಲಿ ಗ್ರೈನೆಡ್ ಹಿಡಿದು, ಅದರಲ್ಲಿ ಸಿಗರೇಟ್ ಹೊತ್ತಿಸಿಕೊಳ್ಳುತ್ತಿರುವ ರಗಡ್ ಲುಕ್ ನಲ್ಲಿ ಧ್ರುವ್ ಸರ್ಜಾ ಕಾಣಿಸಿಕೊಂಡಿದ್ದಾರೆ.

ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಕನ್ನಡ,ಹಿಂದಿ,ಮಲೆಯಾಳಂ,ತಮಿಳು,ತೆಲುಗು ಭಾಷೆಯಲ್ಲಿ ತೆರೆಗೆ ಬರಲಿದೆ. ಎ.ಪಿ.ಅರ್ಜುನ್ ಚೊಚ್ಚಲ ಸಿನಿಮಾದಲ್ಲೇ ಧ್ರುವ್ ಸರ್ಜಾಗೆ ಬ್ರೇಕ್ ನೀಡಿದ್ದು, ಎರಡನೇ ಬಾರಿಗೆ ಎ.ಪಿ.ಅರ್ಜುನ್ ಹಾಗೂ ಧ್ರುವ್ ಸರ್ಜಾ ಒಂದಾಗಿದ್ದಾರೆ.

RELATED ARTICLES

Most Popular