ಭಾನುವಾರ, ಏಪ್ರಿಲ್ 27, 2025
HomeBreakingBiggboss: ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಎಲಿಮಿನೇಶನ್….! ಫಿನಾಲೆಗೆ ಐವರು ಸ್ಪರ್ಧಿಗಳು…!!

Biggboss: ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಎಲಿಮಿನೇಶನ್….! ಫಿನಾಲೆಗೆ ಐವರು ಸ್ಪರ್ಧಿಗಳು…!!

- Advertisement -

ಬಿಗ್ ಬಾಸ್ ರಿಯಾಲಿಟಿ ಶೋ ಇನ್ನೇನು ಗ್ರ್ಯಾಂಡ್ ಫಿನಾಲೆ ಹಂತದಲ್ಲಿದೆ. ಈ ಮಧ್ಯೆ ಮಿಡ್ ವೀಕ್ ಎಲಿಮಿನೇಶನ್ ಬಳಿಕ ಐವರು ಸ್ಪರ್ಧಿಗಳು ಫಿನಾಲೆಗೆ ಎಂಟ್ರಿಕೊಟ್ಟಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಎಲಿಮಿನೇಶನ್ ಬಳಿಕ 6 ಸ್ಪರ್ಧಿಗಳು ಉಳಿದುಕೊಂಡಿದ್ದರು. ಈ ಪೈಕಿ ಒಬ್ಬರು ಹೊರ ಹೋಗಲಿದ್ದು, ಮಿಡ್ ವೀಕ್ ಎಲಿಮಿನೇಶನ್ ನಲ್ಲಿ ಒಬ್ಬರು ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಾರೆ ಎಂದು ಸುದೀಪ್ ಹೇಳಿದ್ದರು.

ಅಚ್ಚರಿಯ ಮಿಡ್ ವೀಕ್ ಎಲಿಮಿನೇಶನ್ ನಲ್ಲಿ ದಿವ್ಯಾ ಸುರೇಶ್ ಬುಧವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ಪ್ರಶಾಂತ್ ಸಂಬರಗಿ, ಮಂಜುಪಾವಗಡ್,ಕೆ.ಪಿ.ಅರವಿಂದ್,  ವೈಷ್ಣವಿ,ದಿವ್ಯಾಉರುಡುಗ ಫೈನಲ್ ಪ್ರವೇಶಿಸಿದ್ದಾರೆ.

ಮೊದಲ ಹಂತದಲ್ಲೇ ಸೇಫ್ ಆದ ಅರವಿಂದ್ ಹಾಗೂ ವೈಷ್ಣವಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟರು. ಬಳಿಕ ದಿವ್ಯ ಉರುಡುಗ,ಮಂಜುಪಾವಗಡ್ ಎಂಟ್ರಿಕೊಟ್ಟರು. ಆದರೆ ದಿವ್ಯ ಸುರೇಶ್ ಮತ್ತು ಪ್ರಶಾಂತ್ ಸಂಬರಗಿಗೆ ಬಿಗ್ ಬಾಸ್ ಟಾಸ್ಕ್ ಕೊಟ್ಟರು.

ಇಬ್ಬರು ಬಿಗ್ ಬಾಸ್ ಮನೆಯ ಎರಡು ಬಾಗಿಲಿನ ಮೂಲಕ ಹೊರಗೆ ಹೋಗಬೇಕು. ಬಳಿಕ ಬಜರ್ ಆದಾಗ ಯಾವ ಬಾಗಿಲು ತೆರೆಯಲಿದೆಯೋ ಆ ಬಾಗಿಲಿನ ಮೂಲಕ ಒಳಬಂದ ವ್ಯಕ್ತಿ ಫೈನಲ್ ಗೆ ಎಂದಿದ್ದರು.

ಪ್ರಶಾಂತ್ ಸಂಬರಗಿ ಮುಂದಿನ ಬಾಗಿಲು ತೆರೆದಿದ್ದರಿಂತ ಪ್ರಶಾಂತ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. ಇತ್ತೀಚಿಗೆ ಟಾಸ್ಕ್ ಗಳಲ್ಲಿ ನಿರಾಸಕ್ತಿ ತೋರಿದ್ದ ದಿವ್ಯಾ ಸುರೇಶ್ ಮನೆಯಿಂದ ಹೊರಬಿದ್ದಿದ್ದಾರೆ.

RELATED ARTICLES

Most Popular