ED RAID : ಮಾಜಿ ಸಚಿವ ರೋಶನ್‌ ಬೇಗ್‌ ನಿವಾಸ ಮೇಲೆ ಇಡಿ ದಾಳಿ : ದಾಖಲೆ ಪರಿಶೀಲನೆ

ಬೆಂಗಳೂರು : ಮಾಜಿ ಸಚಿವ ರೋಷನ್‌ ಬೇಗ್‌ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ಒಟ್ಟು ಆರು ಕಡೆಗಳಲ್ಲಿಇಡಿ ದಾಳಿ ನಡೆಸಿದ್ದು, ಸಿಆರ್‌ಪಿಎಫ್‌ ಭದ್ರತೆಯನ್ನು ಒದಗಿಸಲಾಗಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಐಎಂಎಯಿಂದ ಸುಮಾರು ೪೦ ಕೋಟಿ ರೂಪಾಯಿ ಹಣವನ್ನು ಪಡೆದು ಕೊಂಡಿದ್ದಾರೆ. ದಾಖಲೆಗಳಿಂದಲೂ ಹಣ ಪಡೆದಿರೋದು ಬಯಲಾಗಿದೆ. ಈಗಾಗಲೇ ಬ್ಯಾಂಕ್‌ ಅಕೌಂಟ್‌ಗಳನ್ನು ಸೀಜ್‌ ಮಾಡಲಾಗಿದ್ದು, ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶವನ್ನು ಹೊರಡಿಸಿತ್ತು.

ಇದೀಗ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡ ಈ ದಾಳಿಯನ್ನು ನಡೆಸಿದೆ. ಬೆಂಗಳೂರಿನ ಶಿವಾಜಿನಗರದಲ್ಲಿರುವ ರೋಷನ್‌ ಬೇಗ್‌ ನಿವಾಸ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಐಎಂಎ ಪ್ರಕರಣದ ಜೊತೆಗೆ ರೋಷನ್‌ ಬೇಗ್‌ ಅವರು ವಿದೇಶಿ ವ್ಯವಹಾರವನ್ನು ಹೊಂದಿರುವ ಕುರಿತು ದಾಖಲೆಗಳು ಲಭ್ಯವಾಗಿದೆ.

ಇದೀಗ ಇಡಿ ಅಧಿಕಾರಿಗಳು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಹಾಗೂ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಡಿ ದಾಳಿ ಸಂಜೆಯ ವರೆಗೂ ಕೂಡ ಮುಂದುವರಿಯುವ ಸಾಧ್ಯತೆಯಿದ್ದು, ಇನ್ನಷ್ಟು ಮಂದಿಯ ಮನೆಯ ಮೇಲೆಯೂ ನಡೆಯುವ ಸಾಧ್ಯತೆಯಿದೆ.

Comments are closed.